ಕಂಬಳದ ಉಳಿವಿಗಾಗಿ ಸರ್ವ ಪ್ರಯತ್ನ : ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ಕೃಷಿಯೊಂದಿಗೆ ನಂಟನ್ನು ಹೊಂದಿರುವ ಕರಾವಳಿಯ ಜಾನಪದ ಕ್ರೀಡೆ ಕಂಬಳವು ತಲೆತಲಾಂತರದಿಂದ ನಡೆದು ಬಂದ ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಕಂಬಳದ ಉಳಿವಿಗಾಗಿ ಸರ್ವಪ್ರಯತ್ನ ಮಾಡಲಾಗುವುದೆಂದು ಮೀನುಗಾರಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಮೋದ್ ಮಧ್ವರಾಜ್‍ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಬೆಂಗಳೂರಲ್ಲಿ ಕಾನೂನು ಮಂತ್ರಿ ಶ್ರೀ ಟಿ.ಬಿ ಜಯಚಂದ್ರ, ಅರಣ್ಯ ಮಂತ್ರಿ ಶ್ರೀ ರಮಾನಾಥ ರೈ, ಪಶುಸಂಗೋಪನಾ ಮಂತ್ರಿ ಶ್ರೀ ಎ.ಮಂಜು, ತಾನು ಹಾಗೂ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ರವರ ಉಪಸ್ಥಿಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಕಂಬಳ ಹೋರಾಟ ಸಮಿತಿಯ ವಿನಂತಿಯಂತೆ ನ್ಯಾಯಾಲಯದಲ್ಲಿ ಕಂಬಳದ ಪರವಾಗಿ ತೀರ್ಪು ಬರುವಲ್ಲಿ ಅನುಕೂಲವಾಗುವಂತೆ ಅಗತ್ಯವಿದ್ದ ಸರಕಾರಿ ಆದೇಶವನ್ನು ಹೊರಡಿಸಲಾಗಿದೆ. ತಾನು ಕೂಡ ವಿಧಾನ ಸಭೆ ಮತ್ತು ವಿಧಾನ ಪರಿಷತಿನಲ್ಲಿ ಇಲಾಖೆಯ ಪರವಾಗಿ ಕಂಬಳವನ್ನು ಕಾನೂನು ಬದ್ಧ ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದೇನೆ. ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರು ರಾಜ್ಯ ಸರಕಾರ ನ್ಯಾಯಾಲದಲ್ಲಿ ಕಂಬಳದ ಪರವಾಗಿನ ತೀರ್ಪು ಬರುವಲ್ಲಿ ಅಗತ್ಯವಿದ್ದ ಎಲ್ಲಾ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Yes – who cares if the city infrastructure stinks like Somalia. Our main priority should be to restore old traditions of animal abuse. Great leadership representing equally great population of coastal area!!
Mashallah, ya Rampa. U do have a point.
Masha allah
“Mashalllah…” writes Praveena Pinto
So, did Praveena return to Saudi Arabia ?
So, did Praveena return to Saudi? – Tooth Shakera
Lol. Poor rampaNNA didn’t get the drift when I wrote that “mashallah”. Instead, in typical knee-jerk fashion he thinks about his sasuraal in Saudi. 🙂