ಕರ್ನಾಟಕ ಸಂಗೀತ ಕಾರ್ಯಾಗಾರ ಮತ್ತು ಸಂಗೀತ ಕಚೇರಿ ಉದ್ಘಾಟನೆ
ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಮಣಿ ಕೃಷ್ಣಸ್ವಾಮಿ ಅಕಾಡಮಿಯವರು ಶ್ರೀ ಚೆಂಗಲಪೇಟ್ ರಂಗನಾಥನ್ ಇವರ ಸಂಸ್ಮರಣೆಗಾಗಿ ಹಮ್ಮಿಕೊಂಡ ಕರ್ನಾಟಕ ಸಂಗೀತ ಕಾರ್ಯಾಗಾರ ಮತ್ತು ಸಂಗೀತ ಕಚೇರಿ ಕಾರ್ಯಕ್ರಮಗಳನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಭಾನುವಾರ ಉದ್ಘಾಟಿಸಿದರು.
ಬಳಿಕ ಆಶೀರ್ವಚನ ಅವರು ಸಂಗೀತೋಪಾಸನೆಯು ಚಿಕ್ಕ ಮಕ್ಕಳಿಗೆ, ವಿದ್ವಾಂಸರಿಗೆ, ಹಾವಾಡಿಗರಿಗೆ ಎಲ್ಲರಿಗೂ ಮನಸ್ಸಿಗೆ ಮುದ ನೀಡುವ ಹಾಗು ಆರಾಧಿಸುವ ಕಲೆ ಆಗಿದೆ.ರಾಮಾಯಣವನ್ನು ಲವಕುಶರು ಶಾಸ್ತ್ರೀಯ ಸಂಗೀತದ ಮೂಲಕ ಹಾಡಿ ಹೃಷಿ ಮುನಿಗಳಿಂದ ವರ ಪಡೆದಿದ್ದಾರೆ. ಆಂಜನೇಯನ ಸಂಗೀತದಿಂದ ಕಲ್ಲು ಬಂಡೆಗಳು ಕರಗುತಿದ್ದವು. ಆಚಾರ್ಯ ಮಧ್ವರು ಪ್ರಭುದ್ದ ಶಾಸ್ತ್ರೀಯ ಸಂಗೀತ ವಿದ್ವಾಂಸರಾಗಿದ್ದು ಅವರು ಹಾಡಿದರೆ ಮರ ಗಿಡಗಳು ಚಿಗುರುತಿದ್ದವು.ಇಂತಹ ಶಕ್ತಿ ಸಂಗೀತ ಕಲೆಗೆ ಇದ್ದು ಇದನ್ನು ಪೋಷಿಸಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯ.ಸಂಗೀತ ಸಾಧಕರಿದ್ದರು ಸಂಘಟನೆಗಳಿಲ್ಲದ ಸಮಯದಲ್ಲಿ ಉಡುಪಿಯ ರಾಗ ಧನ ಸಂಸ್ಥೆ , ಮಣಿ ಕೃಷ್ಣಸ್ವಾಮಿ ಅಕಾಡಮಿ ಇಂತಹ ಸಂಘ ಸಂಸ್ಥೆಯವರು ಶಾಸ್ತ್ರೀಯ ಸಂಗೀತ ಉಳಿಸುವುದಕ್ಕಾಗಿ ದೊಡ್ಡ ಕೊಡುಗೆ ನೀಡಿರುತ್ತಾರೆ ಎಂದರು.
ಪೇಜಾವರ ಕಿರಿಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉಪಸ್ಥಿತರಿದ್ದು ಆಶೀರ್ವಾದ ಮಾಡಿದರು. ರಂಜನಿ ಮೆಮೋರಿಯಲ್ ಟ್ರಸ್ಟಿನ ವಿ. ಅರವಿಂದ ಹೆಬ್ಬಾರ್,ನಾಗಸ್ವರ ವಿದ್ವಾಂಸ ಬಪ್ಪನಾಡು ನಾಗೇಶ್, ಪ್ರೊ. ಎಂ.ಎಲ್ .ಸಾಮಗ, ಯುವ ಕಲಾಮಣಿ ಪ್ರಾರ್ಥನಾ ಸಾಯಿ ನರಸಿಂಹನ್ ಸಭೆಯಲ್ಲಿ ಭಾಗವಹಿಸಿದ್ದರು.
ಮಣಿ ಕೃಷ್ಣಸ್ವಾಮಿ ಅಕಾಡಮಿಯ ಪಿ. ನಿತ್ಯಾನಂದ ರಾವ್ ಸ್ವಾಗತ ಮಾಡಿ ಕಾರ್ಯಕ್ರಮ ನಿರ್ವಹಿಸಿದರು.ಪ್ರೊ. ಎಂ.ಎಲ್ .ಸಾಮಗ ಧನ್ಯವಾದ ನೀಡಿದರು.