ಕಾಂಗ್ರೆಸ್ ಪಕ್ಷದ ಪಂಚ ನ್ಯಾಯ ಭರವಸೆ ದೇಶದ ಜನತೆಗೆ ಆಶಾಕಿರಣ – ರಮೇಶ್ ಕಾಂಚನ್
ಉಡುಪಿ: ರಾಜ್ಯದ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಸರಕಾರ ಬಂದ ಬಳಿಕ ನುಡಿದಂತೆ ನಡೆದಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಘೋಷಿಸಿರುವ ಪಂಚ ನ್ಯಾಯಗಳನ್ನು ಜಾರಿಗೆ ತಂದೇ ತರುತ್ತದೆ ಈ ಮೂಲಕ ದೇಶದ ಮಹಿಳೆಯರು, ಯುವಕರು ಕೃಷಿಕರಿಗೆ ಆಶಾಕಿರಣವಾಗಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
“ಮಹಿಳಾ ನ್ಯಾಯ” ಅಡಿಯಲ್ಲಿ ಬಡ ಮಹಿಳೆಯರಿಗೆ ವಾರ್ಷಿಕವಾಗಿ ರೂ 1 ಲಕ್ಷ ನೀಡುವುದು ಸರ್ಕಾರಿ ಉದ್ಯೋಗಗಳಲ್ಲಿ 50 ಪ್ರತಿಶತ ಮೀಸಲಾತಿಯನ್ನು ಖಚಿತಪಡಿಸುವುದು ಇವುಗಳಲ್ಲಿ ಸೇರಿವೆ. ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಊಟದ ಯೋಜನೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕೇಂದ್ರ ಸರ್ಕಾರದ ಬಜೆಟ್ ಹಂಚಿಕೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದೆ.
ಯುವ ನ್ಯಾಯ್ ಅಡಿಯಲ್ಲಿ ಯುವಕರಿಗೆ ಸರ್ಕಾರಿ ಉದ್ಯೋಗಗಳ ಭರವಸೆ, ಯುವಜನರಿಗೆ ಶಿಷ್ಯವೇತನ ಹಾಗೂ ಸ್ಟಾರ್ಟ್ ಅಪ್ ಉದ್ಯಮಿಗಳಿಗೆ ಸಹಾಯ ಮಾಡಲು 5000 ಕೋಟಿ ನೀಡುವುದಾಗಿ ಘೋಷಿಸಲಾಗಿದೆ
ರೈತ ನ್ಯಾಯ ಅಡಿಯಲ್ಲಿ ಸಾಲಮನ್ನಾ ಮತ್ತು ಸ್ವಾಮಿನಾಥನ್ ಆಯೋಗದ ಸೂತ್ರದ ಪ್ರಕಾರ ಎಮ್ ಎಸ್ ಪಿ ಗೆ ಕಾನೂನು ಸ್ಥಾನಮಾನ, ಪಾಲುದಾರಿಕೆ ನ್ಯಾಯದ ಅಡಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜನಗಣತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿ ಸಮುದಾಯದ ಜಾತಿಗಣತಿಯನ್ನು ನಡೆಸಲಾಗುವುದು. ಶ್ರಮೀಕ ನ್ಯಾಯದ ಅಡಿಯಲ್ಲಿ ದಿನಕ್ಕೆ ಕನಿಷ್ಠ ಕೂಲಿ ರೂ 400ಕ್ಕೆ ಏರಿಕೆಮಾಡುವುದಾಗಿ ಹೇಳಿದೆ.
ಈ ಹಿಂದೆ ರಾಜ್ಯದಲ್ಲಿ ಗ್ಯಾರಂಟಿ ಕಾರ್ಡ್ ಪ್ರತಿ ಮನೆ ಮನೆಗೂ ತಲುಪಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ.
ಅದರಂತೆ ಈಗ ಲೋಕಸಭಾ ಚುನಾವಣೆಗೂ ಕಾಂಗ್ರೆಸ್ ಪಕ್ಷ ‘ಪಾಂಚ್ ನ್ಯಾಯ್, ಪಚ್ಚೀಸ್ ಗ್ಯಾರಂಟಿ’ಯನ್ನು (ಪಂಚ ನ್ಯಾಯ, 25 ಭರವಸೆಗಳು) ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕರ್ತರು ಮಾಡಲಿದ್ದಾರೆ. ಕಾಂಗ್ರೆಸ್ನ ಎಲ್ಲ ನಾಯಕರು ಹಾಗೂ ಕಾರ್ಯಾಕರ್ತರು ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಲಿದ್ದಾರೆ. ನಮ್ಮ ಐಎನ್ಡಿಐಎ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಾರಿಗೊಳಿಸಲಿರುವ ಯೋಜನೆಗಳ ಬಗ್ಗೆ ಜನರಲ್ಲಿಅರಿವು ಮೂಡಿಸಲಿದ್ದಾರೆ
ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ಕಾಂಗ್ರೆಸ್ನ ಬದ್ಧತೆಯನ್ನು ಪ್ರಶ್ನಿಸುವ ಧೈರ್ಯ ಬಿಜೆಪಿಗಿಲ್ಲ. ಏಕೆಂದರೆ ಕರ್ನಾಟಕದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಕೇಂದ್ರದಲ್ಲಿ ಐಎನ್ಡಿಐಎ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬಂದರೆ, ಸದಾ ಜನಪರವಾಗಿ ಕೆಲಸ ಮಾಡಲಿದೆ ಪ್ರಧಾನಿ ಮೋದಿ ಅವರ ‘ಮೋದಿ ಕಿ ಗ್ಯಾರಂಟಿ’ ಬರೀ ಸುಳ್ಳಿನ ಕಂತೆಯಾಗಿದೆ. ಅವರ ಗ್ಯಾರಂಟಿ ಯೋಜನೆಗಳು ಎಂದಿಗೂ ಜನರನ್ನು ತಲುಪುವುದಿಲ್ಲ, ಆದರೆ ಕಾಂಗ್ರೆಸ್ ಗ್ಯಾರಂಟಿಗಳು ಸದಾ ನಂಬಿಕೆಗೆ ಆರ್ಹವಾಗಿದ್ದು ಪ್ರತಿಯೊಬ್ಬ ಮತದಾರ ಸಜ್ಜನ ರಾಜಕಾರಣಿ ಕೆ ಜಯಪ್ರಕಾಶ್ ಹೆಗ್ಡೆಯವರನ್ನು ಬೆಂಬಲಿಸಿದ್ದಲ್ಲಿ ಅವರು ಗೆದ್ದು ಬರಲು ಈ ಮೂಲಕ ಐಎನ್ಡಿಐಎ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬರಲು ಆಶೀರ್ವದಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.