ಕಾಶೀ ಮಠಾಧೀಶರ ಚಾತುರ್ಮಾಸ ಸಂಪನ್ನ
ಮಂಗಳೂರು : ಶಾರ್ವರಿ ನಾಮ ಸಂವತ್ಸರದ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತ ವು ಇಂದು ಕೊಂಚಾಡಿ ಕಾಶೀ ಮಠದಲ್ಲಿ ಮೃತ್ತಿಕಾ ವಿಸರ್ಜನೆಯ ಬಳಿಕ ಸಂಪನ್ನ ಗೊಂಡಿತು.
ಬಳಿಕ ಶ್ರೀಗಳವರು ಸೀಮೋಲಂಘನ ಪ್ರಯುಕ್ತ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳಕ್ಕೆ ಭೇಟಿ ಇತ್ತು ಶ್ರೀ ದೇವರ ದರ್ಶನ ಪಡೆದರು
ನಂತರ ಮಂಗಳೂರು ಸಮಾಜ ಬಾಂಧವರ ಪರವಾಗಿ ಶ್ರೀ ದೇವಳದ ಆಡಳಿತ ಮಂಡಳಿಯವರಿಂದ ಪಾದ ಪೂಜೆ ಹಾಗೂ ನೆರೆದ ಸಮಾಜ ಬಾಂಧವರಿಗೆ ಶ್ರೀಗಳವರಿಂದ ಆಶೀರ್ವಚನ ನೆರವೇರಿತು .
ಈ ಸಂದರ್ಭದಲ್ಲಿ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್, ರಾಮಚಂದ್ರ ಕಾಮತ್ , ಲೆಕ್ಕ ಪರಿಶೋಧಕ ಜಗನ್ನಾಥ್ ಕಾಮತ್ , ಕೊಂಚಾಡಿ ಕಾಶೀ ಮಠದ ವಾಸುದೇವ್ ಕಾಮತ್ , ಕಸ್ತೂರಿ ಸದಾಶಿವ ಪೈ , ರತ್ನಾಕರ್ ಕಾಮತ್ ಹಾಗೂ ನೂರಾರು ಸಮಾಜ ಬಾಂದವರು ಉಪಸ್ಥಿತರಿದ್ದರು .
ಚಿತ್ರ : ಮಂಜು ನೀರೇಶ್ವಾಲ್ಯ