ಕಾಂಗ್ರೆಸ್ ಪಕ್ಷ ಸಧೃಡಗೊಂಡಾಗ ಮತ್ತೆ ಅಧಿಕಾರಕ್ಕೆ ಬರವುದು ನಿಶ್ಚಿತ – ವಿನಯ್ ಕುಮಾರ್ ಸೊರಕೆ

Spread the love

ಕಾಂಗ್ರೆಸ್ ಪಕ್ಷ ಸಧೃಡಗೊಂಡಾಗ ಮತ್ತೆ ಅಧಿಕಾರಕ್ಕೆ ಬರವುದು ನಿಶ್ಚಿತ – ವಿನಯ್ ಕುಮಾರ್ ಸೊರಕೆ

ಉಡುಪಿ: ನೂತನವಾಗಿ ರಚನೆಗೊಂಡ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಪ್ರಸ್ತಾವಿಕವಾಗಿ ಮಾತನಾಡಿದ ಅಶೋಕ್ ಕುಮಾರ್ ಕೊಡವೂರುರವರು ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ವಿವಿಧ ಸಮಿತಿಗಳಿಂದ ಜನರ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನೂತನ ಸಮಿತಿ ಪದಾಧಿಕಾರಿಗಳು ನನಗೆ ಸಹಕಾರ ನೀಡುವರೆಂಬ ಭರವಸೆ ಇದೆ ಎಂದರು.

ನೂತನ ಪದಾಧಿಕಾರಿಗಳಿಗೆ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಪ್ರಮಾಣ ವಚನ ಭೋಧಿಸುತ್ತಾ ಹಿರಿಯರ ಹಾಗೂ ಕಿರಿಯರ ಸಮ್ಮಿಲನದೊಂದಿಗೆ ನೂತನ ಸಮಿತಿ ರಚನೆಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ ಪಕ್ಷವನ್ನು ಸಂಘಟಿಸಿ ಬಲವರ್ಧನೆಗೊಳಿಸಿದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ 135 ವರ್ಷಗಳ ಇತಿಹಾಸವಿದೆ. ಪಕ್ಷದ ಸಂಸ್ಥಾಪನಾ ದಿನದಂದೇ ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರಮಾಣ ವಚನ ನಡೆದಿರುವುದು ಪಕ್ಷ ಸಂಘಟಿಸಲು ಪೂರಕ ವಾತಾವರಣ ಕಲ್ಪಿಸಿದಂತಾಗಿದೆ. ದೇಶ ಇಂದು ಅಭಿವೃದ್ಧಿ ಪಥದತ್ತ ಮುಂದುವರಿದ್ದರೆ ಅದರಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಬಿಜೆಪಿ ತನ್ನ ಜನವಿರೋಧಿ ನೀತಿಯಿಂದ ಜನರಿಂದ ದೂರ ಸರಿಯುತ್ತಿದೆ. ಕೇಂದ್ರದ ಎಲ್ಲಾ ಕಾರ್ಯಕ್ರಮಗಳು ಜನರಲ್ಲಿ ಸಮಸ್ಯೆಯನ್ನು ಹುಟ್ಟುಹಾಕುತ್ತಿದೆ. ಈ ನಿಟ್ಟಿನಲ್ಲಿ ಪಕ್ಷ ಸದೃಡಗೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರವನ್ನು ಕಾಣಬಹುದು ಎಂದು ಹೇಳಿದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎ. ಗಪೂರ್ರವರು ಮಾತನಾಡುತ್ತಾ ಕೇಂದ್ರ ಸರಕಾರವು ಪ್ರತಿಯೊಂದು ಹೆಜ್ಜೆಯಲ್ಲಿಯೂ ಎಡವುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ನಿರುದ್ಯೋಗ ಸಮಸ್ಯೆ ಆರ್ಥಿಕ ಸಂಕಷ್ಟ ಮತ್ತು ಬೆಲೆ ಏರಿಕೆಗಳಿಂದ ತತ್ತರಿಸಿರುವಾಗ ಕೇಂದ್ರ ಸರಕಾರ ಅತೀ ಸೂಕ್ಷ್ಮ ವಿಷಯಗಳನ್ನು ಕೈಗೆತ್ತಿಕೊಂಡು ನಿಜವಾದ ಸಮಸ್ಯೆಗಳ ಬಗ್ಗೆ ಜನರು ಚಿಂತಿಸದೆ ದೂರ ಸರಿಯುವಂತೆ ಮಾಡುತ್ತಿದೆ. ಹಾಗಾಗಿ ಜನತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿರುವುದನ್ನು ಕಾಣುತ್ತಿದ್ದವೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷ ಪುನರಪಿ ಅಧಿಕಾರ ಪಡೆಯುವುದು ಅತೀ ಅಗತ್ಯ ಅದಕ್ಕಾಗಿ ಪಕ್ಷವನ್ನು ಸಂಘಟಿಸಲು ಒಗ್ಗೂಡೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನೀರೆ ಕೃಷ್ಣ ಶೆಟ್ಟಿ, ವಾಸುದೇವ ಯಡಿಯಾಳ್, ಸುಧಾಕರ ಕೋಟ್ಯಾನ್, ಭುಜಂಗ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ದಿನೇಶ್ ಪುತ್ರನ್, ಮಂಜುನಾಥ ಪೂಜಾರಿ, ಹೆಚ್. ಹರಿಪ್ರಸಾದ್ ಶೆಟ್ಟಿ, ಪ್ರವಿಣ್ ಶೆಟ್ಟಿ, ಶಬ್ಬಿರ್ ಅಹ್ಮದ್, ಮಲ್ಯಾಡಿ ಶಿವರಾಮ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಮಹಾಬಲ ಕುಂದರ್, ಸರಸು ಡಿ. ಬಂಗೇರಾ, ರೋಶನಿ ಒಲಿವರ್, ಮಮತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಹಬೀಬ್ ಆಲಿ, ಕೀರ್ತಿ ಶೆಟ್ಟಿ, ಕುಶಲ್ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಸತೀಶ್ ಅಮೀನ್ ಪಡುಕೆರೆ, ಮದನ್ ಕುಮಾರ್, ಪ್ರದೀಪ್ ಕುಮಾರ್ ಶೆಟ್ಟಿ, ಶಂಕರ್ ಕುಂದರ್, ವಿಜಯ್ ಹೆಗ್ಡೆ, ಹರೀಶ್ ಶೆಟ್ಟಿ ಪಾಂಗಳ, ಸುರೇಶ್ ನಾಯ್ಕ್, ಸತೀಶ್ ಪೂಜಾರಿ, ಚಂದ್ರ ಶೇಖರ್ ಶೆಟ್ಟಿ, ಡಾ. ಯಾದವ ರಾವ್, ದಿಲೀಪ್ ಹೆಗ್ಡೆ, ರಿಯಾಝ್ ಅಹ್ಮದ್, ಡಾ. ಪ್ರೇಮದಾಸ್, ತೇಜಪಾಲ್ ಸುವರ್ಣ, ಯತೀಶ್ ಕರ್ಕೇರ, ಹೆಚ್. ನಿತ್ಯಾನಂದ ಶೆಟ್ಟಿ, ಉಪೇಂದ್ರ ಮೆಂಡನ್, ಕೇಶವ ಕೋಟ್ಯಾನ್, ಉಪೇಂದ್ರ ಗಾಣಿಗ, ಕಿಶೋರ್ ಕುಮಾರ್ ಮೊದಲಾದರವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಬಿ. ನರಸಿಂಹ ಮೂರ್ತಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು, ಪ್ರಧಾನ ಕಾರ್ಯದರ್ಶಿ ಹರೀಶ್ ಕಿಣಿಯವರು ಧನ್ಯವಾದವಿತ್ತರು.


Spread the love