ಕುಡ್ಸೆಂಪ್ ಹಗರಣದ ಕುರಿತು ಸುಳ್ಳು ಆರೋಪ ಮಾಡುವವರ ವಿರುದ್ದ ಕ್ರಿಮಿನಲ್ ಕೇಸ್; ಶಾಸಕ ಜೆ.ಆರ್.ಲೋಬೊ

Spread the love

ಕುಡ್ಸೆಂಪ್ ಹಗರಣದ ಕುರಿತು ಸುಳ್ಳು ಆರೋಪ ಮಾಡುವವರ ವಿರುದ್ದ ಕ್ರಿಮಿನಲ್ ಕೇಸ್; ಶಾಸಕ ಜೆ.ಆರ್.ಲೋಬೊ

ಮಂಗಳೂರು: ಕುಡ್ಸೆಂಪ್ ಹಗರಣವೆಂದು ಹೇಳಿಕೊಂಡು ತನ್ನ ವಿರುದ್ದ ಸುಳ್ಳು ಆರೋಪ ಮಾಡಿ ನನ್ನನ್ನು ಮಾನಸಿಕವಾಗಿ ಹಿಂಸಿಸುವ ಪ್ರಯತ್ನ ಮಾಡಲಾಗುತ್ತಿದ್ದ ಇಂಥವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಡ್ಸೆಂಪ್ ಯೋಜನೆಯ ನಿರ್ದೇಶಕನಾಗಿದ್ದ ನಾನು ಅಲ್ಲಿಂದ 2009ರಲ್ಲಿ ವರ್ಗಾವಣೆಗೊಂಡಿದ್ದು, ಆದರೆ ಕುಡ್ಸೆಂಪ್ ಯೋಜನೆಯಲ್ಲಿ ಈಗ ಮಾಡಲಾಗು್ತಿರುವ ಆರೋಪಗಳು ಕೇಳಿಬಂದಿರುವುದು 2011, 12, 13 ರಲ್ಲಿ. ಈ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸಿದ್ದು ಬಿಜೆಪಿ. ಇದರಲ್ಲಿ ನನ್ನ ಪಾತ್ರವಿಲ್ಲದೆ ಹೋದರೂ ಪ್ರತಿಪಕ್ಷದವರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದು ಇದರಿಂದ ನನಗೆ ನೋವಾಗಿದೆ. ಈ ಮೂಲಕ ನನ್ನನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದು ಇದರ ವಿರುದ್ದ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದೇನೆ ಇದೀಗ ರೀತಿ ಮಾಡಿದ ಎಲ್ಲರ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿದರು.

ಓರ್ವ ಸರ್ಕಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಅವಧಿಯಲ್ಲಿ ತನ್ನ ವಿರುದ್ದ ಯಾವುದೆ ಆರೋಪಗಳು ಕೇಳಿಬಂದಿರಲಿಲ್ಲ ಅದೇ ರೀತಿ ಕುಡ್ಸೆಂಪ್ ನಲ್ಲಿ ತಾನು ಅಧಿಕಾರಿಯಾಗಿದ್ದಾಗ 400 ಕ್ಕೂ ಅಧಿಕ ಎಂಜಿನಿಯರ್ ಗಳು, 70 ಗುತ್ತಿಗೆದಾರರು ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸಿದ್ದರು. ಈ ಪೈಕಿ ಯಾರಾದರೊಬ್ಬರು ತಾನು ಭ್ರಷ್ಟ ಎಂದು ಹೇಳಿದರೆ ಆ ಬಗ್ಗೆ ಯಾವುದೇ ರೀತಿಯ ತನಿಖೆಯನ್ನು ಎದುರಿಸಲು ಸಿದ್ದ ಎಂದರು.

ತನ್ನ ವಿರುದ್ದ ಆರೋಪದ ಬಗ್ಗೆ ಯಾವುದೇ ರೀತಿಯ ವಿಚಾರಣೆ ಬೇಕಾದರೂ ಎದುರಿಸಲು ಸಿದ್ದವಾಗಿದ್ದೇನೆ. ವೃಥಾ ಆರೋಪ ಮಾಡುತ್ತಿರುವವರು ಅದಕ್ಕೆ ಸಾಕ್ಷಿಗಳಿದ್ದರೆ ಲೋಕಾಯುಕ್ತರಿಗೆ ನೀಡಲಿ ಅದು ಬಿಟ್ಟು ಚುನಾವಣೆಯ ಕಾರಣಕ್ಕೋಸ್ಕರ ಹೇಡಿಗಳಂತೆ ಈ ರೀತಿ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ, ಯುವ ಕಾಂಗ್ರೆಸ್ ದಕ ಜಿಲ್ಲಾಧ್ಯಕ್ಷ ಮಿಥುನ್ ರೈ ಹಾಗೂ ಇತರರು ಉಪಸ್ಥಿತರಿದ್ದರು.


Spread the love