ತಾಕತ್ತಿದ್ದರೆ ಸುನೀಲ್ ಕುಮಾರ್ ಅವರನ್ನು ಬಂಧಿಸಿ; ಶ್ರೀಶ ನಾಯಕ್
ಉಡುಪಿ: ಬಂಟ್ವಾಳದಲ್ಲಿ ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ಅವರು ನೀಡಿದ ಹೇಳಿಕೆಗೆ ಕಾಂಗ್ರೇಸಿಗರು ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸಿನ ಸರಕಾರವಿದೆ ತಾಕತ್ತಿದ್ದರೆ ಪೊಲೀಸರು ಸುನೀಲ್ ಕುಮಾರ್ ಅವರ ಮೇಲೆ ಕ್ರಮಕೈಗೊಳ್ಳಲಿ ಎಂದು ಉಡುಪಿ ಯುವ ಮೋರ್ಚಾ ಅಧ್ಯಕ್ಷರಾದ ಪೆರ್ಣಂಕಿಲ ಶ್ರೀಶ ನಾಯಕ್ ಅವರು ಸರಕಾರಕ್ಕೆ ಸವಾಲು ಹಾಕಿದ್ದಾರೆ.
ರಾಜ್ಯದ ಸಿದ್ದರಾಮಯ್ಯ ಸರಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಯಾವ ಮಟ್ಟಕ್ಕೂ ಇಳಿಯಬಹುದು ಎನ್ನುವುದಕ್ಕೆ ಸಚಿವ ರಮಾನಾಥ ರೈ ಇತ್ತೀಚೆಗೆ ನೀಡಿರುವ ಹೇಳಿಕೆಯೇ ಸಾಕ್ಷಿ. ಅಲ್ಲಾನ ಕೃಪೆಯಿಂದ ನಾನು ಇಲ್ಲಿ ಗೆಲ್ಲುತ್ತಿದ್ದೇನೆ ಎನ್ನುವ ಮೂಲಕ ಬಹುಸಂಖ್ಯಾತ ಹಿಂದೂಸಮಾಜವನ್ನು ಅವಮಾನಿಸುವ ಕೆಲಸವನ್ನು ಮಾಡಿದ್ದರು. ಇದರ ಮುಂದುವರೆದ ಭಾಗವಾಗಿ ಸುನೀಲ್ ಕುಮಾರ್ ಅವರು ಮುಂದಿನ ಬಾರಿ ರಾಮನ ಆಶಿರ್ವಾದವಿರುವವರು ಗೆಲ್ಲುತ್ತಾರೆ ಎಂದಿದ್ದಾರೆ. ಈ ಹೇಳಿಕೆಯ ಮೇಲೆ ಕ್ರಮ ಜರಗಿಸುವುದಾದರೆ ಮೊದಲು ರಮಾನಾಥ ರೈಯ ಮೇಲೆ ಕೇಸು ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.