ಕಾವೂರಿನ ಟ್ರಾನ್ಸ್ ಫಾರ್ಮರ್ ಸರಿಪಡಿಸಲು ಇನ್ಯಾವ ಕಾಲ ಬರಬೇಕು ?
ಮಂಗಳೂರು: ಈ ಚಿತ್ರದಲ್ಲಿ ಕಾಣುವ ಟ್ರಾನ್ಸ್ ಫಾರ್ಮರ್ ಗಳು ಕಾವೂರಿನ ಗಾಂಧಿನಗರದ ಮಲ್ಲಿ ಲೇಔಟ್ ನಲ್ಲಿರುವ ಮ್ರತ್ಯುಕೂಪಗಳು. ಇವುಗಳ ಬಗ್ಗೆ ಚಿತ್ರಸಹಿತ ಇ ಮೇಲ್ ಗಳನ್ನು ಕಾವೂರು ಮೆಸ್ಕಾಂ ಕಛೇರಿಗೆ ಹಾಗೂ ಮೆಸ್ಕಾಂ ಆಡಳಿತ ನಿರ್ದೇಶಕರಿಗೆ 14 ತಿಂಗಳುಗಳಿಂದ ಬರೆದದ್ದು ಆಯಿತು. ಎಲ್ಲವೂ ಬಂಡೆ ಮೇಲೆ ನೀರೆರೆದಂತೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಟ್ರಾನ್ಸ್ ಫಾರ್ಮರ್ ಗಳಿಗೆ ಅಂತರಾಷ್ತ್ರೀಯ ಮಟ್ಟದ ಸುರಕ್ಷತೆಯನ್ನು ಅಳವಡಿಸಲಾಗಿದೆ. ಪ್ಲಾಸ್ಟಿಕ್ ಬಾಟ್ಲಿಯನ್ನು ಸುರಕ್ಷತೆಗಾಗಿ ಬಳಸಲಾಗಿದೆ.
ಇದು ಸಾವಿರಾರು ಜನರು ಅನೇಕ ಶಾಲಾ ಮಕ್ಕಳು ದಿನಂಪ್ರತಿ ಓಡಾಡುವ ಜಾಗವಾಗಿದ್ದು ಈ ಟ್ರಾನ್ಸ್ ಫಾರ್ಮರ್ ಗಳು ಬಹಳ ಕೆಳ ಬಾಗದಲ್ಲಿವೆ ಹಾಗೂ ಚಿಕ್ಕ ಮಕ್ಕಳು ಮುಟ್ಟುವ ಸಾದ್ಯತೆ ಜಾಸ್ತಿ ಇದೆ. ಸುರಕ್ಷತೆಗಾಗಿ ಲಕ್ಷಗಟ್ಟಲೆ
ಖರ್ಚು ಮಾಡುವ ಮೆಸ್ಕಾಂ ಗೆ ಇದನ್ನು ಸರಿಪಡಿಸಲು ಏನು ಕೇಡು ತಿಳಿಯದಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಇಂತಹ ಬೇಜವಾಬ್ದಾರಿತನ ಖಂಡಿತಾ ದುರ್ಘಟಣೆಗೆ ಕೈ ಬೀಸಿ ಕರೆಯುವಂತಿದ್ದು. ಮಳೆಗಾಲ ಬರುವಾಗ ಸುರಕ್ಷತೆಗಾಗಿ ಖರ್ಚು ಮಾಡುವ ಮೆಸ್ಕಾಂಗೆ ಇದನ್ನು ಸುರಕ್ಷಿತವಾಗಿಡುವುದಕ್ಕೆ ಇನ್ಯಾವ ಕಾಲ ಬರಬೇಕೋ ಕಾದು ನೋಡಬೇಕಾಗಿದೆ!