ಕನ್ನಡ ಆಲ್ಬಮ್ ಹಾಡಿಗೆ ಆಯ್ಕೆಯಾದ ಯುವನಟ ಉಡುಪಿಯ ಅಬ್ದುಲ್ ರೆಹಮಾನ್
ಉಡುಪಿ: ಬಾಲ್ಯದಿಂದಲೇ ಕಲೆಯನ್ನು ಕರಗತ ಮಾಡಿಕೊಂಡಿರುವ ತೆಂಕನಿಡಿಯೂರಿನ ಯುವಕ ಅಬ್ದುಲ್ ರೆಹಮಾನ್ “ ಉನ್ನತಿ ಫಿಲಂಸ್ “ ಬ್ಯಾನರ್ ರವರ ಪ್ರಥಮ ಕನ್ನಡ ಆಲ್ಬಮ್ ವೊಂದಕ್ಕೆ ಆಯ್ಕೆಯಾಗಿದ್ದಾರೆ.
ಬಾಲ್ಯದಿಂದಲೇ ಕಲೆಯ ಕಡೆಗೆ ಒಲವು ಮೂಡಿಸಿಕೊಂಡಿದ್ದ ಉಡುಪಿಯ ಯುವ ಪ್ರತಿಭೆ ಅಬ್ದುಲ್ ರೆಹಮಾನ್ ಇದೀಗ ತಮ್ಮ ಕಲಾ ಜಗತ್ತಿನ ಗೆಲುವಿನ ಒಂದೊಂದೇ ಹೆಜ್ಜೆಯನ್ನಿಡುತ್ತಿರುತ್ತಿದ್ದಾರೆ. ಯಕ್ಷಗಾನ , ನಾಟಕ , ನೃತ್ಯ ಹೀಗೆ ಹಲವಾರು ರಂಗಗಳಲ್ಲಿ ತನ್ನ ಪ್ರತಿಭೆಯನ್ನು ಪಸರಿಸುತ್ತಾ ಬೆಳೆದ ರೆಹಮಾನ್ “ ಗುಡ್ಡೆದ ಭೂತ “ ತುಳು ಸಿನೆಮಾದ ಮೂಲಕ ಹೊಸ ಕನಸಿಗೆ ಅಡಿಪಾಯವಿಟ್ಟರು.
ಅಲ್ಲಿಂದ ಹಿಂತಿರುಗಿ ನೋಡುವ ಪ್ರಮೇಯವೇ ಬಂದಿಲ್ಲ . ಸಾಲು ಸಾಲಾಗಿ ಮರಳು , ಅಕ್ಷ್ಯಮ್ಯ , ಸಮಯ ಸಂಚಾರಿ ಹಾಗೂ ನೈದಿಲೇ ಮುಂತಾದ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೋಸ್ಟಲ್ ವುಡ್ ನಲ್ಲೂ ಸದ್ದು ಮಾಡಲಿದ್ದಾರೆ. ಇದೀಗ “ ಉನ್ನತಿ ಫಿಲಂಸ್ “ ಬ್ಯಾನರ್ ರವರ ಪ್ರಥಮ ಕನ್ನಡ ಆಲ್ಬಮ್ ವೊಂದಕ್ಕೆ ಆಯ್ಕೆಯಾಗಿದ್ದಾರೆ.
ಮುಂಬಯಿ ಸಿನಿರಂಗದಲ್ಲಿ ಪಳಗಿದ ಉಡುಪಿ ಮೂಲದ ಆರುಂಧತಿ ಶೆಟ್ಟಿ ಯವರು ಉನ್ನತಿ ಫಿಲಂಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮ ಕೊಡುಗೆಯನ್ನು ನೀಡಲು ಉತ್ಸುಕರಾಗಿದ್ದು ಅದರ ಮೊದಲ ಪ್ರಯತ್ನವಾಗಿ ಒಂದು ಕನ್ನಡ ಆಲ್ಬಮ್ ವೊಂದನ್ನು ಹೊರತರಲಿದ್ದಾರೆ. ಇದಕ್ಕಾಗಿ ಕಲಾವಿದರನ್ನು ಆಯ್ಕೆ ಮಾಡಲು ಆಡಿಷನ್ ಕರೆದಾಗ ಅಬ್ದುಲ್ ರೆಹಮಾನ್ ಆಯ್ಕೆ ಆಗಿರುತ್ತಾರೆ. ಈ ಆಲ್ಬುಮ್ ನ ನಂತರ ಉನ್ನತಿ ಫಿಲಂಸ್ ನಲ್ಲಿ ಅನೇಕ ಕನ್ನಡ ಚಿತ್ರಗಳು ಬರಲಿದೆ ಮತ್ತು ಆ ಮೂಲಕವಾಗಿ ಹೆಚ್ಚಿನ ಪ್ರತಿಭೆಗಳಿಗೆ ಅವಕಾಶ ಸಿಗಲಿದೆ.
ನಟನೆಯೊಂದಿಗೆ ಅಬ್ದುಲ್ ರೆಹಮಾನ್ ಉಡುಪಿ ನಗರದ ಪ್ರತಿಷ್ಠಿತ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದಾರೆ.
ಉಡುಪಿಯ ಈ ಸಂಸ್ಹೆ ಹಾಗೂ ಯುವಪ್ರತಿಭೆ ಅಬ್ದುಲ್ ರೆಹಮಾನ್ ರ ಸಿನಿಪ್ರಯಾಣವು ಯಶಸ್ವಿಯಾಗಲಿ.