ಕಾಪು: ಎಸ್ ಕೆ ಪಿ ಎ ವತಿಯಿಂದ ಕಟಪಾಡಿಯಲ್ಲಿ ವಾರ್ಷಿಕ ಕ್ರೀಡಾಕೂಟ ‘ಕೆಸರ್ದ ಗೊಬ್ಬುಲು’ 

Spread the love

ಕಾಪು: ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ನ ರಜತ ಸಂಭ್ರಮದ ಪ್ರಯುಕ್ತ ಸಂಘದ ಕಾಪು ವಲಯದ ನೇತೃತ್ವದಲ್ಲಿ ಕಟಪಾಡಿ ಕಂಬಳ ಗದ್ದೆಯ ಬಳಿ ರವಿವಾರ ಆಯೋಜಿಸಲಾದ ‘ಕೆಸರ್ದ ಗೊಬ್ಬುಲು’ ಜಿಲ್ಲಾ ವಾರ್ಷಿಕ ಕ್ರೀಡಾಕೂಟವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ಕುಮಾರ್ ಸೊರಕೆ ಉದ್ಘಾಟಿಸಿದರು.

SKPA_Kesarugadde_Katapadi 09-08-2015 13-26-18 SKPA_Kesarugadde_Katapadi 09-08-2015 13-26-28 SKPA_Kesarugadde_Katapadi 09-08-2015 13-26-48 SKPA_Kesarugadde_Katapadi 09-08-2015 13-37-49 SKPA_Kesarugadde_Katapadi 09-08-2015 14-47-20 SKPA_Kesarugadde_Katapadi 09-08-2015 14-47-49 SKPA_Kesarugadde_Katapadi 09-08-2015 14-54-07 SKPA_Kesarugadde_Katapadi 09-08-2015 14-54-45 SKPA_Kesarugadde_Katapadi 09-08-2015 16-15-28 SKPA_Kesarugadde_Katapadi 09-08-2015 16-15-42 SKPA_Kesarugadde_Katapadi 09-08-2015 16-16-06 SKPA_Kesarugadde_Katapadi 09-08-2015 16-16-23 SKPA_Kesarugadde_Katapadi 09-08-2015 16-17-09 SKPA_Kesarugadde_Katapadi 09-08-2015 16-17-48

ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಸಚಿವರು ಪಾರದರ್ಶಕ ಸಮಾಜವನ್ನು ಕಟ್ಟಿ ಬೆಳೆಸುವಲ್ಲಿ ಛಾಯಾಗ್ರಾಹಕರು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ಛಾಯಾಗ್ರಾಹಕರು ಸಮಾಜದಲ್ಲಿನ ಕೆಡುಕುಗಳನ್ನು ಸಚಿತ್ರವಾಗಿ ತೋರಿಸಿದಾಗ ಪರಿಣಾಮಕಾರಿಯಾಗುತ್ತದೆ. ಆದ್ದರಿಂದ ಛಾಯಾಗ್ರಾಹಕರು ಸಮಾಜದ ಕಣ್ಣುಗಳಿದ್ದಂತೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕಟಪಾಡಿ ಬೀಡು ಮಹಾಬಲ ಬಲ್ಲಾಳ್, ಕಟಪಾಡಿ ಗ್ರಾಪಂ ಅಧ್ಯಕ್ಷೆ ಜ್ಯೂಲಿಯಟ್ ವೀರಾ ಡಿಸೋಜ, ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸಮಾಜರತ್ನ ಕೆ.ಲೀಲಾಧರ ಶೆಟ್ಟಿ, ಎಸ್‌ಕೆಪಿಎ ಸಂಚಾಲಕ ವಿಠಲ ಚೌಟ ಭಾಗವಹಿಸಿದ್ದರು.

ಮುಂಬೈ ಕಸ್ಟಮ್ಸ್ ಅಸಿಸ್ಟೆಂಟ್ ಕಮಿಷನರ್ ಎರ್ಮಾಳು ರೋಹಿತ್ ಹೆಗ್ಡೆ ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ಉದ್ಯಮಿ ಕೆ.ಮನೋಹರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಟಪಾಡಿ ಬಂಟರ ಸಂಘದ ಅಧ್ಯಕ್ಷ ವಿನಯ ಬಲ್ಲಾಳ್ ಕ್ರೀಡಾ ಜ್ಯೋತಿಗೆ ಚಾಲನೆ ನೀಡಿದರು.

ಎಸ್‌ಕೆಪಿಎ ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಪದ್ಮಪ್ರಸಾದ್ ಜೈನ್, ಕರುಣಾಕರ ಗೌಡ, ಜಗನ್ನಾಥ ಶೆಟ್ಟಿ, ಆನಂದ ಬಂಟ್ವಾಳ, ಮಧು ಮಂಗಳೂರು, ವಿಲ್ಸನ್ ಗೋನ್ಸಾಲಿಸ್, ನಾಗೇಶ್ ಕೋಟ, ಗೋಪಾಲ್ ಸುಳ್ಯ, ಕಾಪು ವಲಯದ ಗೌರವಾಧ್ಯಕ್ಷ ಭಕ್ತ ಪ್ರಸಾದ್, ಕಾರ್ಯದರ್ಶಿ ಸಂತೋಷ್ ನಾಯ್ಕಾ, ಕ್ರೀಡಾ ಮೇಲ್ವಿಚಾರಕ ಪ್ರವೀಣ್ ಕುರ್ಕಾಲು, ಕ್ರೀಡಾ ಕಾರ್ಯದರ್ಶಿ ಉದಯ ಮುಂಡ್ಕೂರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಕೆ.ವಾಸುದೇವ ರಾವ್ ವಹಿಸಿದ್ದರು. ಕಾಪು ವಲಯಾಧ್ಯಕ್ಷ ಪ್ರಮೋದ್ ಸುವರ್ಣ ಶಂಕರಪುರ ವಂದಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.


Spread the love