ಕರ್ನಾಟಕ ಪ್ರದೇಶ ಯುವ ಜನತಾದಳ ದಕ್ಷಿಣಕನ್ನಡ ಜಿಲ್ಲಾ ಘಟಕದ ಕಾರ್ಯಕರ್ತರ ಸಭೆ

Spread the love

ಕರ್ನಾಟಕ ಪ್ರದೇಶ ಯುವ ಜನತಾದಳ ದಕ್ಷಿಣಕನ್ನಡ ಜಿಲ್ಲಾ ಘಟಕದ ಕಾರ್ಯಕರ್ತರ ಸಭೆ

ಮಂಗಳೂರು: ದ.ಕ ಜಿಲ್ಲಾ ಯುವ ಜನತಾದಳದ ಸಭೆಯು ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣಅಧ್ಯಕ್ಷತೆಯಲ್ಲಿ ಮಂಗಳೂರು ನಗರದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಯುವ ಜನತಾದಳ ಕಾರ್ಯಧ್ಯಕ್ಷರಾದ ಚಂದ್ರಶೇಖರ್ ಮಾತನಾಡಿ ಜಿಲ್ಲೆಯಲ್ಲಿ ಗಲಭೆಯಿಂದ ಯುವಕರು ದೂರ ಸರಿಯಾಬೇಕು. ಜಿಲ್ಲೆಯಲ್ಲಿ ನಡೆಯುವ ಆಹಿತಕರ ಘಟನೆಯಿಂದ ಮಂಗಳೂರುಗೆ ಕೆಟ್ಟ ಹೆಸರು ಬರುತ್ತಿದೆ. ಕಾಂಗ್ರೆಸ್, ಬಿಜೆಪಿ ಆಡಳಿತದಿಂದ ರಾಜ್ಯಕ್ಕೆ ದೇಶಕ್ಕೆ ಈ ಪಕ್ಷಗಳು ಮಾರಕವಾಗಿದೆ ಆದ್ದರಿಂದ ಮುಂದಿನ ಬಾರಿ ಹೆಚ್ ಡಿ ಕುಮಾರ್ ಸ್ವಾಮಿ ರವರನ್ನು ಈ ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಲು ನಮ್ಮ ಯುವ ಘಟಕ ಸಜ್ಜುಗೊಳ್ಳಬೇಕು ಎಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಈ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ಮೈಸೂರು ವಿಭಾಗದ ಯುವ ಕಾರ್ಯಧ್ಯಕ್ಷರಾದ ವಿ.ನರಸಿಂಹ ಮೂರ್ತಿ, ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞ, ರಾಜ್ಯ ನಾಯಕರುಗಳಾದ ಅಬ್ದುಲ್ ರವೂಪ್ ಪುತ್ತಿಗೆ, ವಸಂತ ಪೂಜಾರಿ, ಗೋಪಾಲಕೃಷ್ಣ ಅತ್ತಾವರ, ರಾಮ್ ಗಣೇಶ್, ಡಿ.ಬಿ ಹಮ್ಮಹಬ್ಬ,  ಶ್ರೀನಾಥ್ ರೈ, ಪೈಜಲ್, ಜಫಾರ್ ಖಾನ್, ಲಿಖೀತ್ ರಾಜ್, ದೀಪಕ್, ಸತ್ಯನಾರಾಯಣ್, ಮುನೀರ್ ಮುಕ್ಕಚೇರಿ,  ಸಹೀದ್ ಇಸ್ಮಾಯಿಲ್,  ಯುವ ಕ್ಷೇತ್ರ ಅಧ್ಯಕ್ಷರಾದ ಶಿವು ಸಲ್ಯಾನ್, ಜೀವನ್ ನಾರ್ಕೋಡ್, ಹರಿಪ್ರಸಾದ್, ರತೇಶ್ ಕರ್ಕೇರ, ಸೂರಜ್ ಗೌಡ, ಬಾಳೆಪುಣಿ ಕುಂಞ,  ನಾಸೀರ್ ಬೆಂಗ್ರ, ಸತ್ತಾರ್ ಬಂದರು, ಹಿತೇಶ್ ರೈ, ಸೀನಾನ್, ತೇಜಸ್ ನಾಯಕ್, ಪ್ರಸನ್ನ, ನಿಕೀತ್ ಕೂಟ್ಟಾರಿ ಉಪಸ್ಥಿತಿತರಿದ್ದರು. ಜಿಲ್ಲಾ ಮಹಾ ಕಾರ್ಯದರ್ಶಿ ಮಧುಸೂದನ ಗೌಡ ಸ್ವಾಗತಿಸಿ-ವಂದಿಸಿದರು


Spread the love