ಕರಾವಳಿ ಕುರುಬ ಸಮಾಜ (ರಿ) ಮಂಗಳೂರು ವತಿಯಿಂದ ಐವನ್ ಡಿಸೋಜ ರವರಿಗೆ ಸನ್ಮಾನ 

Spread the love

ಕರಾವಳಿ ಕುರುಬ ಸಮಾಜ (ರಿ) ಮಂಗಳೂರು ವತಿಯಿಂದ ಐವನ್ ಡಿಸೋಜ ರವರಿಗೆ ಸನ್ಮಾನ 

ಮಂಗಳೂರು: ಕುರುಬ ಸಮುದಾಯದ ವತಿಯಿಂದ ದ್ವಿತೀಯ ಬಾರಿಗೆ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾದ  ಐವನ್ ಡಿಸೋಜ ರವರಿಗೆ ಅಭಿನಂದಿಸಿ ಶುಭ ಕೊರಲಾಯಿತು.

ಮೊದಲನೆಯ ಬಾರಿ ಶಾಸಕರಾಗಿದ್ದಾಗ ತಮ್ಮ ಸಮಾಜದ ಬೆಳವಣಿಗೆಗೆ ನೀಡಿದ ಸಹಕಾರದ ಬಗ್ಗೆ ಸ್ಮರಿಸಿ , ಮುಂದಿನ ದಿನಗಳಲ್ಲಿ ಕುರುಬ ಸಮುದಾಯದ ಜನರಿಗೆ ರೇಶನ್ ಕಾರ್ಡ್ ಶೈಕ್ಷಣಿಕವಾಗಿ ಸ್ಕಾಲರ್ಶಿಪ್ ನ ಹಾಗೂ ಇತರ ಸಮಸ್ಯೆಯ ಬಗ್ಗೆ ವಿವರಿಸಿದರು,ಈ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಕುರುಬ ಸಮಾಜದ ನಾಯಕರು ಹಾಗೂ ಗೌರವಾಧ್ಯಕ್ಷರು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆನಂದ್ ರವರು ತಿಳಿಸಿದರು ,

ಈ ಸಂದರ್ಭದಲ್ಲಿ ಕರಾವಳಿ ಕುರುಬ ಸಮುದಾಯದ ಅಧ್ಯಕ್ಷರು ಕೆ ಎನ್ ಬಸವರಾಜಪ್ಪ ಗೌರವಾಧ್ಯಕ್ಷರು ಡಾಕ್ಟರ್ ಕೆ ಇ ಪ್ರಕಾಶ್ ನಿರ್ದೇಶಕರು ಬೆಂಗಳೂರು ಶಿವಾನಂದ ಯರಝೆರಿ ಕಾರ್ಯದರ್ಶಿ ನಿರಂಜನ್ ಉಪಾಧ್ಯಕ್ಷ ಕೆಬಿ ನಾಗರಾಜ್ ಕೋಶಾಧಿಕಾರಿ ಮಹೇಶ್ ಕಲ್ಲ ಹೊಲದ ಸಂಘಟನಾ ಕಾರ್ಯದರ್ಶಿ ನಾರಾಯಣ ಪಾಟೇಲ್ ಹಾಗೂ ಸಂಘದ ಸದಸ್ಯರುಗಳಾದ ಶರಣಪ್ಪ ಹಳ್ಳಿ ಕೆರೆ ,ಪರುಶುರಾಮ ಕಡೂರು, ಕರಿಯಪ್ಪ ಗೌಡರ, ಟಿಎಸ್ ಲೋಕೇಶ್, ಬಿ.ಎಚ್ . ಗದ್ದನಕೇರಿ, ಬರಮಪ್ಪ ಮುಂತಾದವರು ಉಪಸ್ಥಿತರಿದ್ದರು.


Spread the love