ಕು .ರೆಶೆಲ್‌ ಬ್ರೆಟ್ನಿ ಫೆರ್ನಾಂಡಿಸ್‌ ಅವರ ಎರಡನೇ ಪುಸ್ತಕ ʻಭಾರತ್‌ @ 2047ʼ ಪ್ರಕಟಣೆ

Spread the love

ಕು .ರೆಶೆಲ್‌ ಬ್ರೆಟ್ನಿ ಫೆರ್ನಾಂಡಿಸ್‌ ಅವರ ಎರಡನೇ ಪುಸ್ತಕ ʻಭಾರತ್‌ @ 2047ʼ ಪ್ರಕಟಣೆ

ಯುವ ಲೇಖಕಿ, ವಾಗ್ಮಿ, ಕಾನೂನು ವಿದ್ಯಾರ್ಥಿನಿ ಹಾಗು ಅಂತರಾಷ್ಟ್ರೀಯ ,ರಾಷ್ಟ್ರೀಯ ರಾಜ್ಯ ಹಾಗೂ ಇತರ ಮಟ್ಟದಲ್ಲಿ ಸಾಧನೆ ಮಾಡಿದ ಕು .ರೆಶೆಲ್‌ ಬ್ರೆಟ್ನಿ ಫೆರ್ನಾಂಡಿಸ್‌ ಅವರ ಎರಡನೇ ಪುಸ್ತಕ ʻಭಾರತ್‌ @ 2047ʼ ಪ್ರಕಟಣೆಗೊಂಡಿದೆ .

ಭಾರತದ ಸ್ವಾತಂತ್ರ್ಯದ 100ನೇ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಎಷ್ಟು ಮುಖ್ಯ ಎಂಬ ವಿಚಾರಗಳನ್ನು ವಿವಿಧ ಕ್ಷೇತ್ರದಲ್ಲಿ ರೆಶೆಲ್‌ ಅವರ ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ತನೀಶಾ ಪ್ರಕಾಶನ ದೆಹಲಿ ಪ್ರಕಟಿಸಿರುವ ಈ ಪುಸ್ತಕದಲ್ಲಿ ಯುವಶಕ್ತಿಯ ಆಲೋಚನೆಗಳು ಪ್ರಕಟಗೊಂಡಿವೆ. ಪುಸ್ತಕವು 376 ಪುಟಗಳನ್ನು ಹೊಂದಿದೆ.

ಪುಸ್ತಕ ರೆಶೆಲ್‌ ತಮ್ಮ ಅಜ್ಜ ಎಸ್‌ಜಿಟಿ ಅಲೆಕ್ಸ್‌ ಮೋನಿಸ್‌ ಮೂಡುಬಿದಿರೆ ಇವರಿಗೆ ಅರ್ಪಿಸಿದ್ದಾರೆ. ಅಲೆಕ್ಸ್‌ ಮೋನಿಸ್‌ ಭಾರತೀಯ ವಾಯುಪಡೆಯಲ್ಲಿ 36 ಸೇವೆ ಸಲ್ಲಿಸಿದ್ದರು. 2ನೇ ಜಾಗತಿಕ ಯುದ್ಧದ ಕೊನೆಯ ಹಂತ, ಇಂಡೋ ಚೀನಾ ಸಂಘರ್ಷ 1962, ಇಂಡೋ ಪಾಕ್ ಸಂಘರ್ಷ 1965, 1971ರ ಯುದ್ಧ ಸಹಿತ ಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಅವರು ನಿರ್ವಹಿಸಿದ್ದರು.

ರೊನಾಲ್ಡ್ ಮತ್ತು ನ್ಯಾನ್ಸಿ ಫರ್ನಾಂಡಿಸ್ ಅವರ ಪುತ್ರಿಯಾಗಿರುವ ರೆಶೆಲ್, ಡಿಪಿಎಸ್, ಎಂಆರ್‌ಪಿಎಲ್ ಮಂಗಳೂರಿನಿಂದ ಶಾಲಾ ಶಿಕ್ಷಣವನ್ನು ಮತ್ತು ಲೇಡಿಹಿಲ್ ಪಿಯು ಕಾಲೇಜಿನಲ್ಲಿ ಮತ್ತು ಶ್ರೀ ಮಹಾವೀರ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ರೆಶೆಲ್ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ.‌


Spread the love