ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಎನ್‍ಸಿಸಿ ಲೇ.ಕರ್ನಲ್ ಭೇಟಿ

Spread the love

ಕೋಟ: ವಿದ್ಯಾರ್ಥಿಗಳಿಗೆ ಎನ್‍ಸಿಸಿಯು ಶಿಸ್ತಿನ ವಿದ್ಯಾರ್ಥಿಯಾಗುವುದನ್ನು ಕಲಿಸುವುದರ ಜತೆಗೆ ಸಮಾಜದಲ್ಲಿ ಗೌರವವು ದೊರೆಯುವಂತೆ ಮಾಡುತ್ತೇದೆ ಎಂದು 21 ಕರ್ನಾಟಕ ಬೆಟಾಲಿಯನ್‍ನ ಎನ್‍ಸಿಸಿ ಉಡುಪಿಯ ಅಧಿಕಾರಿ ಲೇ.ಕರ್ನಲ್ ರಾಮಾನಾಥ ಶೆಟ್ಟಿ ಹೇಳಿದರು. ಅವರು ಮಂಗಳವಾರ ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಗೆ ಆಗಮಿಸಿ ಎನ್‍ಸಿಸಿ ವಿದ್ಯಾರ್ಥಿಗಳ ನೊಂದಣೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.

ncc-col-kundapur

ಎನ್‍ಸಿಸಿಯಲ್ಲಿ ದೇಶಪ್ರೇಮ ಮೂಡುವುದಲ್ಲದೇ ಸೈನಿಕರಾಗಿ ದೇಶ ಕಾಯುವ ಪ್ರಜ್ಞೆ ವಿದ್ಯಾರ್ಥಿ ಜೀವನದಲ್ಲೇ ಮೂಡುತ್ತದೆ. ನಾವೆಲ್ಲ ನಮ್ಮ ಸಂಸ್ಕತಿ, ಆಚಾರ ವಿಚಾರಗಳನ್ನು ಪಾಲಿಸಿ ಗುರುಹಿರಿಯರನ್ನು ಗೌರವಿಸಿ ಒಳ್ಳೆಯ ವಿದ್ಯಾರ್ಥಿಗಳಾಗಿ ಬಾಳಿ ಮುಂದಿನ ದಿನಗಳಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎನ್‍ಸಿಸಿಯ ಜೆಸಿಒ ಸುರೇಶ್ ಸಿಂಗ್, ಹವಾಲ್ದಾರ್‍ರಾದ ಚಿದಾಂಗ್ ಶರ್ಫ, ವಿಮಲ್ ರಾಯ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಚೇತನಾ ಸ್ವಾಗತಿಸಿದರು. ಎನ್‍ಸಿಸಿ ಅಧಿಕಾರಿ ಭಾಸ್ಕರ್ ಗಾಣಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Spread the love