ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: 2024ನೇ ಸಾಲಿನ ʼಪುಸ್ತಕ ಬಹುಮಾನಕ್ಕೆʼ ಆಹ್ವಾನ

Spread the love

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: 2024ನೇ ಸಾಲಿನ ʼಪುಸ್ತಕ ಬಹುಮಾನಕ್ಕೆʼ ಆಹ್ವಾನ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2024ನೇ ಸಾಲಿನ ʼಪುಸ್ತಕ ಬಹುಮಾನʼಕ್ಕೆ ಬ್ಯಾರಿ ಭಾಷೆಯಲ್ಲಿ ಪ್ರಕಟಿತ ಸಾಹಿತ್ಯ ಪ್ರಕಾರದ ಎಲ್ಲ ಪುಸ್ತಕಗಳನ್ನು ಆಹ್ವಾನಿಸಲಾಗಿದೆ. ಇತರ ಭಾಷೆಗಳಿಂದ ಬ್ಯಾರಿಗೆ ಅನುವಾದ ಮಾಡಲಾಗಿರುವ ಕೃತಿಯನ್ನೂ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

ಪುಸ್ತಕ ಬಹುಮಾನವು ರೂ.25,000 ನಗದು, ಪ್ರಮಾಣ ಪತ್ರ, ಸ್ಮರಣಿಕೆ ಮತ್ತು ಫಲ ಪುಷ್ಪಹಾರಗಳನ್ನು ಒಳಗೊಂಡಿರುತ್ತದೆ. ಪ್ರತೀ ಪ್ರಕಾರದಲ್ಲೂ ಕನಿಷ್ಠ ಮೂರು ಬ್ಯಾರಿ ಪುಸ್ತಕಗಳು ಪ್ರಕಟವಾಗಿದ್ದಲ್ಲಿ ಮಾತ್ರ ಬಹುಮಾನದ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಆಸಕ್ತರು ಪ್ರತಿಯೊಂದು ಪುಸ್ತಕದ ನಾಲ್ಕು ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮಥ್ರ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೇ ಕಟ್ಟಡ, ಮಿನಿ ವಿಧಾನ ಸೌಧದ ಬಳಿ, ಮಂಗಳೂರು-575001 ಈ ವಿಳಾಸಕ್ಕೆ ಏಪ್ರಿಲ್ 30ರ ಒಳಗೆ ಸಲ್ಲಿಸುವಂತೆ ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments