ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ರೂ. 1.37 ಲಕ್ಷ ಪಂಗನಾಮ

Spread the love

ಕಸ್ಟಮ್ಸ್ ಅಧಿಕಾರಿ ಎಂದು ನಂಬಿಸಿ ರೂ. 1.37 ಲಕ್ಷ ಪಂಗನಾಮ

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ಗೆಳೆತನ ಬೆಳೆಸಿ, ಉಡುಪಿಯ ವ್ಯಕ್ತಿಯೋರ್ವರಿಂದ ಸುಮಾರು ರೂ. 1.37 ಲಕ್ಷ ಹಣವನ್ನು ಲಪಟಾಯಿಸಿದ ಘಟನೆ ನಡೆದಿದೆ.

ಉಡುಪಿ ಅಂಬಲಪಾಡಿ ನಿವಾಸಿ ಸಂಜೀವ ಬಳ್ಕೂರು (56) ಎಂಬವರಿಗೆ ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಲೀಸಾಕೋಲ್ ಎಂಬ ಹುಡುಗಿಯ ಪರಿಚಯವಾಗಿದ್ದು, ಸಪ್ಟೆಂಬರ್ 13ರಂದು  ಆಕೆ ಲಂಡನ್‌‌‌ನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಅಲ್ಲಿನ ಕಸ್ಟಮ್ ಅಧಿಕಾರಿಗಳಿಂದ ವಿಚಾರಣೆಗೊಳಪಟ್ಟಿದ್ದು, ಆಕೆ ಹೊಂದಿರುವ 100 ಸಾವಿರ ಪೌಂಡ್ಸ್ ಮೊತ್ತದ ಡಿ.ಡಿ.ಯನ್ನು ಭಾರತದಲ್ಲಿ ಕೆಲವೊಂದು ವಸ್ತುಗಳನ್ನು ಹಾಗೂ ಚಿನ್ನಾಭರಣಗಳನ್ನು ಖರೀದಿಸುವ ಸಲುವಾಗಿ ತಂದಿದ್ದು, ಅದರ ಕ್ಲಿಯರೆನ್ಸ್‌‌ಗಾಗಿ ರೂಪಾಯಿ 42,500/- ಭರಿಸುವಂತೆ ವಿನಂತಿಸಿದಾಗ ಅವರು ಇಂಟರ್‌ನೆಟ್ ಬ್ಯಾಂಕಿಂಗ್ ಮುಖಾಂತರ ಹಾಗೂ ಚೆಕ್ ಮುಖಾಂತರ ಸದ್ರಿ ಹಣವನ್ನು ಆಕೆ ತಿಳಿಸಿರುವ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದು ಆ ಬಳಿಕ ಸಪ್ಟೆಂಬರ್ 14ರಂದು  ದೆಹಲಿಯ ವಿಮಾನ ನಿಲ್ದಾಣದಿಂದ ಕಸ್ಟಮ್ ಅಧಿಕಾರಿ ಎಂಬುವುದಾಗಿ ಒರ್ವ ಕರೆ ಮಾಡಿ ವೀಸಾ ಕೋಲ್ ಇವರನ್ನು ಗೆಸ್ಟ್ ಹೌಸ್‌‌ನಲ್ಲಿ ಇರಿಸಿದ್ದು, ಆಕೆ ತಂದಿರುವ ಡಿ.ಡಿ.ಯನ್ನು ಭಾರತೀಯ ರೂಪಾಯಿಗೆ ವರ್ಗಾವಣೆ ಮಾಡುವ ಸಂಬಂಧ ದೆಹಲಿ ಹೈ ಕೋರ್ಟ್‌ ವೇರಿಫಿಕೇಶನ್‌ಗಾಗಿ ರೂಪಾಯಿ 75,000/- ಹಣ ವರ್ಗಾವಣೆ ಮಾಡುವಂತೆ ತಿಳಿಸಿದ ಮೇರೆಗೆ ಸಂಜೀವ ಬಳ್ಕೂರು ರವರು ಚೆಕ್ ಮುಖಾಂತರ ವರ್ಗಾವಣೆ ಮಾಡಿದ್ದು, ಆ ಬಳಿಕ ಸಪ್ಟೆಂಬರ್ 15ರಂದು  ರಂದು ಚೆಕ್ ಕ್ಲಿಯರೆನ್ಸ್‌‌ಗಾಗಿ ತೆರಿಗೆ ಪಾವತಿಸಲು ರೂಪಾಯಿ 20,000/- ವನ್ನು ಎ.ಟಿ.ಎಂ. ಮುಖಾಂತರ ವರ್ಗಾಯಿಸಿದ್ದು, ಆದರೆ ಆ ಬಳಿಕ ಆರೋಪಿಯು ಯಾವುದೇ ಸಂಪರ್ಕಕ್ಕೆ ಸಿಗದೇ, ಮತ್ತು ಹಣ ಮರುಪಾವತಿಸದೇ ಸಂಜೀವ ಬಳ್ಕೂರು ರವರಿಗೆ ಒಟ್ಟು 1, 37,500/-ನ್ನು ಮೋಸ ಮಾಡಿರುವುದಾಗಿದೆ ಎಂದು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರು ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದುವರೆಸಿದ್ದಾರೆ.


Spread the love