ಕುಖ್ಯಾತ ದನ ಕಳ್ಳರನ್ನು ಬಂಧಿಸಿದ ಕಾವೂರು ಪೊಲೀಸರು

Spread the love

ಕುಖ್ಯಾತ ದನ ಕಳ್ಳರನ್ನು ಬಂಧಿಸಿದ ಕಾವೂರು ಪೊಲೀಸರು

ಮಂಗಳೂರು:  ನಗರದ ಕಾವೂರು ಪೊಲೀಸ್ ಠಾಣೆಯ ಅಕ್ರ 61/2024 ಕಲಂ 379 ಐಪಿಸಿ ಹಾಗೂ 111/2024 ಕಲಂ: 4.7.12 ಕರ್ನಾಟಕ ಜಾನುವಾರು ಹತ್ಯ ಪ್ರತಿಬಂಧಕ ಮತ್ತು ಸಂರಕ್ಷಣಾ ಅದ್ಯಾದೇಶ- 2020 ಕಲಂ 303(1) ಬಿ ಎನ್ ಎಸ್ 2023 ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳಾದ ಪೇಜಾವರ ಕೊಳಂಬೆ ನಿವಾಸಿ ಪೈಜಲ್ @ಪೈಜಲ್ ಕೋಂಚಾರ್ (40), ಉಳ್ಳಾಲ ಕೋಡಿ ನಿವಾಸಿ ಸುಹೈಬ್ ಅಕ್ತರ್ (24) ಎಂಬವರನ್ನು   ಬಂಧಿಸಿ ಕೃತ್ಯಕ್ಕೆ ಬಳಿಸಿ ರಿಡ್ಜ್ ಕಾರ್ ಹಾಗೂ ಫ್ಯಾಸಿನೋ ಸ್ಕೂಟರ್ ನ್ನು ಸ್ವಾಧಿನಪಡಿಸಿಕೊಂಡು  ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಲಾಗಿದೆ.

ಇದರಲ್ಲಿ ಪೈಜಲ್ @ಪೈಜಲ್ ಕೊಂಚಾರ್ ಬಜ್ಜೆ ಠಾಣೆಯಲ್ಲಿ 01, ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿಯು 02 ಪ್ರಕರಣಗಳಲ್ಲಿ ಸಹ ದನ ಕಳ್ಳತನದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದಿರುತ್ತದೆ. ಈ ಹಿಂದೆ ಪೈಜಲ್ @ಪೈಜಲ್ ಕೊಂಚಾರ್ ಎಂಬುವನ ಮೇಲೆ ಒಟ್ಟು 12 ದನ ಕಳ್ಳತನ ಪ್ರಕರಣ ದಾಖಲಾಗಿದ್ದು ಅದರಲ್ಲಿ ಬಜ್ಜೆ ಪೊಲೀಸ್ ಠಾಣೆಯಲ್ಲಿ 07 ಪ್ರಕರಣಗಳು. ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 01 ಪ್ರಕರಣಗಳು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು ದಾಖಲಾಗಿವೆ.

ಈ ಮೇಲಿನ ಆರೋಪಿತರನ್ನು ಮಂಗಳೂರು ನಗರದ  ಪೊಲೀಸ್ ಆಯುಕ್ತರಾದ  ಅನೂಪಮ್ ಅಗ್ರವಾಲ್ ಐ.ಪಿ.ಎಸ್. ರವರ ಮಾರ್ಗದರ್ಶನಂತೆ ಈ ಕಾರ್ಯಚರಣೆಯನ್ನು ಡಿ.ಸಿ.ಪಿ. ರವರಾದ   ಸಿದ್ದಾರ್ಥ ಗೋಯಲ್ ಐ.ಪಿ.ಎಸ್ (ಕಾ&ಸು), ಮತ್ತು   ದಿನೇಶ ಕುಮಾರ್ (ಅಪರಾಧ & ಸಂಚಾರ) ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ ಕೆ ರವರ ನೇತೃತ್ವದಲ್ಲಿ ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ   ರಾಘವೇಂದ್ರ ಬೈಂದೂರು ರವರು ಹಾಗೂ ಕಾವೂರು ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದರ ಸಿಬ್ಬಂದಿಗಳಾದ ಭುವನೇಶ್ವರಿ, ರಿಯಾಜ್, ಚಂದ್ರನಾಯಕ್, ನಾಗರಾಜ ಭೈರಗೊಂಡ, ರಾಜಪ್ಪ ಕಾಶಿಬಾಯಿ ರವರುಗಳೊಂದಿಗೆ ಆರೋಪಿತರನ್ನು ಪತ್ತೆಮಾಡಿ ದಸ್ತಗಿರಿ ಮಾಡಲಾಗಿರುತ್ತದೆ.


Spread the love