ಕುಂದಾಪುರಲ್ಲೊಂದು ಸಿಂಪಲ್ಲಾದ ದಲಿತ ಯುವಕ, ಮುಸ್ಲಿಂ ಯುವತಿಯ ಮದುವೆ ಸ್ಟೋರಿ!
ಕುಂದಾಪುರ: ಒಂದೇ ಕೇರಿಯ ದಲಿತ ಸಮುದಾಯದ ಯುವಕ ಮತ್ತು ಮುಸ್ಲಿಂ ಸಮುದಾಯದ ಯುವತಿ ಪರಸ್ಪರ ಧರ್ಮಗಳ ಎಲ್ಲೆ ಮೀರಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಕುಂದಾಪುರದಲ್ಲಿ ಹೊಸ ಮುನ್ನುಡಿ ಇಟ್ಟ ವಿನೂತನ ಘಟನೆಗೆ ಹಲವಾರು ಮಂದಿ ಮಂಗಳವಾರ ಸಾಕ್ಷಿಯಾದರು.
ಕುಂಭಾಶಿ ವಿನಾಯಕ ನಗರ ಜನತಾ ಕಾಲನಿ ನಿವಾಸಿ ದಲಿತ ಯುವಕ ವಿವೇಕ್(26) ಹಾಗೂ ಅದೇ ಕಾಲನಿಯ ಮುಸ್ಲಿಂ ಯುವತಿ ಸಲ್ಮಾ(22) ಪರಸ್ಪರ ಪ್ರೀತಿಸಿದ್ದು ಯುವತಿಯ ಮನೆಯಲ್ಲಿನ ವಿರೋಧವನ್ನು ಲೆಕ್ಕಿಸದೆ ಪ್ರೀತಿಸಿದ ಯುವಕನ ಜೊತೆಗೆ ಬದುಕುವ ನಿರ್ಧಾರ ಕೈಗೊಂಡಿದ್ದಾಳೆ.
ಕುಂದಾಪುರದಲ್ಲಿ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿವೇಕ್ ಹಾಗೂ ಖಾಸಗಿ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಲ್ಮಾ ಜೊತೆಗೆ ಎರಡು ವರ್ಷಗಳ ಗಾಢ ಪ್ರೀತಿ. ಆದರೆ ಆ ಜೋಡಿಗಳು ಮದುವೆಯಾಗಲು ಮುಂದಾದಾಗ ಹುಡುಗಿ ಮನೆಯಿಂದ ಪ್ರಬಲ ವಿರೋಧ ಎದುರಾಗಿತ್ತು. ಸಲ್ಮಾ ತನ್ನ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಿಕೊಂಡಾಗ ಮನೆಯವರು ಒಮ್ಮತಿ ಸೂಚಿಸಲಿಲ್ಲ. ಬಳಿಕ ಸಲ್ಮಾಗೆ ಮನೆಯರು ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದರು. ವಿವೇಕ್ ನನ್ನು ಮದುವೆಯಾಗುವುದಾದರೆ ಹಿಂದೂ ಧರ್ಮಕ್ಕೆ ಮತಾಂತರವಾಗಬೇಕು ಎಂದೂ ಸಹ ಸಲ್ಮಾಳ ಮನೆಯವರು ಹೇಳಿದ್ದರು.
ಬಳಿಕ ಆತ್ಮಹತ್ಯೆಗೆ ಮುಂದಾದಾಗ ಆ ಜೋಡಿಗೆ ನೆರವಾಗಿದ್ದು ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರ. ಕೇಂದ್ರದ ಅಧ್ಯಕ್ಷೆ ರಾಧಾದಾಸ್ ನೇತೃತ್ವದಲ್ಲಿ ಮದುವೆಗೆ ಮಂಗಳವಾರವೇ ಸೂಕ್ತ ಎಂದು ಅವರ ಅನುಕೂಲಕ್ಕೆ ತಕ್ಕಂತೆ ನಿರ್ಧರಿಸಿ ವಿವಾಹವಾದರು.
ಯುವಕನ ತಂದೆ ತಾಯಿಯ ಉಪಸ್ಥಿತಿಯಲ್ಲಿ ಸರಳವಾಗಿ ಮದುವೆ ಇಂದು ನಡೆದಿದೆ. ಹಿಂದೂ ಸಂಪ್ರದಾಯದಂತೆ ಪರಸ್ಪರ ಹಾರ ಬದಲಾಯಿಸಿಕೊಂಡಿವೆ ಮದುವೆ ಜೋಡಿಗಳು. ಬಳಿಕ ಸಲ್ಮಾಳಿಗೆ ವಿವೇಕ್ ಸಿಂಧೂರವನ್ನಿಟ್ಟು ತಾಳಿ ಕಟ್ಟಿದ್ದಾನೆ. ಈ ಮದುವೆಗೆ ವಿವೇಕ್ ನ ಅನೇಕ ಸ್ನೇಹಿತರು, ಬಂಧುಗಳು, ಸುದ್ದಿಗಾಗಿ ತೆರಳಿದ ಪತ್ರಕರ್ತರು ಕೂಡ ಸಾಕ್ಷಿಯಾದರು.
….Beautiful..Couple.Made for Each other..Great….