ಕುಟುಂಬದ ಏಳಿಗೆಗೆ ಪುರುಷರ ತ್ಯಾಗ ವಿಶೇಷ – ವಂ. ಸುನೀಲ್ ಡಿಸಿಲ್ವಾ
ಉಡುಪಿ: ಕುಟುಂಬದ ಏಳಿಗೆಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿದ ಪ್ರತಿಯೊಬ್ಬ ಪುರುಷರ ಕಾರ್ಯವನ್ನು ವರ್ಣಿಸಲು ಅಸಾಧ್ಯ ಎಂದು ಸಾಸ್ತಾನ ಸಂತ ಅಂತೋನಿ ದೇವಾಲಯದ ಧರ್ಮಗುರು ವಂ|ಸುನೀಲ್ ಡಿ’ಸಿಲ್ವಾ ಹೇಳಿದರು.
ಅವರು ಭಾನುವಾರ ಚರ್ಚಿನ ಸ್ತ್ರೀ ಸಂಘಟನೆ ಹಾಗೂ ಪ್ರಗತಿ ಸ್ವಸಹಾಯ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಪುರುಷರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಂದು ಮನೆಯ ಪುರುಷರು ತನ್ನ ಕುಟುಂಬಕ್ಕಾಗಿ ದುಡಿದ ರೀತಿಯನ್ನು ನೆನೆದು ಅವರಿಗಾಗಿ ಪುರುಷರ ದಿನವನ್ನಾಗಿ ಆಚರಿಸಿ ಅವರ ಸೇವೆಯನ್ನು ನೆನೆಯುವುದು ಶ್ಲಾಘನಾರ್ಹ ಸಂಗತಿಯಾಗಿದೆ. ಇದರೊಂದಿಗೆ ಅದೇ ಪ್ರೀತಿಯಿಂದ ಇನ್ನಷ್ಟು ಕುಟುಂಬವನ್ನು ಸಲಹಲಿ ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಧರ್ಮಪ್ರಾಂತ್ಯದ ಸಂಪದ ಸಂಸ್ಥೆಯ ಪ್ರತಿನಿಧಿ ಜುಡಿತ್ ಡಿ’ಸೋಜಾ ಮಾತನಾಡಿ ಕುಟುಂಬದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪುರಷರ ಪಾತ್ರ ಪ್ರಮುಖವಾಗಿದೆ. ಅವರು ತನ್ನ ಸಂತೋಷವನ್ನು ಬದಿಗೊತ್ತಿ ಕುಟುಂಬ ನಿರ್ವಹಣೆಗಾಗಿ ಸರ್ವರೀತಿಯಲ್ಲಿ ಹಗಲು ರಾತ್ರಿ ಎನ್ನದೆ ದುಡಿಯುವರಿಂದಾಗಿ ಕುಟುಂಬಗಳು ಸಂತೋಷದಿಂದ ಇರಲು ಸಾಧ್ಯವಿದೆ. ಅವರ ಸೇವೆಯನ್ನು ಎಂದೂ ಕೂಡ ಕಡೆಗಣಿಸದರೆ ಪುರುಷರಿಗೆ ಗೌರವ ನೀಡುವ ಕಾರ್ಯ ಸದಾ ಜರುಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದ ಸಂಘಟನೆಯ ಅಧ್ಯಕ್ಷರಾದ ಸಿಂತಿಯಾ ಡಿಸೋಜಾ ಮಾತನಾಡಿ ಒಂದು ಕುಟುಂಬದ ಏಳಿಗೆಯಲ್ಲಿ ಮಹಿಳೆಯೊಂದಿಗೆ ಪುರುಷನ ಪಾತ್ರವೂ ಕೂಡ ಬಹುಮುಖ್ಯವಾಗಿದೆ. ಪುರುಷರು ಕುಟುಂಬದ ಮೇಲೆ ತೋರುವ ಜವಾಬ್ದಾರಿ ಹಾಗೂ ಅಕ್ಕರೆಯನ್ನು ವರ್ಣಿಸಲು ಅಸಾಧ್ಯವಾಗಿದೆ. ಸಾಸ್ತಾನ ಸಂತ ಅಂತೋನಿ ದೇವಾಲಯದ ಸ್ತ್ರೀ ಸಂಘಟನೆಯ ವತಿಯಿಂದ ಇಂದು ನಾವು ಪುರುಷರ ದಿನವನ್ನಾಗಿ ಆಚರಿಸುವ ಮೂಲಕ ಒಂದು ದಿನವನ್ನು ಎಲ್ಲಾ ಪುರುಷರನ್ನು ಸಂತೋಷದಾಯಕವನ್ನಾಗಿ ಮಾಡುವುದೇ ನಮ್ಮ ಉದ್ದೇಶವಾಗಿದೆ ಎಂದರು.
ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಇಂತಹ ಕಾರ್ಯಕ್ರಮದಲ್ಲಿ ಪುರಷರಿಗಾಗಿ ವಿವಿಧ ರೀತಿಯ ಮನೋರಂಜನಾತ್ಮಕ ಸ್ಪರ್ಧೆ, ನೃತ್ಯವನ್ನು ಆಯೋಜಿಸಿದ್ದು ಪ್ರತಿಯೊಬ್ಬರು ವಿಶೇಷ ಆಸಕ್ತಿಯಿಂದ ಭಾಗವಹಿಸಿ ಸಂತೋಷಟ್ಟರು. ಕಾರ್ಯಕ್ರಮವನ್ನು ಚರ್ಚಿನ ಹಿರಿಯ ಸದಸ್ಯ ಜೆರೋಮ್ ಡಿ’ಸೋಜಾ ಅವರು ಕೇಕ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಚರ್ಚಿನ ಜೀಜಸ್ ಮೇರಿ ಕಾನ್ವೆಂಟ್ ನ ಮುಖ್ಯದಸ್ಥೆ ಸಿಸ್ಟರ್ ಗೊರೆಟ್ಟಿ ಹಾಗೂ ಮಿಶನರಿ ಸಿಸ್ಟರ್ಸ್ ಆಫ್ ಆಜ್ಮೀರ್ ಕಾನ್ವೇಂಟ್ ನ ಮುಖ್ಯಸ್ಥರಾದ ಸಿಸ್ಟರ್ ವೆರೋನಿಕಾ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಐವನ್ ಡಿಆಲ್ಮೇಡಾ, 20 ಆಯೋಗಗಳ ಸಂಚಾಲಕಿ ಜೀನ್ ಮೇರಿ ಲೂವಿಸ್ ಉಪಸ್ಥಿತರಿದ್ದರು.
ಪುರುಷರಿಗೆ ವಿವಿಧ ಸ್ಪರ್ಧೆಗಳನ್ನು ವೀರಾ ಪಿಂಟೊ ನಡೆಸಿಕೊಟ್ಟರು. ಕಾರ್ಯದರ್ಶಿ ಜೊಸ್ಲೀನ್ ಪಿಂಟೊ ವಂದಿಸಿ, ಮಾಲಾ ಲೂವಿಸ್ ಕಾರ್ಯಕ್ರಮ ನಿರೂಪಿಸಿದರು.