ಕುಮಾರಸ್ವಾಮಿ ಜನಪರ ಕಾಳಜಿಯುಳ್ಳ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ; ಯೋಗಿಶ್ ಶೆಟ್ಟಿ
ಉಡುಪಿ : ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿಯವರು ಶುಕ್ರವಾರ ಮಂಡಿಸಿದ ಬಜೆಟ್ ರೈತರ ಮಧ್ಯಮ ವರ್ಗದವರ ಬಡವರ ಎಲ್ಲಾ ವರ್ಗದವರ ಹಾಗೂ ವಿಶೇಷವಾಗಿ ಜನ ಸಾಮಾನ್ಯರ ಬಗ್ಗೆ ನೈಜ್ಯ ಕಾಳಜಿಯುಳ್ಳ ಐತಿಹಾಸಿಕ ಬಜೆಟ್ ಆಗಿದೆ ಎಂದು ಉಡುಪಿ ಜಿಲ್ಲಾ ಜಾತ್ಯಾತೀತ ಜನತಾದಳ ಅಧ್ಯಕ್ಷ ಯೋಗಿಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಕರಾವಳಿಯ ಹಾಗೂ ಮಲೆನಾಡಿಗೆ ಮುಖ್ಯಮಂತ್ರಿಗಳು ಈ ಬಜೆಟ್ ನಲ್ಲಿ ಅಭೂತ ಪೂರ್ವ ಕೊಡುಗೆಗಳನ್ನು ನೀಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಜಟ್ಟಿ ಮಲ್ಪೆಯಲ್ಲಿ ತ್ಯಾಜ್ಯ ನಿರ್ವಹಣಾ ಘಟಕಕ್ಕೆ 15 ಕೋಟಿ, ಕಾರ್ಕಳದಲ್ಲಿ 1500 ಹೆಕ್ಟೇರ್ ಪ್ರದೇಶಕ್ಕೆ ನಿರಾವರಿ ಸೌಲಭ್ಯ ಒದಗಿಸಲು ಎಣ್ಣೆಹೊಳೆ ಯೋಜನೆ, ಭತ್ತ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 7500 ರೂಪಾಯಿ, ಆಶಾ ಕಾರ್ಯಕರ್ತರ ಹಾಗೂ ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳ , ಬಾಣಂತಿಯರಿಗೆ ಮಾಶಾಸನ, ಹಿರಿಯ ನಾಗರಿಕರ ಮಾಶಾಸನ ಹೆಚ್ಚಳ, ವಿದ್ಯಾಭ್ಯಾಸಕ್ಕೆ ಉತ್ತೇಜನ , ಉದ್ಯೋಗ ಸೃಷ್ಟಿಗೆ ಉತ್ತೇಜನ, ಅಯುಶ್ಮಾನ್ ಭಾರತ ಕರ್ನಾಟಕ ಯೋಜನಗೆ ಚಾಲನೆ ನೀಡುವ ಮೂಲಕ ಅರೋಗ್ಯ ಸೇವೆಗೆ ಒತ್ತು, ಹಾಲಿಗೆ 6ರೂಗೆ ಪ್ರೋತ್ಸಾಹ ಧನ ಹೆಚ್ಚಳ, ಮೀನುಗಾರಿಕಾ ದೋಣಿ ನಿರ್ಮಾಣಕ್ಕೆ 50 % ಸಬ್ಸಿಡಿ ಇನ್ನಿತರ ಹಲವಾರು ಯೋಜನೆಗಳನ್ನು ಈ ಬಜೆಟ್ ನಲ್ಲಿ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.