ಕುಡ್ಲ ತುಳು ಮಿನದನ ಪೂರ್ವಭಾವಿ ಸಂಘಟನಾ ಸಭೆ

Spread the love

ಕುಡ್ಲ ತುಳು ಮಿನದನ ಪೂರ್ವಭಾವಿ ಸಂಘಟನಾ ಸಭೆ

ಸುರತ್ಕಲ್: ತುಳುನಾಡಿನ ಸಂಸ್ಕøತಿ, ಸಾಹಿತ್ಯ ವಿಚಾರಗಳ ಪರಿಚಯ ಮಾಡಿ ಕೊಡುವ ಕುಡ್ಲ ತುಳು ಮಿನದನ ಯಶಸ್ಸಿಗೆ ಶ್ರಮಿಸಿ ತುಳುನಾಡ ಸೇವೆ ಮಾಡಬೇಕಾಗಿದೆ ಎಂದು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಹೇಳಿದರು.

ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಸುರತ್ಕಲ್ ಬಂಟರ ಸಂಘ, ಮಹಿಳಾ ವೇದಿಕೆ ಮತ್ತು ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜ.8ರಂದು ಸುರತ್ಕಲ್ ಬಂಟರ ಭವನದಲ್ಲಿ ನಡೆಯ ಲಿರುವ ಕುಡ್ಲ ತುಳು ಮಿನದನ ಕಾರ್ಯಕ್ರಮದ ಪೂರ್ವಭಾವಿ ಸಂಘಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

minadana

ತುಳು ಭಾಷೆ ಉಳಿವಿಗೆ ಮಾಧ್ಯಮದ ಪಾತ್ರ ಮತ್ತು ಬದಲಾಗುತ್ತಿರುವ ತುಳುನಾಡಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಆಚರಣೆಗಳು ಮೊದಲಾದ ವಿಚಾರಗಳ ಬಗ್ಗೆ ವಿದ್ವತ್ ಪೂರ್ಣಗೋಷ್ಠಿ ನಡೆಯಲಿದೆ. ಯುವ ಜನತೆ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸುವಂತೆ ಮಾಡು ವುದರ ಮೂಲಕ ತುಳು ಸಂಸ್ಕ್ರತಿಯ ಅರಿವು ಸರ್ವರಿಗೂ ತಿಳಿದುಬರುವಂತೆ ಪ್ರಯತ್ನಿಸಬೇಕಾಗಿದೆ ಎಂದರು.

ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ರೂಪಕಲಾ ಆಳ್ವ ಮಾತನಾಡಿ, ತುಳು ಸಂಸ್ಕøತಿಯ ಸಂಭ್ರಮವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಸರಿಸುವ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದ ಯಶÀಸ್ಸಿಗೆ ಸರ್ವರ ಸಹಕಾರ ಕೋರಿದರು. ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ, ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಉಪಪ್ರಾಚಾರ್ಯ ಪ್ರೊ.ಕೃಷ್ಣಮೂರ್ತಿ, ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಸುಧಾಕರ ಕುಲಾಲ್, ಶಾರದಾ ಮಾತೃ ಮಂಡಳಿಯ ಅಧ್ಯಕ್ಷೆ ಗುಣವತಿ ರಮೇಶ್, ಸುರತ್ಕಲ್ ಜೇಸಿಸ್ ಅಧ್ಯಕ್ಷ ವಿನೀತ್ ಶೆಟ್ಟಿ, ಮಹೇಶ್ ಮೂರ್ತಿ ಸುರತ್ಕಲ್, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಮೋಹನ್ ಕೊಪ್ಪಲ ಕದ್ರಿ, ರಘು ಇಡ್ಕಿದು, ಪ್ರೊ. ಡಿ.ವೇದಾವತಿ, ಜಯಶೀಲ, ಕಾರ್ಪೊರೇಟರ್ ಗುಣಶೇಖರ ಶೆಟ್ಟಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಸುಧಾಕರ ಪೂಂಜ, ಸುಖಲತಾ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಬೈಕಂಪಾಡಿ ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷ ಲಿಂಗಪ್ಪ, ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ, ವೀಣಾ ಶೆಟ್ಟಿ, ತಾ.ಪಂ. ಸದಸ್ಯೆ ವಜ್ರಾಕ್ಷಿ ಪಿ.ಶೆಟ್ಟಿ, ದೀಪಕ್ ಪೆರ್ಮುದೆ, ಪ್ರಮೀಳಾ ದೀಪಕ್, ಪ್ರವೀಣ್ ಶೆಟ್ಟಿ, ಜಯರಾಮ್ ಶೆಟ್ಟಿ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಸುರತ್ಕಲ್ ಬಂಟರ ಸಂಘದ ಕಾರ್ಯದರ್ಶಿ ಸೀತಾರಾಮ ರೈ ವಂದಿಸಿದರು.


Spread the love