ಕನಸುಗಳು ಆಲೋಚನೆಗಳಾಗುತ್ತವೆ – -ರೆ| ಡಾ| ಪ್ರವೀಣ್ ಮಾರ್ಟಿಸ್
ಮಂಗಳೂರು: ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿದಂತೆ “ಕನಸುಗಳು ಆಲೋಚನೆಗಳಾಗುತ್ತವೆ , ಆಲೋಚನೆಗಳು ಮುಂದಿನ ಬದುಕಿನ ಯೋಜನೆಗಳಾಗಿ ರೂಪುಗೊಳ್ಳುತ್ತವೆ. ಕನಸುಗಳ ಸೃಷ್ಟಿಯ ಮೂಲ ನೆನಪು. ನಮ್ಮ ಆದ್ಯತೆ ಇರಬೇಕಾದುದು ಉತ್ತಮ ಮನುಷ್ಯನಾಗಿ ಬದುಕುವುದರ ಬಗ್ಗೆ ಆಗ ಎಲ್ಲವೂ ಸಾಧ್ಯವಾಗುತ್ತದೆ” ಎಂದು ಸಂತ ಅಲೋಶಿಯಸ್ ಪದವಿ ಕಾಲೇಜಿನ ಪ್ರಾಂಶುಪಾಲ ರೆ| ಡಾ| ಪ್ರವೀಣ್ ಮಾರ್ಟಿಸ್ ಎಸ್.ಜೆ ಅವರು ಅಭಿಪ್ರಾಯಪಟ್ಟರು .
ಅವರು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ 2019ರ ಪ್ರೀ ಯುನಿಕ್ ಪ್ರತಿಭಾಷ್ವೇಣೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಲನಚಿತ್ರ ನಟಿಯರಾದ ಅದ್ವಿತಿ ಮತ್ತು ಅಶ್ಚಿತಿ ಶೆಟ್ಟಿ ಅವಳಿ ಸಹೋದರಿಯರು “ನಾವು ಬೆಳ್ಳಿಪರದೆಯ ತಾರೆಗಳಾಗಿ ಮಿಂಚಬೇಕಾದರೆ ಅಲೋಶಿಯಸ್ ಕಾಲೇಜಿನ ನೆನಪುಗಳು ಕಾರಣ ಇಲ್ಲಿಯ ನಿಸರ್ಗ , ಪ್ರಕೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಮಗೆ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಮನೋಸಾಮ್ರಾಜ್ಯವನ್ನು ಕಟ್ಟಲು ನೆರವಾಯಿತು. ಶಿಕ್ಷಣದೊಂದಿಗೆ ಸಾಂಸ್ಕೃತಿಕ ಏಕತೆ ಬಂದಾಗ ರಾಷ್ಟ್ರದ ಸಮಗ್ರತೆ ಸಾಧ್ಯ” ಎಂದರು.
ಸಂತ ಅಲೋಶಿಯಸ್ ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ| ಕ್ಲಿಫರ್ಡ್ ಸಿಕ್ವೇರಾ ಎಸ್.ಜೆ ಅವರು ತಮ್ಮ ಪ್ರಸ್ತಾವನಾ ನುಡಿಗಳಲ್ಲಿ “ಪ್ರಶಸ್ತಿ ಫಲಕಗಳು ಬಣ್ಣ ಮಾಸಬಹುದು ಆದರೆ ನೆನಪುಗಳು ಬದುಕಿನ ಕೊನೆಯವರೆಗೆ ಶಾಶ್ವತವಾಗಿರುತ್ತವೆ” ಎಂದರು.
ಸಂತ ಅಲೋಶಿಯಸ್ ಪ. ಪೂ ಕಾಲೇಜಿನ ವಿತ್ತಾಧಿಕಾರಿ ರೆ| ಫಾ| ವಿನೋದ್ ಪೌಲ್ ಎಸ್.ಜೆ, ಉಪಪ್ರಾಂಶುಪಾಲರಾದ ಶ್ರೀಮತಿ ಶಾಲೆಟ್ ಡಿಸೋಜಾ ಮತ್ತು ಶ್ರಿ ಮರಳೀಕೃಷ್ಣ ಜಿ.ಎಮ್, ಪ್ರಿ-ಯುನಿಕ್ ಸಂಯೋಜಕರಾದ ಶ್ರೀ ಡೆನ್ಝಿಲ್ ಮಚಾದೊ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಸಂಯೋಜಕಿ ಶ್ರೀಮತಿ ಆಶಾ ಡಿಸೋಜಾ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕಿ ಸಿಮೋನಾ ಫೆರ್ನಾಂಡಿಸ್ ವಂದಿಸಿದರು. ಕುಮಾರಿ ಸಿಮ್ರನ್ ವಸಂತ್ ಕಾರ್ಯಕ್ರಮ ನಿರ್ವಹಿಸಿದರು.