ಕಣ್ಣೂರು – ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಹಳಿಗೆ ಬಿದ್ದ ಯುವತಿ – ಬದುಕಿದ್ದೆ ಪವಾಡ

Spread the love

ಕಣ್ಣೂರು – ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಹಳಿಗೆ ಬಿದ್ದ ಯುವತಿ – ಬದುಕಿದ್ದೆ ಪವಾಡ

ಕಣ್ಣೂರು: ಚಲಿಸುತ್ತಿರುವ ರೈಲನ್ನು ಹತ್ತಬೇಡಿ ಎಂದು ರೈಲ್ವೆ ಇಲಾಖೆ ಎಷ್ಟೇ ಮನವಿ ಮಾಡಿದರೂ ಜನ ಮಾತ್ರ ಮತ್ತೆ ಮತ್ತೆ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂತಹುದೇ ಘಟನೆ ಕೇರಳ ಕಣ್ಣೂರಿನಲ್ಲಿ ನಡೆದಿದೆ. ಯುವತಿಯೊಬ್ಬಳು ಚಲಿಸುತ್ತಿದ ರೈಲು ಹತ್ತಲು ಹೋಗಿ ಪ್ಲಾಟ್‌ಫಾರ್ಮ್ ನಿಂದ ರೈಲು ಹಳಿಗೆ ಬಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಘಟನೆಯ ದೃಶ್ಯ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಮೈ ಜುಮ್ ಎನ್ನುವಂತಿದೆ. ಭಾನುವಾರ ಬೆಳಿಗ್ಗೆ ಸುಮಾರು 7.30 ರ ಸಮಯದಲ್ಲಿ ಯುವತಿಯೊಬ್ಬಳು ರೈಲಿನಲ್ಲಿ ಪ್ರಯಾಣಿಸಲು ರೈಲು ನಿಲ್ದಾಣಕ್ಕೆ ಬಂದಿದ್ದಾಳೆ ಆದರೆ ರೈಲು ಹೊರಡಲು ಕೆಲವೇ ಸಮಯ ಇರುವ ಹೊತ್ತಿಗೆ ಯುವತಿ ಪಕ್ಕದಲ್ಲೇ ಇದ್ದ ಅಂಗಡಿಯಲ್ಲಿ ತಿಂಡಿ ಖರೀದಿಸಲು ಬಂದಿದ್ದಾಳೆ ಅಷ್ಟೋತ್ತಿಗಾಗಲೇ ರೈಲು ಹೊರಟಿದೆ ಇತ್ತ ತಿಂಡಿ ಕೈಯಲ್ಲಿ ಹಿಡಿದು ದುಡ್ಡು ಕೊಡಬೇಕು ಎನ್ನುವಷ್ಟರಲ್ಲಿ ಯುವತಿ ರೈಲು ಚಲಿಸುತ್ತಿರುವುದನ್ನು ಕಂಡಿದ್ದಾಳೆ ಕೂಡಲೇ ಯುವತಿ ತಿಂಡಿ ಪ್ಯಾಕೆಟ್ ಅಂಗಡಿಯಾತನಿಗೆ ನೀಡಿ ರೈಲು ಹತ್ತಲು ಬಂದಿದ್ದಾಳೆ ಈ ವೇಳೆ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಯುವತಿ ಆಯತಪ್ಪಿ ಪ್ಲಾಟ್‌ಫಾರ್ಮ್ ನಿಂದ ಕೆಳಗೆ ಬಿದ್ದಿದ್ದಾಳೆ ಕೂಡಲೇ ಅಲ್ಲಿದ್ದ ಜನ ಯುವತಿಯ ರಕ್ಷಣೆಗೆ ಮುಂದಾದರೂ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಕೂಡಲೇ ರೈಲು ನಿಲ್ಲಿಸಿದ ಪರಿಣಾಮ ಯುವತಿ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾಳೆ.


Spread the love