ಕಾವ್ಯ ಆತ್ಮಹತ್ಯೆ: ಸಿಒಡಿಗೆ ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ ಯತ್ನ -ಬಂಧನ
ಮಂಗಳೂರು: ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಸಿಓಡಿ ತನಿಖೆಗೆ ಒತ್ತಾಯಿಸಿ ಅರೆ ಬೆತ್ತಲೆ ಪ್ರತಿಭಟನೆ ಮಾಡಿದ ಕಾವ್ಯ ತಾಯಿ ಸೇರಿದಂತೆ ಇತರ ಪ್ರತಿಭಟನಾಕಾರರನ್ನು ಶನಿವಾರ ಪೋಲಿಸರು ಬಂಧಿಸಿದರು.
ಜಸ್ಟೀಸ್ ಫಾರ್ ಕಾವ್ಯಾ ಹೋರಾಟ ಸಮಿತಿ ನೇತ್ರತ್ವದಲ್ಲಿ ನಗರದ ಎಬಿ ಶೆಟ್ಟಿ ಸರ್ಕಲ್ ಬಳಿ ಶನಿವಾರ ಅರೆಬೆತ್ತಲೆ ಪ್ರತಿಭಟನೆ ಆಯೋಜಿಸಲಾಗಿತ್ತು.
ನಗರದ ಹಂಪನಕಟ್ಟೆ ಸಿಗ್ನಲ್ ಬಳಿಯಿಂದ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಪೋಲಿಸರು ಅರೆಬೆತ್ತಲೆ ಪ್ರತಿಭಟನೆಯನ್ನು ನಡೆಸದಂತೆ ಪ್ರತಿಭಟನಕಾರರಿಗೆ ಸೂಚಿಸಿದ್ದರು ಕ್ಯಾರೆ ಅನ್ನದೆ ಎಬಿ ಶೆಟ್ಟಿ ಸರ್ಕಲ್ ಬಳಿ ಮೆರವಣಿಗೆಯಲ್ಲಿ ತೆರಳಿ ಅರೆಬೆತ್ತಲೆ ಪ್ರತಿಭಟನೆಗೆ ಮುಂದಾದಗ ಕಾವ್ಯಳ ತಾಯಿ ಸೇರಿದಂತೆ ಇತರ ಪ್ರತಿಭಟನಾಕಾರರನ್ನು ಬಂಧಿಸಿದರು. ಈ ವೇಳೆ ಕಾವ್ಯಾ ತಾಯಿ ಬೇಬಿಯವರು ಪ್ರತಿಭಟನಾಕಾರರನ್ನು ಪೋಲಿಸರು ಬಂಧಿಸದಂತೆ ತಡೆಯಲು ಯತ್ನಿಸಿದರು.
ಮೆರವಣಿಗೆಯಲ್ಲಿ ಜಸ್ಟೀಸ್ ಫಾರ್ ಕಾವ್ಯ ಸಮಿತಿಯ ಸಂಚಾಲಕ ದಿನಕರ ಶೆಟ್ಟಿ, ರಘುವೀರ್ ಸೂಟರ್ ಪೇಟೆ, ನಿರ್ಮಲ್ ಕುಮಾರ್, ರೋಬರ್ಟ್ ರುಜಾರಿಯೊ, ಜನಾರ್ಧನ್, ಹರೀಶ್ ಅಮ್ಡಾಡಿ, ನಾಗೇಶ್ ಹಾಗೂ ಇತರರು ಉಪಸ್ಥಿತರಿದ್ದರು.