Spread the love
ಕರಿಂಜೆ ಶ್ರೀಗಳಿಗೆ ನಿಂದನೆ ಶಾಸಕರ ಅಹಂಕಾರದ ಪರಮಾವಧಿ
ಮಂಗಳೂರು : ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಅವರ ಬಗ್ಗೆ ಶಾಸಕ ಅಭಯ ಚಂದ್ರ ಜೈನ್ ಏಕವಚನದಲ್ಲಿ ನಿಂದಿಸಿರುವುದು ಅಹಂಕಾರದ ಪರಮಾವಧಿಯಾಗಿದೆ. ಹಿಂದೂಗಳ ತಾಳ್ಮೆಗೂ ಒಂದು ಮಿತಿಯಿದೆ. ಕಾಂಗ್ರೆಸ್ ನಾಯಕರ ಹಿಂದೂ ವಿರೋಧಿ ನೀತಿಗೆ ಜನತೆ ಮುಂದಿನ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಸ್ವಾಮೀಜಿ ವಿರುದ್ಧ ಭೂಕಬಳಿಕೆ ಆರೋಪ ಮಾಡಿರುವುದು ಖಂಡನೀಯ. ಭಕ್ತರ ಮನಸ್ಸಿಗೆ ಇದರಿಂದ ಅಪಾರ ನೋವಾಗಿದೆ. ಸಾರ್ವಜನಿಕವಾಗಿ ಈಗಾಗಲೇ ಹಲವು ಬಾರಿ ದುರ್ವರ್ತನೆ ತೋರಿರುವ ಶಾಸಕರು ಇದೀಗ ಸಂತರನ್ನು ಅವಹೇಳನ ಮಾಡುವ ಕಾರ್ಯಕ್ಕೆ ಇಳಿದಿದ್ದಾರೆ. ಜಿಲ್ಲೆಯ ಪ್ರಜ್ಞಾವಂತ ಜನತೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love