ಕಸ್ಬಾ ಬೆಂಗರೆಯಲ್ಲಿ ಯುವಕರ ಮೇಲೆ ಹಲ್ಲೆ ಮೂವರ ಬಂಧನ
ಮಂಗಳೂರು: ನಗರದ ಹೊರವಲಯದ ಕಸ್ಬಾ ಬೆಂಗರೆಯಲ್ಲಿ ಮೂವರು ಅಮಾಯಕ ಯುವಕರ ಮೇಲೆ ತಂಡವೊಂದು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಸೋಮವಾರ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೆಂಗ್ರೆ ಆಸುಪಾಸಿನ ನಿವಾಸಿಗಳಾದ ಸಂಗಾರ್ ಸುವರ್ಣ, ಶಿವರಾಜ್ ಯಾಜೆ ವಿಜಿತ್, ತುಷಾರ್ ಆರ್ ಪುತ್ರನ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರು ಪಾಲ್ಗೊಂಡಿದ್ದು, ಅವರ ಬಂಧನಕ್ಕೆ ಪೊಲಿಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಎಪ್ರಿಲ್ 8ರಂದು ಕಸ್ಬಾ ಬೆಂಗರೆಯ ಮೈದಾನದಲ್ಲಿ ಕುಳಿತಿದ್ದ ಸ್ಥಳೀಯ ಯುವಕರಾದ ಅನ್ ವೀಝ್, ಮಹಮ್ಮದ್ ಶಿರಾಜ್ ಮತ್ತು ವಮಹಮ್ಮದ್ ಇಜಾಝ್ ಎಂಬವರು ಮೊಬೈಲ್ ವೀಕ್ಷಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಆಗಮಿಸಿದ 6 ಮಂದಿ ದುಷ್ಕರ್ಮಿಗಳು ಮಾರಕಾಯಧಗಳಿಂದ ಧಾಳಿ ನಡೆಸಿ ಪರಾರಿಯಾಗದ್ದರು. ಗಾಯಗೊಂಡವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಸ್ಬಾ ಬೆಂಗರೆಯಲ್ಲಿ ಯುವಕರ ಮೇಲೆ ಹಲ್ಲೆ ಮೂವರ ಬಂಧನ
Spread the love
Spread the love