ಕುಕ್ಕಿಂಗ್ ವಿಭಾಗದ ಕೌಶಲ್ಯ ಸ್ಪರ್ಧೆಯಲ್ಲಿ ಶ್ರೇಷ್ಠತಾ ಪದಕ ಹರ್ಷ ವರ್ಧನ್ ಗೆ ದಕ ಜಿಲ್ಲಾಧಿಕಾರಿ ಸನ್ಮಾನ

Spread the love

ಕುಕ್ಕಿಂಗ್ ವಿಭಾಗದ ಕೌಶಲ್ಯ ಸ್ಪರ್ಧೆಯಲ್ಲಿ ಶ್ರೇಷ್ಠತಾ ಪದಕ ಹರ್ಷ ವರ್ಧನ್ ಗೆ ದಕ ಜಿಲ್ಲಾಧಿಕಾರಿ ಸನ್ಮಾನ

ಮಂಗಳೂರು: ಫ್ರಾನ್ಸ್ ನ ಲಿಯೋನ್ ನಲ್ಲಿ ಸಪ್ಟೆಂಬರ್ 10 ರಿಂದ 15 ರವರೆಗೆ ನಡೆದ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕದ ಒಂಬತ್ತು ಸ್ಪರ್ದಿಗಳು ಭಾಗವಹಿಸಿದ್ದು ,ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ  ಹರ್ಷವರ್ಧನ್ ರವರು ಕುಕ್ಕಿಂಗ್ ವಿಭಾಗದ ಕೌಶಲ್ಯ ಸ್ಪರ್ಧೆಯಲ್ಲಿ ಶ್ರೇಷ್ಠತಾ ಪದಕ ಪಡೆದಿರುತ್ತಾರೆ.

ಇದಕ್ಕೂ ಮುನ್ನ ಕಳೆದ ಮೇ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಶ್ರೀಯುತರು ಚಿನ್ನದ ಪದಕವನ್ನು ಪಡೆದಿರುತ್ತಾರೆ. ಇವರಿಗೆ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರಕಾರದ ವತಿಯಿಂದ ಉಚಿತವಾಗಿ ತರಬೇತಿಯನ್ನು ನೀಡಲಾಗಿರುತ್ತದೆ.

ಈ ದಿನ  ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸದರಿಯವರನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಕೌಶಲ್ಯ ಮಿಷನ್ ನವರು ಈ ದಿನ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಶ್ರವಣ್ ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಜಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀ ಪ್ರದೀಪ್ ಡಿ’ಸೋಜ, ಹರ್ಷವರ್ಧನ್ ಅವರ ತಂದೆ ಶ್ರೀ.ವಿಜಯ ಆರ್.ಕೆ ರವರು ಹಾಜರಿದ್ದರು.


Spread the love
Subscribe
Notify of

0 Comments
Inline Feedbacks
View all comments