ಕಾಪು ಪುರಸಭೆಯಲ್ಲಿ ಕಾಂಗ್ರೆಸಿಗೆ ಜಿದ್ದಾಜಿದ್ದಿನ ಗೆಲುವು

Spread the love

ಉಡುಪಿ: ಕಾಪು ಶಾಸಕ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆಯವರ ಅತೀವ ಆಸಕ್ತಿಯಿಂದಾಗಿ ಅಸ್ತಿತ್ವಕ್ಕೆ ಬಂದ ಕಾಪು ಪುರಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಭಾರಿ ಜಿದ್ದಾಜಿದ್ದಿಯೊಂದಿಗೆ ಕಾಂಗ್ರೆಸ್ ಪಕ್ಷ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಸಫಲತೆಯನ್ನು ಕಂಡಿದೆ.
ಏಪ್ರಿಲ್ 24 ರಂದು ನಡೆದ ಚುನಾವಣೆಯ ಮತ ಏಣಿಕೆ ಬುಧವಾರ ಬೆಳಿಗ್ಗೆ ಉಡುಪಿ ತಾಲೂಕು ಕಛೇರಿಯಲ್ಲಿ ಜರುಗಿತು. ಮತ ಎಣಿಕೆಯ ಆರಂಭದಿಂದ ಅಂತ್ಯದ ತನಕವು ಫಲಿತಾಂಶ ಜಿದ್ದಾಜಿದ್ದಿಯಿಂದ ಕೂಡಿ ಒಟ್ಟು 23 ಪುರಸಭೆಯ ವಾರ್ಡುಗಳಲ್ಲಿ ಕಾಂಗ್ರೆಸ್ 12 ಸ್ಥಾನಗಳನ್ನು ಪಡೆದರೆ ಬಿಜೆಪಿ 11 ಸ್ಥಾನಗಳನ್ನು ಪಡೆದುಕೊಂಡಿತು.

image016kaup-tmc-counting-20140427 image012kaup-tmc-counting-20140427 image011kaup-tmc-counting-20140427 image001kaup-tmc-counting-20140427 image008kaup-tmc-counting-20140427 image001kaup-tmc-counting-20140427 image009kaup-tmc-counting-20140427

ಮತ ಏಣಿಕೆಯು ಆರಂಭದಿಂದಲೂ ಕುತೂಹಲದಿಂದ ಕೂಡಿದ್ದು, ಪ್ರತಿ ವಾರ್ಡಿನ ಫಲಿತಾಂಶ ಬಂದಾಗ ಒಂದು ಕಾಂಗ್ರೆಸ್ ಪಾಲಾದರೆ ಮತ್ತೊಂದು ಬಿಜೆಪಿ ಪಾಲಾಗುತ್ತಿತ್ತು. ಕೊನೆಯ ತನಕವು ಸಮನಾದ ಸ್ಥಾನಗಳನ್ನು ಪಡೆಯುತ್ತಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ 23 ನೇ ವಾರ್ಡಿನ ಫಲಿತಾಂಶವನ್ನು ಕಾಂಗ್ರೆಸ್ ಪರ ಪಡೆಯುವುದರೊಂದಿಗೆ ಪುರಸಭೆಯಲ್ಲಿ ಕಾಂಗ್ರೆಸ್ ತನ್ನ ಅಧಿಕಾರದವನ್ನು ದಾಖಲಿಸುವಲ್ಲಿ ಸಫಲವಾಯಿತು. ಅತೀ ಕುತೂಹಲ ಕೆರಳಿಸಿದ 23 ನೇ ಅಹಮ್ಮದಿ ಮೊಹಲ್ಲಾ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಲೀಲಾ 300 ಮತಗಳ ಅಂತರದಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಸೋಲಿಸುವಲ್ಲಿ ಸಫಲರಾದರು.
ಇತ್ತೀಚಿನ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಕಂಡು ಬಿಜೆಪಿ ಗೆಲುವಿನ ನಗೆ ಬೀರಿತ್ತು. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆಯವರನ್ನು ಬಿಜೆಪಿ ಅಸಮರ್ಥ ಉಸ್ತುವಾರಿ ಮಂತ್ರಿ ಎಂದು ಸದಾ ಟೀಕೆ ಮಾಡುತ್ತಲೇ ಇತ್ತು. ಹೊಸದಾಗಿ ರಚನೆಗೊಂಡ ಕಾಪು ಪುರಸಭೆಯ ಚುನಾವಣೆ ಒಂದು ಕಡೆಯಿಂದ ಸೊರಕೆಯವರಿಗೆ ಪ್ರತಿಷ್ಠೆಯ ಕಣ ಕೂಡ ಆಗಿತ್ತು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ಮಾತ್ರವಲ್ಲದೆ ಜಾತ್ಯಾತೀತ ಜನತಾದಳ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಮತ್ತು ಮೂರು ಮಂದಿ ಪಕ್ಷೇತರ ಅಭ್ಯರ್ಥಿಗಳು ಕೂಡ ಸ್ಪರ್ಧೆಯಲ್ಲಿದ್ದರೂ ಕೂಡ ಯಾರೂ ಕೂಡ ಖಾತೆ ತೆರೆಯುವಲ್ಲಿ ಸಫಲತೆಯನ್ನು ಕಂಡಿಲ್ಲ.


Spread the love