ಕಿತ್ತೂರು ರಾಣಿ ಚೆನ್ನಮ್ಮ ಜೀವನ ಸ್ಪೂರ್ತಿದಾಯಕ: ಮುಲ್ಲೈ ಮುಹಿಲನ್.ಎಂ.ಪಿ
ಮಂಗಳೂರು: ದೇಶಾಭಿಮಾನ ಮೆರೆದ ಚೆನ್ನಮ್ಮನ ತ್ಯಾಗ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ ಮತ್ತು ಶಕ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್. ಎಂ. ಪಿ ಹೇಳಿದರು
ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಷ್ಟದ ದಾರಿಯನ್ನು ದಾಟಿ ಕೆಚ್ಚೆದೆಯಿಂದ ಹೋರಾಡಿದ ವೀರ ರಾಣಿಯ ಜೀವನ, ಸಾಧನೆ,ಕೊಡುಗೆಗಳು ಎಲ್ಲಾ ಹೆಣ್ಣು ಮಕ್ಕಳಿಗೂ ಪ್ರೇರಣೆಯಾಗಬೇಕು ಎಂದು ಹೇಳಿದರು.
ನಾವು ದಿನನಿತ್ಯ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ನೆಪಗಳನ್ನು ಹೇಳುತ್ತೇವೆ ಹಾಗೆ ಬ್ರಿಟಿಷರ ಜೊತೆ ರಾಜಿ ಸಂಧಾನ ಮಾಡಿಕೊಳ್ಳಲು ಚೆನ್ನಮ್ಮನಿಗೆ ಅನೇಕ ಅವಕಾಶವಿತ್ತು. ಆದರೆ ದೇಶಾಭಿಮಾನ ಹೋರಾಡುವ ಮನೋಭಾವವನ್ನು ಸೃಷ್ಟಿಸಿತು ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ತಮ್ಮ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸಿದ ಬಗೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅವರು ದೇಶ ಸೇವೆಗಾಗಿ ತನ್ನ ಪ್ರಾಣಾರ್ಪಣೆ ಮಾಡಿದ್ದಾರೆ. ಅವರು ಮಾಡಿದ ತ್ಯಾಗದಿಂದಾಗಿ ಅವರನ್ನು ಸ್ಮರಿಸುತ್ತೇವೆ ಮತ್ತು ಪೂಜಿಸುತ್ತೇವೆ ಎಂದು ಹೇಳಿದರು.
ಕಿತ್ತೂರು ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪುರುಷರ ಸರಿಸಮಾನವಾಗಿ ಹೋರಾಡಿದ ಧೀಮಂತ ಮಹಿಳೆ ಇವರ ಜೀವನ ಹೋರಾಟ ನಮಗೆ ಸ್ಪೂರ್ತಿದಾಯಕವಾಗಿದೆ ಎಂದು ಕಾನೂನು ಕೋಶದ ಸಿಬ್ಬಂದಿ ಅಶ್ವಿನಿ ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್.ಜಿ ಸ್ವಾಗತಿಸಿದರು.