ಕಾವ್ಯ ಅನುಮಾನಸ್ಪದ ಸಾವು ; ನಿಷ್ಪಕ್ಷಪಾತ ತನಿಖೆಗೆ ಕರ್ನಾಟಕ ವಿದ್ಯಾರ್ಥಿ ಪರಿಷತ್ ಆಗ್ರಹ

Spread the love

ಕಾವ್ಯ ಅನುಮಾನಸ್ಪದ ಸಾವು ;  ನಿಷ್ಪಕ್ಷಪಾತ ತನಿಖೆಗೆ ಕರ್ನಾಟಕ ವಿದ್ಯಾರ್ಥಿ ಪರಿಷತ್  ಆಗ್ರಹ

ಉಡುಪಿ: ಮೂಡಬಿದ್ರೆಯ ಪ್ರತಿಭಾನ್ವಿತ ಕ್ರೀಡಾಪಟು, 10 ನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಘೂಡ ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆಗೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಪರಿಷತ್ ಉಡುಪಿ ವಲಯ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತನಾಡಿದ ಸಂಘಟನೆಯ ನಾಯಕರಾದ ಪ್ರಥ್ವಿರಾಜ್ ಶೆಟ್ಟಿ ಅವರು ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಅನುಮಾಸ್ಪದ ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಪ್ರಕರಣದ ಸತ್ಯಾಂಶ ಹೊರಬರಬೇಕು ಹಾಗೂ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ವಿಕಾಸ್ ಶೆಟ್ಟಿ, ಜಿಲ್ಲಾಧ್ಯಕ್ಷ ವಿರಾಜ್ ರಾಮ್ ಮೋಹನ್, ವಲಯ ಸಂಚಾಲಕ ಸಂಜಯ್ ಜೆ. ಪೂಜಾರಿ, ವಲಯಾಧ್ಯಕ್ಷ ಪ್ರತೀಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ, ಅಖೀಲೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಶಾಂಕ್ ಶೆಟ್ಟಿ, ಅಕ್ಷಯ್ ಪ್ರಭು, ಸಂಘಟನಾ ಕಾರ್ಯದರ್ಶೀ ಸುಶಾಂತ್ ಕುಂದರ್, ಅವಿನಾಶ್ ಪೂಜಾರಿ, ಕಾರ್ಯದರ್ಶೀ ಸಾಜನ್ ಪೂಜಾರಿ, ಆದಿತ್ಯ ಭಂಡಾರಿ, ನಕ್ಷತ್ರ ಪೂಜಾರಿ, ಅಭಿಷೇಕ್ ಶೆಟ್ಟಿ, ಮನೀಶ್, ಪ್ರಶಾಂತ್ ಕುಲಾಲ್, ವಿಶಾಲ್, ನಿತಿನ್ ಉಪಸ್ಥಿತರಿದ್ದರು.

 


Spread the love