ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Spread the love

ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ನಗರದ ಬೊಕ್ಕಪಟ್ಣ ಬಳಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಬರ್ಕೆ ಪೋಲಿಸರು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ಉಳ್ಳಾಲ ನಿವಾಸಿ ನಿಯಾಝ (26) ಮತ್ತು ತೊಕ್ಕಟ್ಟು ಸೇವಂತಿಗುಡ್ಡೆಯ ಶಮೀರ್ (36) ಎಂದು ಗುರುತಿಸಲಾಗಿದೆ.

ಬಂಧಿತರಿಂದ ತಲಾ 12 ಗ್ರಾಂ ತೂಕದ 2 ಕರಿಮಣಿ ಸರ, 1 ಬೈಕ್, 4 ಮೊಬೈಲ್ ಗಳನ್ನು ವಶಪಡಿಸಿದ್ದು, ಇದರ ಮೌಲ್ಯ 1,11,000 ಎಂದು ಅಂದಾಜಿಸಲಾಗಿದೆ.

ಸರಗಳ್ಳತನ ಮತ್ತು ಕಳ್ಳತನ ಪ್ರಕರಣದ ವಿಶೇಷ ಕರ್ತವ್ಯದಲ್ಲಿ ನೇಮಕಗೊಂಡ ಬರ್ಕೆ ಅಪರಾಧ ವಿಭಾಗದ ಎಸ್ಸೈ ನರೇಂದ್ರ ಮತ್ತು ರೈಲ್ವೆ ರಕ್ಷಣಾ ದಳದ ಎಸ್ಶೈ ಭರತ್ ರಾಜ್ ಮತ್ತು ಸಿಬಂದಿ ವರ್ಗವು ಬುಧವಾರ ಬೊಕ್ಕಪಟ್ಣ ಚರ್ಚ್ ಬಳಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದರು. ಆವಾಗ ಇಬ್ಬರ ಬಳಿಯೂ ಒಂದೋಂದು ಚಿನ್ನದ ಕರಿಮಣಿ ಸರ ಪತ್ತೆ ಪತ್ತೆಯಾಗಿದೆ. ಅದರ ಬಗ್ಗೆ ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ವರ್ಷದ ಹಿಂದೆ ಬೈಕಿನಲ್ಲಿ ತೆರಳುವಾಗ ಗಾಂಧಿನಗರ ಕ್ರಾಸ್ ರಸ್ತೆಯಲ್ಲಿ ಒಂಟಿ ಮಹಿಳೆಯ ಚಿನ್ನದ ಕರಿಮಣಿ ಮತ್ತು ರೈಲ್ವೆ ಸ್ಟೇಶನ್ ನಲ್ಲಿ ಚಲಿಸುವ ರೈಲಿನಿಂದ ಮಹಿಳೆಯ ಕರಿಮಣಿ ಕಸಿದರು ಪರಾರಿಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸ್ಸೈ ಪ್ರಕಾಶ್ ಕೆ, ಸಿಬಂದಿಗಳಾದ ಗಣೇಶ್, ರಾಜೇಶ್, ಕಿಶೋರ್ ಕೋಟ್ಯಾನ್, ಜಯರಾಮ್, ಸುನಿಲ್ ಕುಮಾರ್ ದೇವರಾಜನ್, ಕಿಶೋರ್ ಪೂಜಾರಿ, ನಾಗರಾಜ್, ಮಹೇಶ್ ಪಾಟೀಲ್ ಪಾಲ್ಗೊಂಡಿದ್ದರು.


Spread the love
2 Comments
Inline Feedbacks
View all comments
Truth Seeker
7 years ago

“Niyaaza and Shameera…” – Report

I wonder how long would it take for our ‘journalists’ and ‘secular’ groups to acknowledge disproportionate involvement of one particular community in crimes starting from Vimaana nildaana to chain snatching in city area. In an intellectually honest society, this would have been openly discussed. Unfortunately, in a thirdworld country, such questions or discussions would be swiftly censored.

Sheikh
7 years ago

Bhopal: BJP IT cell member among 11 Pakistani spies nabbed by ATS http://www.abplive.in/india-news/bhopal-bjp-it-cell-member-among-11-pakistani-spies-nabbed-by-ats-491622 In a shocking incident, 11 Pakistani spies have been nabbed by Madhya Pradesh ATS on Friday. These spies have been accused of taking out Government of India’s important information and sending them across the border to Pakistan. Shockingly, one of the arrested spies was associated with ruling Bhartiya Janta Party’s IT cell. Dhruv Saxena joined BJP IT cell last year.In order to earn money he started sharing country’s secret information with ISI. It is very common to resort to crime like robbery when someone is hopeless and… Read more »