ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ವೇಗ- ವಿನಯಕುಮಾರ್ ಸೊರಕೆ
ಉದ್ಯಾವರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಅಭಿವೃದ್ಧಿ ಕೆಲಸಗಳಿಗೆ ತೀರ್ವ ವೇಗ ದೊರೆತಿದೆ. ಜನತೆಯ ಬೇಡಿಕೆಗಳಿಗೆ ಸ್ಪಂದಿಸಿ ರಾಜ್ಯದಾದ್ಯಮತ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಮಾಜಿ ಸಚಿವರು ಕಾಪು ಶಾಸಕರಾದ ಶ್ರೀ ವಿನಯಕುಮಾರ್ ಸೊರಕೆಯವರು ಉದ್ಯಾವರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ 90 ಲಕ್ಷ ರೂಪಾಯಿಗಳ ಅನುದಾನದಿಂದ ಜರಗಿದ ಜರಗಲಿರುವ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆ ನೆರವೇರಿಸಿ ನುಡಿದರು.
ಅವರು ಮುಂದುವರೆಯುತ್ತ ಕೆರೆ ಅಭಿವೃದ್ಧಿಯಿಂದ ಅಂತರ್ಜಲ ಮಟ್ಟ ಏರಿಕೆಯಾಗಿ ಪರಿಸರದ ಜನರಿಗೆ ಉಪಯುಕ್ತವಾಗುತ್ತದೆ ಈ ನಿಟ್ಟಿನಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರವು ಜನಪರ ಕೆಲಸಗಳಲ್ಲಿ ತನ್ನನ್ನ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಉದ್ಯಾವರದ ಇನ್ನಷ್ಟು ಕೆರೆಗಳು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶಾಸಕರು ಪೆರ್ಲ ಕೆರೆ, ಕಲಾಯಿಬೈಲ್ ಸಾಲ್ಮರ ಕೆರೆ, ಭವಾನಿ ಶಂಕರ ಭಜನಾ ಮಂಡಳಿ ಅಡ್ಡರಸ್ತೆ ಇವುಗಳಿಗೆ ಗುದ್ದಲಿ ಪೂಜೆ ಮತ್ತು ಬಬ್ಬುಸ್ವಾಮಿ ದೇವಸ್ಥಾನ ರಸ್ತೆ, ಅಂಕುದ್ರು ಈಂದ್‍ಬೈಲ್ ರಸ್ತೆ, ಅಂಕುದ್ರು ಉಪ್ಪುಗುಡ್ಡೆ ರಸ್ತೆ ಕಾಮಗಾರಿಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನರಸಿಂಹ ಮೂರ್ತಿ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮತ್ತು ಊಡ ಸದಸ್ಯರಾದ ಗಿರೀಶ್ ಕುಮಾರ್, ಓಸ್ಕರ್ ಫೆರ್ನಾಂಡಿಸ್‍ರವರವ ಆಪ್ತ ಕಾರ್ಯದರ್ಶಿ ಉದ್ಯಾವರ ನಾಗೇಶ್ ಕುಮಾರ್, ಕೆ.ಪಿ.ಸಿ.ಸಿ ಸದಸ್ಯರಾದ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ದಿವಾಕರ ಕುಂದರ್, ಅಲೆವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹರೀಶ್ ಕಿಣಿ, ಊಡ ಸದಸ್ಯರಾದ ಪ್ರವೀಣ್ ಶೆಟ್ಟಿ, ಶ್ರೀಮತಿ ವೈಲೆಟ್, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ರಜನಿ, ಪಂಚಾಯತ್ ಸದಸ್ಯರುಗಳಾದ ಆಶಾ ಸುರೇಶ್, ಜುಡಿತ್ ಪಿರೇರಾ, ಲಾರೆನ್ಸ್ ಡೇಸಾ, ಮಿತೇಶ್ ಕುಮಾರ್, ದಿವಾಕರ್ ಬೊಳ್ಜೆ, ಸರೋಜ, ಕಿರಣ್ ಕುಮಾರ್(ಎ.ಪಿ.ಎಂ.ಸಿ. ಸದಸ್ಯರು), ಪುಷ್ಪ, ವಿಮಲ ಕೋಟ್ಯಾನ್ , ಗ್ಲ್ಯಾಡಿಸ್ ಮೆಂಡೋನ್ಸಾ, ರಾಜೀವಿ, ರಾಜೇಶ್ ಕುಂದರ್ ಮತ್ತು ಕೇಶವ ಬಂಗೇರ, ಅನ್ಸರ್ ಸತ್ತಾರ್, ರಮೇಶ್ ಕಾಂಚನ್ ಉದ್ಯಾವರ, ಸೋಮಶೇಖರ್ ಸುರತ್ಕಲ್, ಯು.ಆರ್. ಚಂದ್ರಶೇಖರ್, ಹಬೀದ್ ಅಲಿ, ಸುಂದರ್ ಕೋಟ್ಯಾನ್, ವಿಶ್ವನಾಥ್ ಪೂಜಾರಿ, ಸುಧಾಕರ ಕುಮಾರ್, ಸದಾಶಿವ ಕಟ್ಟೆಗುಡ್ಡೆ, ಲಕ್ಷ್ಮಣ ಪೂಜಾರಿ ಸಂಪಿಗೆನಗರ, ಶೇಖರ್ ಕೋಟ್ಯಾನ್, ಪ್ರತಾಪ್ ಕುಮಾರ್, ಸುಧಾಕರ್ ಕೋಟ್ಯಾನ್, ಗಣೇಶ್ ಕುಮಾರ್, ಆನಂದ ಕೊರಂಗ್ರಪಾಡಿ, ಜೀತೇಂದ್ರ ಪುರ್ಟಾಡೋ, ಸದಾಶಿವ ಕೋಟ್ಯಾನ್, ಶ್ರೀಧರ ಕಲಾಯಿಬೈಲ್, ಆನಂದ್ ಉದ್ಯಾವರ, ಜೀತೇಶ್ ಕುಮಾರ್, ಹರೀಶ್ ಜತ್ತನ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಿ.ಜೆ. ಜನಾರ್ದನ್, ತಾಲೂಕು ಪಂಚಾಯತ್ ಕಾರ್ಯನಿರ್ವವಣಾಧಿಕಾರಿ ಶ್ರೀ ಶೇಷಪ್ಪ, ಎ.ಡಿ. ಹರಿಕೃಷ್ಣ ಶಿವತ್ತಾಯ, ಅಭಿಯಂತರರಾದ ಕೃಷ್ಣ ಹೆಬ್ಸೂರು, ನಾಗರಾಜ್, ಪಿ.ಡಿ.ಒ ರಮಾನಂದ ಪುರಾಣಿಕ್ ಮತ್ತು ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.