ಕಲ್ಲಡ್ಕ ಪ್ರಭಾಕರ ಭಟ್ ವಿಚಾರದಲ್ಲಿ ಕಾಂಗ್ರೆಸ್ ಆರೋಪ ನಿಜವಾಗಿದೆ ; ಸಚಿವ ಖಾದರ್
ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕಾರಣ ಎಂಬ ಕಾಂಗ್ರೆಸ್ ಆರೋಪಕ್ಕೆ, ರಿಕ್ಷಾ ಚಾಲಕ ಅಶ್ರಫ್ ಕೊಲೆ ಪ್ರಕರಣದ ಆರೋಪಿಗಳ ಹೇಳಿಕೆಯಿಂದ ಸಾಕ್ಷ್ಯ ದೊರೆತಂತಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಯು.ಟಿ.ಖಾದರ್ ಎಂದರು.
ಭಾನುವಾರ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಅಶ್ರಫ್ ಅವರ ಕೊಲೆಗೆ ಕೆಲವು ದಿನಗಳ ಹಿಂದೆ ಪ್ರಭಾಕರ ಭಟ್ ಸುದ್ದಿಗೋಷ್ಟಿಯಲ್ಲಿ ಅಶ್ರಫ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಾಣಿಸಿಕೊಂಡಿರುವುದು ಆರೋಪಕ್ಕೆ ಪುಷ್ಟಿ ನೀಡಿದೆ ಎಂದರು,
ಕೆಲವು ದಿನಗಳ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಅವರು ಗಲಭೆಗೆ ಸಂಬಂಧಿಸಿ ಸುದ್ದಿಗೋಷ್ಟಿ ನಡೆಸಿದ್ದರು. ಆ ಬಳಿಕ ಅಶ್ರಫ್ ಕೊಲೆ ನಡೆದಿದ್ದು, ಅಮಾಯಕರಾಗಿದ್ದ ಅಶ್ರಫ್ ಕೊಲೆ ಯಾವುದೇ ಪೂರ್ವ ದ್ವೇಷ ಇಲ್ಲದೆ ನಡೆದಿರುವಂತದ್ದು ಎಂದು ಪೋಲಿಸರು ಹೇಳಿದ್ದಾರೆ, ಆದ್ದರಿಂದ ಕೊಲೆಯ ಪ್ರಧಾನ ಆರೋಪಿ ಪ್ರಭಾಕರ ಭಟ್ಟರ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದ ಹಿನ್ನಲೆಯ ಕುರಿತು ಪೋಲಿಸರು ಸೂಕ್ತ ತನಿಖೆ ನಡೆಸಬೇಕಾಗಿದೆ ಎಂದರು.
ರಿಕ್ಷಾ ಚಾಲಕ ಅಶ್ರಫ್ ವಿಕಲಚೇತನಾರಾದ ಶೀನ ಪೂಜಾರಿಯವರು ತುಂಬಾ ನೆಚ್ಚಿಕೊಂಡಿದ್ದರು ತಮ್ಮ ಸಾಮಾಗ್ರಿಗಳನ್ನು ಖುದ್ದಾಗಿ ಅಶ್ರಫ್ ಅವರೇ ತಮ್ಮ ರಿಕ್ಷಾದಲ್ಲಿ ಇರಿಸಿ ಶೀನ ಪೂಜಾರಿಗೆ ಸಹಕರಿಸುವಂತಹ ಸೇವಾ ಮನೋಭಾವದಿಂದ ಶೀನ ಪೂಜಾರಿಯವರು ಅಶ್ರಫ್ ಅವರ ರಿಕ್ಷಾವನೇ ನೆಚ್ಚಿಕೊಂಡಿದ್ದರು. ಅಂತಹ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಮುಖ ಆರೋಪಿ ಪ್ರಭಾಕರ ಭಟ್ ಜೊತೆ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದದ್ದು ಹಲವಾರು ಸಂಶಯಗಳನ್ನು ಹುಟ್ಟು ಹಾಕುತ್ತದೆ ಎಂದರು.
ಧಾರ್ಮಿಕ ಮುಖಂಡನೆಂದು ಹೇಳಿಕೊಳ್ಳುವ ಕಲ್ಲಡ್ಕ ಪ್ರಭಾಕರ ಭಟ್ ಉದ್ವಿಗ್ನ ಪರಿಸ್ಥಿತಿಯಿದ್ದ ಸಂದರ್ಭದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಕೊಲೆ ಆರೋಪಿ ವೇದಿಕೆ ಹಂಚಿಕೊಂಡಿರುವುದು ಸಣ್ಣ ವಿಚಾರವಲ್ಲ. ಈ ಬಗ್ಗೆ ಸಮಾಜಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಸ್ಪಷ್ಟನೆ ನೀಡಬೇಕಾದ ಅವಶ್ಯಕತೆಯಿದೆ ಎಂದರು.
rss is to just procreate the things.