ಕಾಶಿ ಹಾಗೂ ಮಥುರಾದಲ್ಲಿ ಮಸೀದಿಗಳನ್ನು ತೆರವುಗೊಳಿಸಿ ಮಂದಿರಗಳು ನಿರ್ಮಾಣವಾಗಲಿವೆ – ಸಚಿವ ಈಶ್ವರಪ್ಪ

Spread the love

ಕಾಶಿ ಹಾಗೂ ಮಥುರಾದಲ್ಲಿ ಮಸೀದಿಗಳನ್ನು ತೆರವುಗೊಳಿಸಬೇಕು – ಸಚಿವ ಈಶ್ವರಪ್ಪ

ಶಿವಮೊಗ್ಗ: ಮುಂದಿನ ದಿನಗಳಲ್ಲಿ ಕಾಶಿ ಹಾಗೂ ಮಥುರಾದಲ್ಲಿ ಕೂಡ ಮಸೀದಿಗಳು ದ್ವಂಸವಾಗಿ ಅಲ್ಲಿಯು ಭವ್ಯ ಮಂದಿರಗಳು ನಿರ್ಮಾಣ ಆಗುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳೀದ್ದಾರೆ.

ಅವರು ಬುಧವಾರ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದ ನಿಮಿತ್ತ ಇಲ್ಲಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.

ಕಾಶಿ ವಿಶ್ವನಾಥ, ಮಥುರಾ ಶ್ರೀಕೃಷ್ಣ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ತೆರಳಿದರು ಹಿಂದೂಗಳ ಗುಲಾಮತನ ಭಾಸವಾಗುತ್ತದೆ. ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಸ್ಥಿತಿ ಇದೆ. ನಲ್ಲಿರುವ ಮಸೀದಿಗಳು ಇಂತಹ ಮನೋಸ್ಥಿತಿ ಬಿಂಬಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿನ ಹಲವು ದೇವಸ್ಥಾನಗಳು ಧ್ವಂಸವಾಗಿವೆ. ಗುಲಾವ್ಯಗಿರಿಯ ಸಂಕೇತವಾದ ಅಯೋಧ್ಯಾ ಮಸೀದಿ ತೆರವುಗೊಳಿಸಿದಂತೆ ಇಲ್ಲಿನ ಮಸೀದಿಗಳನ್ನು ತೆರವುಗೊಳಿಸಬೇಕು. ಎಲ್ಲಾ ಶ್ರದ್ದಾ ಕೇಂದ್ರಗಳ ಮಸೀದಿ ಗಳಿಂದ ಮುಕ್ತವಾಗಬೇಕು ಎಂದರು.

‘ಲಾಠಿ ಗೋಲಿ ಖಾಯೆಂಗೆ ಮಂದಿರ್ ವಹಿ ಬನಾಯೇಂಗೆ’ ಎಂದು ಹೇಳಿದ ರೀತಿಯೇ ಇಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.


Spread the love