ಕರೋನಾ ಭೀತಿ; ಮನಾಪಾ ವತಿಯಿಂದ ಬೀದಿ ಬದಿಯ ಆಹಾರದ ತಳ್ಳು ಅಂಗಡಿಗಳನ್ನು ತೆರವು ಕಾರ್ಯಾಚರಣೆ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಬೀದಿ ಬದಿಯ ಆಹಾರದ ತಳ್ಳು ಅಂಗಡಿಗಳನ್ನು ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದೆ.
ಮಾರ್ಚ್ 14 ರಂದು ಆರೋಗ್ಯ ಅಧಿಕಾರಿ ಮತ್ತು ಪರಿಸರ ಎಂಜಿನಿಯರ್ ಮತ್ತು ಸಿಬ್ಬಂದಿಗಳು ಬಿಜೈ, ಮಣ್ಣಗುಡ್ಡ, ಲಾಲ್ಬಾಗ್, ಲೇಡಿಹಿಲ್, ಉರ್ವಾ ಸ್ಟೋರ್ಸ್, ಉರ್ವಾ ಮಾರ್ಕೆಟ್, ಕಂಕನಾಡಿ, ಕದ್ರಿ, ಸುರತ್ಕಲ್ ಮತ್ತು ಪಣಂಬೂರು ಪ್ರದೇಶಗಳಲ್ಲಿನ ಆಹಾರದ ತಳ್ಳು ಅಂಗಡಿಗಳನ್ನು ತೆರವು ಕಾರ್ಯಾಚರಣೆ ನಡೆಸಿದರು.
ಇದೇ ವೇಳೆ ಅಧಿಕಾರಿಗಳು ಹೋಟೆಲು ಗಳು, ರೆಸ್ಟೋರೆಂಟ್ ಗಳಲ್ಲಿ ನೈರ್ಮಲ್ಯದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಎಂಸಿಸಿ ಅಧಿಕಾರಿಯೊಬ್ಬರು ಮ್ಯಾಂಗಲೋರಿಯನ್ ಡಾಟ್ ಕಾಮ್ ಜೊತೆ ಮಾತನಾಡುತ್ತಾ, “ನಗರದಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಯಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಇಂದು, ಮಾರ್ಚ್ 14 ರ ಬೆಳಿಗ್ಗೆ, ನಾವು ನೈರ್ಮಲ್ಯಕ್ಕಾಗಿ ನಗರದ ಹೆಚ್ಚಿನ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳನ್ನು ಪರಿಶೀಲಿಸಿದ್ದೇವೆ. ಅಂತಹ ರೋಗಗಳನ್ನು ವೇಗವಾಗಿ ಹರಡುವ ಸಾಧ್ಯತೆ ಇರುವ ಎಲ್ಲಾ ಬೀದಿ ಬದಿಯ ಆಹಾರದ ತಳ್ಳು ಅಂಗಡಿಗಳನ್ನು ತೆರವು ಕಾರ್ಯಾಚರಣೆ ನಾವು ಮುಂದುವರಿಸುತ್ತೇವೆ. ”