Spread the love
ಕಾಪು ಠಾಣೆಯಲ್ಲಿ ಎ.ಎಸ್.ಐ ಬಳಿಕ ಕಾನ್ ಸ್ಟೇಬಲ್ ಗೆ ಕೂಡ ಕೋರೊನಾ ಪಾಸಿಟಿವ್ ದೃಢ
ಉಡುಪಿ: ಎರಡು ದಿನಗಳ ಹಿಂದೆಯಷ್ಟೆ ಕಾಪು ಪೊಲೀಸ್ ಠಾಣೆಯಲ್ಲಿ ಎ ಎಸ್ ಐ ಗೆ ಕೊರೋನಾ ಸೋಂಕು ದೃಢವಾದ ಬೆನ್ನಲ್ಲೇ ಅದೇ ಠಾಣೆಯಲ್ಲಿ ಮತ್ತೆ ಪುನಃ ಪೊಲೀಸ್ ಕಾನ್ ಸ್ಟೇಬಲ್ ಒರ್ವರಿಗೆ ಕೋವಿಡ್ -19 ಪಾಸಿಟಿವ್ ದೃಢಗೊಂಡಿದೆ.
9 ದಿನಗಳಿಂದ ಕ್ವಾರಂಟೈನ್ ನಲ್ಲಿ ಇದ್ದ ಕಾಪು ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಒರ್ವರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಿದ್ದು ಮಂಗಳವಾರ ಅದರ ವರದಿ ಬಂದಿದ್ದು ಪಾಸಿಟಿವ್ ದೃಢಗೊಂಡಿದೆ.
ಎರಡು ದಿನಗಳ ಹಿಂದೆ ಕೋಟ ದಿಂದ ಕಾಪುವಿಗೆ ಪ್ರತಿನಿತ್ಯ ಪ್ರಯಾಣಿಸುತ್ತಿದ್ದ ಎಸ್ ಎಸ್ ಐ ಒಬ್ಬರಿಗೆ ಪಾಸಿಟಿವ್ ದೃಢಗೊಂಡಿತ್ತು ಆದ್ದರಿಂದ ಠಾಣೆಯನ್ನು ತಾತ್ಕಾಲಿಕವಾಗಿ ಕ್ಲೋಸ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿತ್ತು.
ಇದರೊಂದಿಗೆ ಕಾಪು ಠಾಣೆಯಲ್ಲಿ ಇಬ್ಬರು ಪೊಲೀಸರು ಕೊರೋನಾ ಸೋಂಕು ದೃಢಪಟ್ಟಂತಾಗಿದೆ.
Spread the love