‘ಕುಂದ ಉತ್ಸವ’ದಲ್ಲಿ ತಡರಾತ್ರಿಯವರೆಗೆ ಧ್ವನಿವರ್ಧಕ ಬಳಕೆ : ಪ್ರಕರಣ ದಾಖಲು
ಕುಂದಾಪುರ: ಕೋಡಿ ಸಮುದ್ರ ತೀರದ ದಡದಲ್ಲಿ ‘ಕುಂದ ಉತ್ಸವ’ ಕಾರ್ಯಕ್ರಮದಲ್ಲಿ ತಡರಾತ್ರಿಯವರೆಗೆ ಡಿಜೆ ಸೌಂಡ್ ಬಳಸಿ ಕರ್ಕಶ ಶಬ್ದಗಳಿಂದ ಸಾರ್ವಜನಿಕರಿಗೆ ತೊಂದರೆ ನೀಡಿರುವ ಬಗ್ಗೆ ಕಾರ್ಯಕ್ರಮದ ಆಯೋಜಕರು ಮತ್ತು ಡಿಜೆ ಮ್ಹಾಲಕರ ವಿರುದ್ದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ. 12 ರಿಂದ 16ರ ವರೆಗೆ ಕುಂದಾಪುರ ಕೋಡಿ ಸಮುದ್ರ ತೀರದಲ್ಲಿ ಕುಂದ ಉತ್ಸವ ಕಾರ್ಯಕ್ರಮಕ್ಕೆ ಷರತ್ತುಬದ್ದ ಪರವಾನಿಗೆ ನೀಡಲಾಗಿದ್ದು ಫೆ. 16ರಂದು ಸಂಜೆ 7 ಗಂಟೆಗೆ ಉತ್ಸವ ಪ್ರಾರಂಭ ಆಗಿದ್ದು ಫೆ.17 ರ 00.50 ರ ವರೆಗೆ ಡಿಜೆ ಸೌಂಡ್ ಸಿಸ್ಟಂ ಬಳಿಸಿ ನಿಯಮ ಉಲ್ಲಂಘಿಸಲಾಗಿದ್ದು ಕರ್ಕಶ ಶಬ್ದಗಳಿಂದ ಸಾರ್ವಜನಿಕ ಉಪದ್ರವವನ್ನುಂಟು ಮಾಡಿ ತೊಂದರೆ ನೀಡಿರುವ ಕುಂದ ಉತ್ಸವ ಆಯೋಜಕರಾದ ಪ್ರದೀಪ ಬಸ್ರೂರು. ಹನೀಫ್ ಗುಲ್ವಾಡಿ, ಕೋಡಿ ಮುನಾಫ್, ಡಿಜೆ ರಂಜು ಮತ್ತು ಇತರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 19/2025 ಕಲಂ: 292, 112 BNS & ಕಲಂ: 109 K P Act ರಂತೆ ಪ್ರಕರಣ ದಾಖಲಾಗಿದೆ.