ಕುಂದಾಪುರ: ಅಕ್ರಮ ಮದ್ಯ ವಶ
ಉಡುಪಿ : ಮಂಗಳೂರು ಅಬಕಾರಿ ಜಂಟಿ ಆಯುಕ್ತೆ(ಜಾರಿ ಮತ್ತು ತನಿಖೆ) ಶೈಲಜಾ ಎ ಕೋಟೆರವರ ಆದೇಶಾನುಸಾರ ಉಡುಪಿ ಜಿಲ್ಲೆ, ಅಬಕಾರಿ ಉಪ ಆಯುಕ್ತ ಕೆ.ಬಿ ಮೇರುನಂದನ್ ನಿರ್ದೇಶನದಂತೆ, ಕುಂದಾಪುರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಚೇತನ್ ಕುಮಾರ್ ಮಾರ್ಗದರ್ಶನದಲ್ಲಿ, ಕುಂದಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕ ಕೆ ದೊಡ್ಡಯ್ಯ , ಅಬಕಾರಿ ರಕ್ಷಕರಾದ ಕೆ. ಶಂಕರ್, ಮುನಾಫ್ ಸಾಹೇಬ್, ವಾಹನ ಚಾಲಕರಾದ ವೆಂಕಟರಮಣಗೊಲ್ಲ, ಪ್ರದೀಪ್ ಮತ್ತು ದಾಳಿ ನೌಕರರಾದ ಸದಾಶಿವ ರವರು ಅಕ್ಟೋಬರ್ 20 ರಂದು ರಾತ್ರಿ 9 ಕ್ಕೆ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಕ.ಸಂ:2-2ಇರಲ್ಲಿರುವ ಸಾಯಿ ಲೀಲಾ ಬೀಡಾ ಸ್ಟಾಲ್ನ ಮೇಲೆ ದಾಳಿ ಮಾಡಿ, ಕುಂದಾಪುರ ತಾಲೂಕು, ತ್ರಾಸಿ ಗ್ರಾಮ, ಕಾವೇರಿ ನಿಲಯದ ರಾಘವೇಂದ್ರ ಬಿನ್: ಕಾಳ(36 ವರ್ಷ), ಕುಂದಾಪುರ ತಾಲೂಕು ಬಾವಿಕಟ್ಟೆ, ಪೊರ್ಟ್ ಬಂಗ್ಲೆ ರೋಡ್ ಹತ್ತಿರದ ಕೃಷ್ಣ ಬಿನ್:ಕಾಳ (43 ವರ್ಷ) ಎಂಬ ಆರೋಪಿಗಳಿಂದ ಒಟ್ಟು 10.260 ಲೀ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿರುತ್ತಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾರಾದೋತ್ಸವ ಪ್ರಯುಕ್ತ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆ ನಡೆಯಲಿರುವುದರಿಂದ ಈ ಪ್ರದೇಶದಲ್ಲಿ ಓಣ ದಿನ (ಡ್ರೈ ಡೇ) ಎಂದು ಘೋಷಿಸಿ ಆದೇಶ ಹೊರಡಿಸಿರುವ ಕಾರಣ ಬೀಡಾ ಅಂಗಡಿಗೆ ಬರುವ ಗ್ರಾಹಕರಿಗೆ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಹೊಂದಿದ್ದು, ಇದು ಕರ್ನಾಟಕ ಅಬಕಾರಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಕುಂದಾಪುರ ಉಪ ವಿಭಾಗದ ಅಬಕಾರಿ ನಿರೀಕ್ಷಕ ಕೆ.ದೊಡ್ಡಯ್ಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.