`ಕಲಾ ಕೊಂಕಣಿ’ ಚಿತ್ರಕಲಾ ಶಿಬಿರ ಸಮಾರೋಪ

Spread the love

ಕೊಂಕಣಿ ಅಕಾಡೆಮಿ ಭಾಷೆಗಾಗಿ ಕೆಲಸ ಮಾಡುವಾಗ ಚಿತ್ರಕಲೆ ಕೂಡಾ ಭಾಷಾ ಬೆಳವಣಿಗೆಯ ಅಂಗ ಎಂದು ಭಾವಿಸಿ ಇಂಥ ಒಂದು ಶಿಬಿರವನ್ನು ಆಯೋಜಿಸಿದ್ದಾರೆ. ಕೊಂಕಣಿ ಕಲೆಯ ವಿವಿಧ ಚಿತ್ರಗಳನ್ನು ಕ್ಯಾಲೆಂಡರ್ ಮೂಲಕ ಮನೆಮನೆಗೆ ತಲುಪಿಸುವ, ಈ ಮೂಲಕ ಚಿತ್ರಕಲೆಯನ್ನು ಪ್ರಚುರಪಡಿಸುವ ಈ ಕೆಲಸ ಸ್ತುತ್ಯರ್ಹ ಎಂದು ಹಿರಿಯ ಕಲಾವಿದ ಗಣೇಶ ಸೋಮಯಾಜಿ ಅಬಿಪ್ರಾಯಪಟ್ಟರು.

Kala konkani (1) Kala konkani (2) Kala konkani (3) Kala konkani art (1) Kala konkani art (2) Kala konkani art (3) Kala konkani art (4)

ಅವರು ಶಕ್ತಿನಗರದ ಕಲಾಂಗಣದಲ್ಲಿ 14.10.2015ರಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿರುವ `ಕಲಾ ಕೊಂಕಣಿ’ ಎಂಬ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಇವರು ವಹಿಸಿ, ಜನಸಾಮಾನ್ಯರಿಗೆ ಅರ್ಥವಾಗುವಂತಹ ಚಿತ್ರ ರಚಿಸಿ, ಕೊಂಕಣಿ ಕಲೆ ಮತ್ತು ಜೀವನ ರೀತಿಯ ವೈವಿಧ್ಯತೆಯ ಬಗ್ಗೆ ಜನರಲ್ಲಿ ಮಾಹಿತಿ ನೀಡುವಂತಹ ಅಕಾಡೆಮಿಯ ಈ ಪ್ರಯತ್ನಕ್ಕೆ ಕೈ ಜೋಡಿಸಿದ ಕಲಾವಿದರನ್ನು ಅಭಿನಂದಿಸಿದರು. ಈ ಚಿತ್ರಗಳನ್ನು 2016 ನೇ ಸಾಲಿನ ಕೊಂಕಣಿ ಕ್ಯಾಲೆಂಡರ್‍ನಲ್ಲಿ ಬಳಸಲಾಗುವುದು ಎಂದು ತಿಳಿಸಿದರು.

ಕಲಾವಿದೆ ಸ್ವಪ್ನ ನೊರೊನ್ಹಾ ಶಿಬಿರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ರಿಜಿಸ್ಟ್ರಾರ್ ಡಾ ಬಿ ದೇವದಾಸ ಪೈ ಸ್ವಾಗತಿಸಿ, ವಿಲ್ಸನ್ ಕಯ್ಯಾರ್ ಧನ್ಯವಾದವನ್ನಿತ್ತರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರ್ವಹಿಸಿದರು.

ಈ ಶಿಬಿರದಲ್ಲಿ ವೀಣಾ ಶ್ರೀನಿವಾಸ್ (ಕಾವಿಕಲೆ ಮತ್ತು ರಂಗೋಲಿ) ಸ್ವಪ್ನಾ ನೊರೊನ್ಹಾ (ಕ್ರೈಸ್ತ ಮದುವೆ ಮತ್ತು ಕುಂಬಾರಿಕೆ) ವಿಶ್ವಾಸ್ ಎಂ., (ಸಿದ್ದಿ ನೃತ್ಯ ಮತ್ತು ಸಿದ್ದಿ ದೈವಾರಾಧನೆ) ವಿಲ್ಸನ್ ಡಿಸೋಜ, (ಕ್ರಿಸ್ಮಸ್ ಆಟ ಮತ್ತು  ಜಿಎಸ್‍ಬಿಯವರ ಚೂಡಿ ಪೂಜೆ) ಜೀವನ್ ಸಾಲ್ಯಾನ್ (ಕೃಷಿ ಮತ್ತು ಕೊಂಕಣಿಯು 9 ನೃತ್ಯ ಪ್ರಕಾರಗಳು) ಹಾಗೂ ರವಿ ವಾಗ್ಳೆ (ಮೇಸ್ತ ಮತ್ತು ಖಾರ್ವಿ) ಇವರು ಈ ಕೃತಿಗಳನ್ನು ರಚಿಸಿರುವರು.


Spread the love