ಕಿರು ಸಾಲ ಮಿತಿಯನ್ನು ಏರಿಸುವಂತೆ ಸಚಿವೆ ಜಯಮಾಲರಿಗೆ ಉಡುಪಿ ಕೆಥೊಲಿಕ್ ಸ್ತ್ರೀ ಸಂಘಟನೆ ವತಿಯಿಂದ ಮನವಿ

Spread the love

ಕಿರು ಸಾಲ ಮಿತಿಯನ್ನು ಏರಿಸುವಂತೆ ಸಚಿವೆ ಜಯಮಾಲರಿಗೆ ಉಡುಪಿ ಕೆಥೊಲಿಕ್ ಸ್ತ್ರೀ ಸಂಘಟನೆ ವತಿಯಿಂದ ಮನವಿ

ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಡಾ|ಜಯಮಾಲಾ ಅವರು ಶನಿವಾರ ಉಡುಪಿ ಧರ್ಮಪ್ರಾಂತ್ಯದ ಧರ್ಮಾಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಈ ವೇಳೆ ಕೆಥೊಲಿಕ್ ಧರ್ಮಪ್ರಾಂತ್ಯದ ಕೆಥೊಲಿಕ್ ಸ್ತ್ರೀ ಸಂಘಟನೆಯ ಸದಸ್ಯರು ಸಚಿವರಿಗೆ ಮನವಿ ಸಲ್ಲಿಸಿ ಧರ್ಮಪ್ರಾಂತ್ಯದ ವತಿಯಿಂದ ಈಗಾಗಲೇ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಕಳೆದ ನಾಲ್ಕು ವರ್ಷಗಳಲ್ಲಿ ಕಿರು ಸಾಲ ಹಾಗೂ ಸಹಾಯ ಧನ ಯೋಜನೆಯಡಿ ಸಾಲವನ್ನು ಪಡೆದು ಆರ್ಥಿಕ ಸ್ವಾವಲಂಬನೆ ಪಡೆದು 100% ಸಾಲ ಮರುಪಾವತಿಯನ್ನು ಮಾಡಿರುತ್ತಾರೆ.

ಕಿರು ಸಾಲ ಹಾಗೂ ಸಹಾಯ ಧನ ಯೋಜನೆಯಡಿ ಮಹಿಳೆಯರು ಸಂಪೂರ್ಣ ಯೋಜನೆಯನ್ನು ಪಡೆಯಲು ಕೆಲವೊಂದು ಅಂಶಗಳು ತೊಡಕಾಗಿವೆ ಗ್ರಾಮೀಣ ಪ್ರದೇಶದಲ್ಲಿ ಪ್ರಸ್ತುತ 10000 ಅನುದಾನಕ್ಕೆ ರೂ 5000 ಸಹಾಯ ಧನ ಲಭ್ಯವಿದೆ. ಆದ್ದರಿಂದ ಸರಕಾರ ಸಾಲದ ಮಿತಿಯನ್ನು 10000 ದಿಂದ 15000 ಕ್ಕ ಹಾಗೂ ಸಹಾಯ ಧನದ ಮಿತಿಯನ್ನು 5000 ದಿಂದ 7000 ಕ್ಕೆ ಏರಿಸುವಂತೆ ಮನವಿ ಮಾಡಿದರು. ಅಲ್ಲದೆ ಸರಕಾರದ ಮಟ್ಟದಲ್ಲಿ ಶೈಕ್ಷಣಿಕ ಯೋಜನೆಗಳಿಗೆ ಆದಾಯ ಮಿತಿಯನ್ನು ಹೆಚ್ಚಿಸಿದಂತೆ ಸದ್ರಿ ಯೋಜನೆಗೆ ಹಳ್ಳಿಗಳ ಮಹಿಳಿಯರಿಗೆ ರೂ 1.5 ಲಕ್ಷ ಹಾಗೂ ಪಟ್ಟಣದ ಮಹಿಳೆಯರಿಗೆ 2 ಲಕ್ಷ ಆದಾಯ ಮಿತಿ ನಿಗದಿಗೊಳಿಸಬೇಕು.

ಮಹಿಳೆಯರು ಗುಂಪಿನಲ್ಲಿ ರೂ 10000 ಕಿರುಸಾಲವನ್ನು ಪಡೆಯುವಾಗ ಪಡಿತರ ಚೀಟಿ ನೋಂದಣಿ ಮಾಡಿದಾಗ ಇತರ ಯೋಜನೆಗೆ ಸಾಲ ಸೌಲಭ್ಯ ಪಡೆಯಲು ಅಸಾಧ್ಯವಾಗಿದ್ದು ಈ ವ್ಯವಸ್ಥೆಯನ್ನು ಕೈಬಿಡಬೇಕಾಗಿ ಮನವಿಯಲ್ಲಿ ಆಗ್ರಹಿಸಿದರು. ಅಲ್ಲದೆ ಬಡ್ಡಿ ರಹಿತಿ ಸಾಲದ ವ್ಯವಸ್ಥೆಯನ್ನು ಕೇವಲ ಸ್ತ್ರೀ ಶಕ್ತಿ ಗುಂಪುಗಳಿಗೆ ಮೀಸಲಿಡದೆ ಎಲ್ಲಾ ವರ್ಗದ ಬಡ ಮಹಿಳೆಯರ ಸ್ವಸಹಾಯ ಗುಂಪುಗಳಿಗೂ ನೀಡುವಂತೆ ಮನವಿ ಸಲ್ಲಿಸಿದರು.

ಇದೇ ವೇಳೆ ಕ್ರೈಸ್ತ ಅಭಿವೃದ್ಧಿ ನಿಗಮದ ಮೂಲಕ ಕ್ರೈಸ್ತ ಸಮುದಾಯಕ್ಕೆ ರೂ 175 ಕೋಟಿ ಅನುದಾನ ಮೀಸಲಿರಿಸಿದ್ದು ಯಾವುದೇ ರೀತಿಯ ಅನುದಾನ ಉಡುಪಿ ಧರ್ಮಪ್ರಾಂತ್ಯಕ್ಕೆ ಇದುವರೆಗೆ ಪಡೆಯುಲು ಸಾಧ್ಯವಾಗಿಲ್ಲ ಕೂಡಲೇ ಸಚಿವರು ಇದರ ಬಗ್ಗೆ ಗಮನ ಹರಿಸುವಂತೆ ಧರ್ಮಾಧ್ಯಕ್ಷರು ಮನವಿ ಮಾಡಿದರು.

ಈ ವೇಳೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೋ, ಕೆಥೊಲಿಕ್ ಸ್ತ್ರೀಸಂಘಟನೆ ಇದರ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾದ ಜೆನೆಟ್ ಬಾರ್ಬೊಜಾ, ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಸಂಪದದ ನಿರ್ದೇಶಕರಾದ ವಂ. ರೆಜಿನಾಲ್ಡ್ ಪಿಂಟೊ, ಸಂಘಟನೆಯ ಮಾಜಿ ಅಧ್ಯಕ್ಷರಾದ ಜುಡಿತ್ ಫೆರ್ನಾಂಡಿಸ್, ಕಾರ್ಯದರ್ಶಿ ಕ್ಲೊಟಿಲ್ಡಾ ಡಿ’ಸೋಜಾ, ಕೋಶಾಧಿಕಾರಿ ಕ್ಲಾರಾ ರೇಗೊ, ಸಂಯೋಜಕರಾದ ಸಿಸ್ಟರ್ ಜೆನೆಟ್ ಫೆರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love