‘ಕುಡ್ಸೆಂಪ್ ಕಾಮಗಾರಿ ಕಳಪೆ ಸಾಬೀತಾದರೆ ರಾಜಕೀಯ ನಿವೃತ್ತಿ, ಇಲ್ಲವಾದಲ್ಲಿ ಶಾಸಕ ವೇದವ್ಯಾಸ ಕಾಮತ್ ನಿವೃತ್ತಿಯಾಗಲಿ’- ಜೆ.ಆರ್. ಲೋಬೋ

Spread the love

‘ಕುಡ್ಸೆಂಪ್ ಕಾಮಗಾರಿ ಕಳಪೆ ಸಾಬೀತಾದರೆ ರಾಜಕೀಯ ನಿವೃತ್ತಿ, ಇಲ್ಲವಾದಲ್ಲಿ ಶಾಸಕ ವೇದವ್ಯಾಸ ಕಾಮತ್ ನಿವೃತ್ತಿಯಾಗಲಿ’- ಜೆ.ಆರ್. ಲೋಬೋ 

ಮಂಗಳೂರು: ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಲು ಕುಡ್ಸೆಂಪ್ ಯೋಜನೆಯ ನಿರ್ದೇಶಕರಾಗಿದ್ದ ನಾನು ಕಾರಣ ಎಂಬುದಾಗಿ ಹಾಲಿ ಶಾಸಕ ವೇದವ್ಯಾಸ ಕಾಮತ್‌ ಮಾಡಿರುವ ಆರೋಪವನ್ನು ಸರಕಾರ ಪರಿಶೀಲನೆ ನಡೆಸಿ ಕಳಪೆ ಎಂದು ಸಾಬೀತುಪಡಿಸಿದರೆ ನಾನು ರಾಜಕೀಯದಿಂದ ಸಂಪೂರ್ಣಾಗಿ ನಿವೃತ್ತಿಯಾಗುತ್ತೇನೆ. ಇಲ್ಲವಾದಲ್ಲಿ ಹಾಲಿ ಶಾಸಕರು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಸವಾಲೆಸೆದಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಈ ಸವಾಲು ಹಾಕಿರುವ ಅವರು, ಎಡಿಬಿ ನೆರವಿನ ಮೊದಲ ಹಂತದ 160 ಕೋಟಿ ರೂ.ಗಳ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿರುವುದು ಬೇಜವಾಬ್ದಾರಿಯಿಂದ ಕೂಡಿದೆ ಎಂದು ಟೀಕಿಸಿದರು.

ನಗರದ ನೀರಿನ ಸಮಸ್ಯೆ ಬಿಗಡಾಯಿಸಲು ಪಾಲಿಕೆ ಆಯುಕ್ತರಾಗಿದ್ದ, ಕುಡ್ಸೆಂಪ್‍ಯೋಜನೆಯ ನಿರ್ದೇಶಕರಾಗಿದ್ದ, ಮಾಜಿ ಶಾಸಕರಾದ ಜೆ. ಆರ್. ಲೋಬೊರವರೇಕಾರಣಎಂದು ಈಗಿನ ಶಾಸಕರಆಪಾದನೆ. ವಾಸ್ತವಿಕವಾಗಿ ಎಡಿಬಿ ನೆರವಿನ ಕಾಮಗಾರಿ ಕಳಪೆ ಆಗಿರುವುದೇ ಈಗಿನ ಸಮಸ್ಯೆಯ ಮೂಲ, ಎಡಿಬಿ ಮೊದಲ ಹಂತದಲ್ಲಿ 160 ಕೋಟಿ ವೆಚ್ಚದಲ್ಲಿಕಾಮಗಾರಿ ನಡೆದಿತ್ತು, ತುಂಬೆಯಲ್ಲಿ ನೀರು ಶುದ್ಧೀಕರಣಘಟಕಸ್ಥಾಪನೆ, ನೀರು ಸರಬರಾಜು ಕೊಳವೆ ಅಳವಡಿಕೆ, ನಗರದಲ್ಲಿ ನೀರು ವಿತರಣೆ ಕೊಳವೆ ಅಳವಡಿಕೆ ಇತ್ಯಾದಿ ಇದರಲ್ಲಿತ್ತು. ಇದನ್ನು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದರೆ, 2026ರ ವರೆಗೆ ಸಮಸ್ಯೆಆಗಬಾರದಿತ್ತು,ಆದರೆ ಕಳಪೆ ಕಾಮಗಾರಿಗಳಿಂದ ಮಳೆಗಾಲದಲ್ಲಿ ಕೆಲವೆಡೆ ನೀರುತಲುಪುವುದಿಲ್ಲ, ಇದಕ್ಕೆ ಲೋಬೊ ಕಾರಣ.

ನಾನು ವೇದವ್ಯಾಸ್‍ಕಾಮತ್‍ರವರಿಗೆ ಮೊದಲಿಗೆ ಕೇಳುವುದು ಈ ಕಾಮಗಾರಿಗಳು ಕಳಪೆ ಎಂದುಇವರಿಗೆ ಹೇಳಿದವರು ಯಾರು? ಇವರೇನುತಜ್ಞರೇ? ಕಾಮಗಾರಿಯಎಲ್ಲಾ ದಾಖಲೆಗಳು ಇವೆ. ಇದರ ಕಾಮಗಾರಿಗಳು ಭೌತಿಕವಾಗಿ ಈಗಲೂ ಇದೆ. ತಜ್ಞರಿಂದಇದನ್ನು ಪುನಃ ಸರಕಾರ ಪರಿಶೀಲನೆ ನಡೆಸಲಿ ಕಳಪೆ ಎಂದು ಸಾಬೀತಾದರೆ, ನಾನು ರಾಜಕೀಯದಿಂದ ಸಂಪೂರ್ಣವಾಗಿ ನಿವೃತ್ತಿಯಾಗುತ್ತೇನೆ, ಇಲ್ಲವಾದಲ್ಲಿ ವೇದವ್ಯಾಸ್‍ಕಾಮತ್‍ರಾಜಕೀಯದಿಂದ ನಿವೃತ್ತಿಯಾಗಲಿ. ಎಡಿಬಿ 1ನೇ ಯೋಜನೆಯ ಮಾಹಿತಿ ವೇದವ್ಯಾಸ್‍ಕಾಮತ್‍ಗೆಇಲ್ಲ. ಅರ್ಧಂಬರ್ಧ ಮಾಹಿತಿ ಪಡೆದು ಏನೇನೋ ಮಾತಾನಾಡಿದ್ದಾರೆ. ಸರಿಯಾದ ಮಾಹಿತಿ ನಾನು ಕೊಡುತ್ತೇನೆ.

2002ರಲ್ಲಿ ನಾನು ಮಂಗಳೂರು ಮಹಾನಗರ ಪಾಲಿಕೆಗೆ ಆಯುಕ್ತನಾಗಿದ್ದಾಗ, ಕುಡ್ಸೆಂಪ್ -1ನೇ ಯೋಜನೆಯ ವಿವಿಧಛಿomಠಿoಟಿeಟಿಣsಗಳನ್ನು ಕೌನ್ಸಿಲ್ ಸಭೆಯಲ್ಲಿಚರ್ಚಿಸುವಾಗ, ಮ.ನ.ಪಾ. ಸದಸ್ಯರು, ಸಂಸತ್ ಸದಸ್ಯರು, ಶಾಸಕರುಎಲ್ಲರೂಇದಲ್ಲಿ ಭಾಗವಹಿಸಿದ್ದು, ಮೂಲ ಯೋಜನೆಯಂತೆಕುಡಿಯುವ ನೀರುಯೋಜನೆಗೆರೂ. 170.00ಕೋಟಿ ಹಾಗೂ ಒಳಚರಂಡಿ ಯೋಜನೆಗೆ,ಅಂದರೆ ಹಳೇ ಮಂಗಳೂರಿನ ಒಳಚರಂಡಿಯನ್ನು ದುರಸ್ತಿಗೊಳಿಸಲು ಮಾತ್ರರು. 41.00 ಕೋಟಿಯನ್ನುಇಡಲಾಗಿತ್ತು. ಆದರೆ ಶಾಸಕರು, ಸಂಸತ್ ಸದಸ್ಯರು ಹಾಗೂ ಎಲ್ಲಾ ಮ.ನ.ಪಾ. ಸದಸ್ಯರುಅಂದು ಒಳಚರಂಡಿಯನ್ನು ಮುಖ್ಯವಾಗಿ ನಗರದ ವಿಸ್ರ್ನತಾ ಭಾಗಕ್ಕೆ ಒಳಚರಂಡಿ ಇಲ್ಲದ ನಗರದ ಭಾಗಕ್ಕೆ ಹೊಸ ಒಳಚರಂಡಿ ಮಾಡಲೇ ಬೇಕು, ಈಗಾಗಲೇ ಕುಡಿಯುವ ನೀರು ಸಾಕಷ್ಟು ಇರುವುದರಿಂದಅದಕ್ಕೆಅನುದಾನ ಕಡಿತಗೊಳಿಸಿ ಎಂದು ನಿರ್ಣಯಿಸಿ, ಕುಡಿಯುವ ನೀರಿಗೆರೂ. 110.00 ಕೋಟಿಇಟ್ಟು, ಬೇರೆ ಕೆಲವು ಯೋಜನೆಗಳನ್ನು ಕೂಡಾ ರದ್ದುಪಡಿಸಿ, ಒಳಚರಂಡಿ ಯೋಜನೆಗೆರು. 145.00ಕೋಟಿಗೆ ಏರಿಸಲಾಯಿತು. ಇದರಿಂದ ನಗರದಲ್ಲಿಕುಡಿಯುವ ನೀರಿನ ಮನೆ-ಮನೆ ಸಂಪರ್ಕ ಹಾಗೂ ವಿತರಣಾಜಾಲವನ್ನು ಕಡಿತಗೊಳಿಸಲಾಯಿತು. ಈ ಕಾರಣದಿಂದ ಪಾಲಿಕೆಯ ವಿತರಣೆಯ ಪಿ.ವಿ.ಸಿ. ಪೈಪ್ ಲೈನು ಸುಮಾರು 4000ಕೀ.ಮೀ. ಹಾಕಿರುವುದು ಬದಲಾಯಿಸಲು ಸಾಧ್ಯವಾಗಲಿಲ್ಲ. ಕುಡ್ಸೆಂಪ್‍ನಲ್ಲಿ ಕೇವಲ 750ಕಿ.ಮೀ. ವಿತರಣೆ ಪೈಪನ್ನು ಹಾಕಲಾಯಿತು.

ಮಂಗಳೂರು ನಗರದಲ್ಲಿ 1961ರಲ್ಲಿ ಹಾಕಿರುವ 2.5 ಎಂಜಿಡಿಯ ಹಳೇ ಪೈಪ್‍ಇತ್ತು. ಇದರಲ್ಲಿ ನಗರಕ್ಕೆ ಏನೂ ನೀರು ಬರುತ್ತಾಇಲ್ಲ. ದಾರಿಯಲ್ಲಿದ್ದು ಹಳ್ಳಿಗಳು ಸಂಪೂರ್ಣವಾಗಿ ಈ ನೀರನ್ನುತೆಗೆಯುತ್ತಿದ್ದಾರೆ. 1972ರಲ್ಲಿ ಎಂಸಿಎಫ್ ಕಾರ್ಖಾನೆ ಮಾಡುವಾಗ, ಕರ್ನಾಟಕ ಸರಕಾರ 18ಎಂಜಿಡಿ ಯೋಜನೆ ನಗರಕ್ಕೆ ನೀಡಿತು. 4ಮೀ ಎತ್ತರದಕಿಂಡಿಅಣೆಕಟ್ಟುಇತ್ತು. ಅದು ಸೋರುತ್ತಿತ್ತು. ಕುಡ್ಸೆಂಪ್‍ಯೋಜನೆಯಡಿಯಲ್ಲಿಇನ್ನೊಂದು 18ಎಂಜಿಡಿ ನೀರು ಸರಬರಾಜು ಕೊಳವೆ, 12 ನೆಲ ಮೇಲುಸ್ಥಾವರಗಳು, ನೀರು ಶುದ್ಧೀಕರಣ ವ್ಯವಸ್ಥೆ ಹಾಗೂ 750ಕಿ.ಮೀ. ನೀರು ವಿತರಣಾ ಪೈಪ್ ಅಳವಡಿಸಿದೆ. ಇವತ್ತಿಗೆ ಮಂಗಳೂರಿಗೆ ಸಾಕಷ್ಟು ನೀರು ಬರುತ್ತಿರುವುದಾದರೆಅದಕ್ಕೆಕುಡ್ಸೆಂಪ್‍ಯೋಜನೆಕಾರಣ. ಇದರಲ್ಲಿಯಾವುದೇರೀತಿಯ ಕಳಪೆ ಕಾಮಗಾರಿಆಗಿದೆಎಂದು ವೇದವ್ಯಾಸ್‍ಕಾಮತ್ ಹೇಳುವುದಾದರೆ, ದಯವಿಟ್ಟುಅದನ್ನು ಸಾಬೀತು ಪಡಿಸಿ. ಬಾಯಿಗೆ ಬಂದಂತೆ ಏನೇನೋ ಮಾತನಾಡಬೇಡಿ.

ಮಂಗಳೂರು ನಗರಕ್ಕೆ ನೀರು ಸಮಸ್ತೆ ಆಗಲು ಮುಖ್ಯಕಾರಣ, ತುಂಬೆಯಿಂದ ನಗರಕ್ಕೆ ಬರುವ ಮುಖ್ಯ ಕೊಳವೆಯಿಂದ ನೇರವಾಗಿದಾರಿಯಲ್ಲಿ ಹಳ್ಳಿಗಳು ನಿರಂತರ ನೀರುತೆಗೆಯುತ್ತಿದ್ದಾರೆ, ಇದರಿಂದ 20% ಸೋರುವಿಕೆಆಗುತ್ತಿದೆ. ನಗರದ ಒಳಗಡೆ ಸಮರ್ಪಕ ವಿತರಣಾಜಾಲ ಇಲ್ಲದೆಇರುವುದರಿಂದ, ಪಾಲಿಕೆಯ ಹಳೇ ಪಿವಿಸಿ ಪೈಪಿನ ವಿತರಣೆಜಾಲದಲ್ಲಿ ಸುಮಾರು 30% ಸೋರಿಕೆಆಗುತ್ತಿದೆ. ಕುಡ್ಸೆಂಪ್‍ನ ಮೂಲ ಯೋಜನೆಯಂತೆ ನೀರು ಸರಬರಾಜುಯೋಜನೆ ಅನುಷ್ಠಾನ ಆಗಿದ್ದಲ್ಲಿ ವಿತರಣಾಜಾಲದ ಸೋರುವಿಕೆಯನ್ನು 10%ಕ್ಕೆ ಇಳಿಸಬಹುದಿತ್ತು. ಈ ಕಾರಣದಿಂದತುಂಬೆಯಿಂದ ಬರುವ ನೀರಿನ 50%ರಷ್ಟು ನಗರದ ನಾಗರೀಕರ ಮನೆಗೆ ತಲುಪುವುದಿಲ್ಲ.

ಈಗ ನಾನು ವೇದವ್ಯಾಸ್‍ಕಾಮತ್‍ರವರಿಗೆ ಕೇಳ ಬಯಸುತ್ತೇನೆ. ಕಳೆದ ಒಂದು ವರ್ಷದಿಂದ ಶಾಸಕರಾಗಿದ್ದೀರಿ. ನೀವು ಈ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ನಿಮ್ಮಕೊಡುಗೆ ಏನು? ನೀವು ಏನು ಮಾಡಿದ್ದೀರಿ, ಕೇವಲ ಪೊಳ್ಳು ಭಾಷಣಗಳು ಹಿಂದಿನ ಶಾಸಕರ ಮೇಲೆ ಆಪಾದನೆಗಳು, ಮತ್ತುಅಲ್ಲೊಂದುಇಲ್ಲೊಂದು ಕೆಲಸಕ್ಕೆ ಬಾರದ ಮನವಿಗಳನ್ನು ನೀಡಿದ್ದೇನೆಎನ್ನುವುದು ಬಿಟ್ಟರೆ ನೀವು ಏನು ಮಾಡಿದ್ದೀರಿ, ನಗರದ ನೀರಿನ ಸಮಸ್ಯೆಯನ್ನು ಬಗೆಹರಿಸಲು ನಾನೇನು ಮಾಡಿದ್ದೇನೆಎಂದು ಈಗ ನಿಮಗೆ ಹೇಳುತ್ತೇನೆ, ಕೇಳಿ.

1. ಕುಡ್ಸೆಂಪ್‍ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದೇನೆ. ಇದರಿಂದ ನಗರಕ್ಕೆ 80ಎಂಎಲ್‍ಡಿ ನೀರಿನ ಬದಲು 160ಎಂಎಲ್‍ಡಿ ನೀರು ಬರುವಂತೆಆಗಿದೆ. 12 ಸ್ಥಾವರಗಳನ್ನು ಮಾಡಿದೆ, 80ಎಂಎಲ್‍ಡಿಯ ನೀರು ಶುದ್ಧೀಕರಣ ಹೊಸ ಘಟಕ ನಿರ್ಮಾಣ ಮಾಡಿದೆ. ಹೊಸ ಪಂಪಿಂಗ್ ವ್ಯವಸ್ಥೆ ಮಾಡಿದೆ.

2. ತುಂಬೆಯಲ್ಲಿ ಹೊಸ 7ಮೀ. ಎತ್ತರದಡ್ಯಾಂನ್ನು ನಿರ್ಮಿಸಲು ನಾನು ಕುಡ್ಸೆಂಪ್ ನಿರ್ದೇಶಕನಾಗಿರುವಾಗ ಸರಕಾರಕ್ಕೆ ಕಳುಹಿಸಿದ್ದೆ. ಆ ಯೋಜನೆಯನ್ನು ದಿನಾಂಕ 03.02.2007ರಂದು, ಅಂದಿನ ಮುಖ್ಯ ಮಂತ್ರಿಗಳಾದ ಸನ್ಮಾನ್ಯಎಚ್.ಡಿ. ಕುಮಾರಸ್ವಾಮಿಯವರು ಮಂಜೂರು ಮಾಡಿದರು. ವೇದವ್ಯಾಸ್‍ಕಾಮತ್‍ರೇ, ತಮ್ಮ ಪತ್ರಿಕಾ ಗೋಷ್ಠಿಯಲ್ಲಿ ಹೇಳಿರುವಂತೆ ಸನ್ಮಾನ್ಯಯಡಿಯೂರಪ್ಪರವರುಇದನ್ನು ಮಂಜೂರು ಮಾಡಿರುವುದುಅಲ್ಲ. ದಯಮಾಡಿ ನಿಮ್ಮ ಮಾಹಿತಿ ಸರಿಪಡಿಸಿಕೊಳ್ಳಿ. ಯೋಜನೆಯುರೂ. 40.00ಕೋಟಿಗೆ ಮಂಜೂರು ಮಾಡಿದ್ದು, ಆ ಪೈಕಿ ರೂ. 13.33ಕೋಟಿ (33%) ಏUIಆಈಅರೂ.13.33 ಕೋಟಿ (33%) ಮಹಾನಗರ ಪಾಲಿಕೆ ಹಾಕಬೇಕೆಂದು ಸರಕಾರಆದೇಶ ಮಾಡಿತ್ತು.

ತದನಂತರತಜ್ಞ ಸಂಸ್ಥೆಗಳು ವಿನ್ಯಾಸಅಧ್ಯಯನ ಮಾಡಿ ಹೊಸ ವಿನ್ಯಾಸ ತಯಾರಿಸಿದಾಗ ಇದುಅಂದಾಜುವೆಚ್ಚ ರೂ. 75.50 ಕೋಟಿಗೆಏರಿತು. ನಾನು ಶಾಸಕನಾಗುವ ತನಕ ಈ ಕುರಿತು ಏನೂ ಆಗಿರಲಿಲ್ಲ. ನಾನು ಶಾಸಕನಾದ ನಂತರ ಸನ್ಮಾನ್ಯ ವಿನಯಕುಮಾರ್ ಸೊರಕೆಯವರು ನಗರಾಭಿವೃದ್ಧಿ ಸಚಿವರಾದಗ, ನಾವು ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿ, ಈ ಹೊಸ ಅಂದಾಜು ಪಟ್ಟಿಗೆ ದಿ. 28.04.2014ರಂದು ಮಂಜೂರಾತಿ ಪಡೆದಿದ್ದೇನೆ. ಅಷ್ಟು ಮಾತ್ರಅಲ್ಲಏUIಆಈಅರೂ. 37.75ಕೋಟಿ (50%) ಕರ್ನಾಟಕ ಸರಕಾರರು. 30.20ಕೋಟಿ (40%) ಮತ್ತು ಮಹಾನಗರ ಪಾಲಿಕೆ ಕೇವಲ ರೂ. 7.75ಕೋಟಿ (10%) ಮಾತ್ರ ಹಾಕುವಂತೆ ಸರಕಾರದಿಂದಆದೇಶ ಪಡೆದಿದ್ದೇನೆ. ಇದು ಮಾಡಿರುವುದು ನಾನು ಎಂದುಧೈರ್ಯದಿಂದ ಹೇಳುತ್ತಿದ್ದೇನೆ. ಆದುದರಿಂದ ವೇದವ್ಯಾಸ್‍ಕಾಮತ್‍ರವರಲ್ಲಿ ನಿಮ್ಮದಾಗಲಿ ಯಾಯಡಿಯೂರಪ್ಪನವರದ್ದಾಗಲಿ ಯಾ ಬಿಜೆಪಿ ಪಕ್ಷದಾಗಲಿ ಇದರಲ್ಲಿ ಏನೂ ಕೊಡುಗೆಇಲ್ಲಎನ್ನುವುದನ್ನು ಸರಿಯಾಗಿ ಅರಿತುಕೊಳ್ಳಿ.

3. ಎಡಿಬಿ 1ನೇ ಹಂತದ ನೀರು ಸರಬರಾಜುಯೋಜನೆ ನಗರಕ್ಕೆ ಸಂಪೂರ್ಣ ಆಗುವುದಿಲ್ಲ ಎಂದು ನನಗೆ ಅರಿವಿತ್ತು. ಆದುದರಿಂದ ನಾನು ಶಾಸಕನಾದಕೂಡಲೇಂಆಃ-II ಯೋಜನೆಗೆ ಪ್ರಯತ್ನಿಸಿದೆ. ಸರ್ವೆ ಸಾಮಾನ್ಯವಾಗಿಒಮ್ಮೆಒಂದುಯೋಜನೆ ನಗರಕ್ಕೆ ನೀಡಿದ ನಂತರ, ಅದರ ಸಾಲ 50%ರಷ್ಟಾದರೂ ಮರುಪಾವತಿಯಾಗದಿದ್ದಲ್ಲಿ, ಇನ್ನೊಂದುಯೋಜನೆ ಆ ನಗರಕ್ಕೆ ನೀಡಲಾಗುವುದಿಲ್ಲ, ಆದರೆಂಆಃಜೊತೆಯಲ್ಲಿದ್ದ ನನ್ನ ಸಂಪರ್ಕಕೇಂದ್ರ ಸರಕಾರದ ವಿತ್ತ ಸಚಿವಾಲಯದಲ್ಲಿದ್ದಉನ್ನತ ಅಧಿಕಾರಿಗಳ ಜೊತೆಯಲ್ಲಿದ್ದ ನನ್ನ ಸಂಪರ್ಕ ಮತ್ತು 60 ದಿನ ನಗರಾಭಿವೃದ್ಧಿ ಸಚಿವರಾದ ವಿನಯಕುಮಾರ್ ಸೊರಕೆಯವರ ಸಹಕಾರದಿಂದಕುಡಿಯುವ ನೀರಿಗೆರೂ. 461.00 ಕೋಟಿ ಮತ್ತು ಒಳಚರಂಡಿಗೆ ರೂ. 170.00 ಕೋಟಿಗೆ ದಿ. 14.12.2016ರಂದು ಸರಕಾರದಿಂದಅಧಿಕೃತಆದೇಶ ಪಡೆದುಕೊಂಡೆ. ಈ ಯೋಜನೆಯ ಕಾಮಗಾರಿಗಳಿಗೆ ಈಗ ಟೆಂಡರ್‍ಆಗುತ್ತಿದೆ. ಇನ್ನುರೂ. 631 ಕೋಟಿಆಗಿದ್ದು, ಇದರಟೆಂಡರ್ ಪ್ರೀಮಿಯಂ ಸೇರಿದರೆಒಟ್ಟುರೂ. 750 ರೂ. ಕೋಟಿಆಗಿರುತ್ತದೆ. ಇಷ್ಟು ದೊಡ್ಡಯೋಜನೆಯನ್ನುಂಆಃ-II ರಲ್ಲಿನಾನು ಮಂಜೂರು ಮಾಡಿಸಿದ್ದೇನೆ.

4. ತುಂಬೆಅಣೆಕಟ್ಟಿನಲ್ಲಿ 6ಮೀ. ನೀರು ನಿಲ್ಲಿಸುವುದಾದರೆ ಕೆಲವು ಪ್ರದೇಶ ಮುಳುಗಡೆ ಆಗುತ್ತದೆ. 7ಮೀ, ನಿಲ್ಲಿಸುವುದಾದರೆ ಹೆಚ್ಚು ಪ್ರದೇಶ ಮುಳುಗಡೆ ಆಗುತ್ತಿದ್ದು, ಇದನ್ನೆಲ್ಲಾ ಭೂಸ್ವಾಧೀನ ಮಾಡುವುದಾದರೆಸುಮಾರುರೂ. 120.00ಕೋಟಿ ಬೇಕಾಗುತ್ತದೆ. ನಾನು ಮತ್ತು ಮೊೈದೀನ್‍ಭಾವರವರುಜೊತೆ ಸೇರಿ, ಜಿಲ್ಲಾಉಸ್ತುವಾರಿ ಸಚಿವರಾದ ಶ್ರೀ ರಮಾನಾಥರೈಯವರ ಸಹಾಯ ಪಡೆದು, ಮುಖ್ಯ ಮಂತ್ರಿಗಳಲ್ಲಿ ಹೋಗಿ, ತಾತ್ಕಾಲಿಕ ಪರಿಹಾರರೂ. 20.00ಕೋಟಿ ಮಂಜೂರು ಮಾಡಿಸಿದ್ದೇವು. ಇದರಿಂದ ಈಗ 6ಮೀ ವರೆಗೆ ನೀರು ನಿಲ್ಲಿಸಲು ಸಾಧ್ಯವಾಯಿತು.

5. ಕೊನೆಯದಾಗಿತುಂಬೆಯಿಂದ ಮಂಗಳೂರುವರೆಗೆ ದಾರಿಯಲ್ಲಿದ್ದ ಹಳ್ಳಿಗಳು ಮುಖ್ಯ ಕೊಳವೆಯಿಂದ ನೀರುತೆಗೆಸುವುದನ್ನುತಪ್ಪಿಸಬೇಕೆಂದು ಮತ್ತುಅವರಿಗೂಕೂಡಾ ಮಾನವೀಯತೆಯ ನೆಲೆಯಲ್ಲಿ ನೀರು ಸಿಗಬೇಕೆಂಬ ಕಾರಣದಿಂದ, 1961ರ ಹಳೇ 2.5ಎಂಜಿಡಿ ಪೈಪು, ತುಂಬೆಯ ನೀರು ಶುದ್ಧೀಕರಣ ವ್ಯವಸ್ಥೆಇತ್ಯಾದಿಯನ್ನುಜಿಲ್ಲಾ ಪಂಚಾಯತ್‍ಗೆ ನೀಡಿ, ಅವರಕಡೆಯಿಂದ ಹಳ್ಳಿಗಳಿಗೆ ಬಹು ಗ್ರಾಮಯೋಜನೆಯಡಿಯಲ್ಲಿ ನೀರು ನೀಡುವ ವ್ಯವಸ್ಥೆ ಮಾಡಬೇಕೆಂದುಜಿಲ್ಲಾ ಪಂಚಾಯತ್‍ಯಲ್ಲಿ ನಡೆಯುವಕೆಡಿಪಿ ಸಭೆಯಲ್ಲಿ ಹಲವಾರು ಬಾರಿ ಒತ್ತಾಯಿಸಿದ್ದೇನೆ. ಆದರೆಜಿಲ್ಲಾ ಪಂಚಾಯತ್‍ಯವರುಇದಲ್ಲಿ ಸಾಕಷ್ಟು ಪ್ರಗತಿ ಮಾಡಲುಆಗದೆಇರುವುದರಿಂದಕೊನೆಗೆ ನಾನು ಕೆಯುಐಡಿಎಫ್‍ಪಿಯಲ್ಲಿ ಚರ್ಚಿಸಿ ಇದನ್ನುಅಮೃತ್‍ಯೋಜನೆಯಲ್ಲಿ ತೆಗೆದುಕೊಳ್ಳಲು ಒಪ್ಪಿಸಿದ್ದೇನೆ. ಇದರಿಂದ ನಗರಕ್ಕೆ 20% ಸೋರುವಿಕೆಯನ್ನುತಡೆಗಟ್ಟಬಹುದು.

ನಾನು ಇಷ್ಟೆಲ್ಲಾ ಮಾಡಿ, ಈಗಿನ ಶಾಸಕರುಕಾಂಗ್ರೇಸ್‍ನವರು ಏನು ಮಾಡಿದ್ದಾರೆ, ಮಾಜಿ ಶಾಸಕರು ಏನೂ ಮಾಡಿದ್ದಾರೆಎಂದು ಕೇಳುವುದಾದರೆ, ನಿಮಗೆ ಮಾಹಿತಿಕೊರತೆಅಲ್ಲದೆ ಬೇರೆಏನೆಂದು ಹೇಳಲಿ? ನಾನು ಇಷ್ಟೆಲ್ಲಾ ಮಾಡಿದ್ದೇನೆ ನೀವು ಕಳೆದ ಒಂದು ವರ್ಷದಿಂದ ನೀವೇನು ಮಾಡಿದ್ದೀರಿ? ಕೆಲಸಕ್ಕೆ ಬಾರದ ಮನವಿಗಳನ್ನು ಮಾತ್ರಕೊಟ್ಟಿದ್ದೀರಿಅಲ್ಲವೇ? ಏನು ಮಾಡದ ನೀವು ದಯವಿಟ್ಟುಇನ್ನಾದರೂ ಬೇರೆಯವರ ಮೇಲೆ ಆಪಾದನೆ ಮಾಡುವುದುನ್ನು ನಿಲ್ಲಿಸಿ.


Spread the love