ಕಲ್ಲಡ್ಕದಲ್ಲಿ ಎಸ್.ಡಿ.ಪಿ.ಐ ವತಿಯಿಂದ ಬಿ.ಜೆ.ಪಿ ಸರಕಾರದ ರೈತ ವಿರೋಧಿ ಸುಗ್ರಿವಾಜ್ಞೆಗಳ ವಿರುದ್ಧ ಪ್ರತಿಭಟನೆ
ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಗೋಳ್ತಮಜಲ್ ಗ್ರಾಮ ಸಮಿತಿ ವತಿಯಿಂದ ಬಿಜೆಪಿ ನೇತ್ರತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸಿದ ರೈತ ವಿರೋಧಿ ಸುಗ್ರಿವಾಜ್ಞೆಗಳ ವಿರುದ್ಧ ಗೋಳ್ತಮಜಲು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಎಸ್.ಡಿ.ಪಿ.ಐ ಗೋಳ್ತಮಜಲು ಗ್ರಾಮ ಸಮಿತಿ ಅಧ್ಯಕ್ಷರಾದ ಜವಾಜ್ ಜೆ ಕೆ ಅಧ್ಯಕ್ಷತೆ ವಹಿಸಿದರು.ಈ ಸಂದರ್ಭ ಅತಿಥಿಗಳಾದ ಗ್ರಾಮ ಸಮಿತಿ ಕಾರ್ಯದರ್ಶಿ ಹಮೀದ್ ಅಲಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ಯೂಸುಫ್ ಹೈದರ್ ಮಾತಾನಾಡಿದರು
ಪಿ.ಎಫ್.ಐ ವಿಟ್ಲ ವಲಯ ಅಧ್ಯಕ್ಷರಾದ ಝಕಾರಿಯಾ ಗೋಳ್ತಮಜಲ್ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯ ಸತ್ತಾರ್ ಕಲ್ಲಡ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ಧರು. ಪ್ರತಿಭಟನಾಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಸರಕಾರದ ರೈತ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಕಷ್ಟದಲ್ಲಿ ಸಿಲುಕಿರುವ ರೈತ ತನ್ನ ಮನೆಯ ಪಕ್ಕದ ರೈತನಿಗೆ ಅತಿ ಕಡಿಮೆ ಬೆಲೆಗೆ ಮಾರುವ ಅನಿವಾರ್ಯತೆಯಿಂದ ತಪ್ಪಿಸಲು ಈ ಕಾಯಿದೆ ಸಹಾಯ ಮಾಡುತ್ತದೆ. ಹೆಚ್ಚಿನ ಬೆಲೆಗೆ ತನ್ನ ಜಮೀನು ಮಾರಲು ಸಹಾಯ ಮಾಡುತ್ತದೆ. ಈ ಕಾಯಿದೆ ವಿರೋಧಿಸುವ ರೈತರು ತಮ್ಮ ಜಮೀನು ಮಾರದಿರುವ ಶಪಥ ಮಾಡಿದರೆ ಸಾಕಷ್ಟೆ.ಯಾರು ಅವರ ಜಮೀನು ಕಿತ್ತು ಕೊಳ್ಳಲು ಸಾಧ್ಯವಿಲ್ಲ.