ಕೃತಿ ವಿಕೋಪ ಸಂತ್ರಸ್ತರಿಗೆ ಶಾಸಕ ಕಾಮತ್ ಪರಿಹಾರದ ಚೆಕ್ ವಿತರಣೆ

Spread the love

ಕೃತಿ ವಿಕೋಪ ಸಂತ್ರಸ್ತರಿಗೆ ಶಾಸಕ ಕಾಮತ್ ಪರಿಹಾರದ ಚೆಕ್ ವಿತರಣೆ

ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಸುಮಾರು 190ಕ್ಕೂ ಹೆಚ್ಚು ಸಂತ್ರಸ್ತರಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ ಇಪ್ಪತ್ತೆರಡುವರೆ ಲಕ್ಷಕ್ಕೂ ಮಿಕ್ಕಿದ ಮೊತ್ತದ ಪರಿಹಾರದ ಚೆಕ್  ವಿತರಿಸಿದರು.

ಮಂಗಳೂರಿನ ಮಿನಿ ವಿಧಾನಸೌಧದ ಬಳಿ ಇರುವ ನಂದಿನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕಾಮತ್ ಅವರು ಹಿಂದಿನ ರಾಜ್ಯ ಸರಕಾರದಲ್ಲಿ ಮಳೆಯಿಂದ ಮನೆಯ ಒಳಗೆ ನೀರು ನುಗ್ಗಿ ಆಗುವ ಹಾನಿಗೆ ಕೇವಲ 3,800 ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ಆದರೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆದ ಮೇಲೆ ಅದನ್ನು ಹತ್ತು ಸಾವಿರ ರೂಪಾಯಿಗೆ ಏರಿಸಿದ್ದಾರೆ. ಅದೇ ರೀತಿಯಲ್ಲಿ ಪ್ರಕೃತಿ ವಿಕೋಪದಿಂದ ಮನೆ ಸಂಪೂರ್ಣ ಹಾನಿಯಾದರೆ ಹಿಂದಿನ ರಾಜ್ಯ ಸರಕಾರ ಕೇವಲ 95,100 ರೂಪಾಯಿ ಪರಿಹಾರ ನೀಡುತ್ತಿತ್ತು. ಇದರಿಂದ ಹೊಸ ಮನೆ ಕಟ್ಟಲು ಸಾಧ್ಯವಿಲ್ಲದೆ ಜನರು ಪೇಚಾಟಪಡುತ್ತಿದ್ದರು.

ಆದರೆ ಇತ್ತೀಚೆಗೆ ಸಿಎಂ ಯಡಿಯೂರಪ್ಪನವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಆದ ಹಾನಿ ಪರಿಶೀಲಿಸಲು ಬಂದಾಗ ಧರ್ಮಸ್ಥಳದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಂಟು ಜನ ಶಾಸಕರು ಮಾಡಿದ ಮನವಿಯನ್ನು ಪುರಸ್ಕರಿಸಿದ ಸಿಎಂ ಯಡಿಯೂರಪ್ಪನವರು ಹೊಸ ಮನೆ ಕಟ್ಟಲು ಸರಕಾರದಿಂದ ಐದು ಲಕ್ಷ ರೂಪಾಯಿ ನೀಡಿದ್ದಾರೆ. ಇನ್ನು ಮನೆ ಕಟ್ಟುವ ತನಕ ಸಂತ್ರಸ್ತರು ತೊಂದರೆ ಪಡಬಾರದು ಎನ್ನುವ ಕಾರಣಕ್ಕೆ ತಿಂಗಳಿಗೆ ಐದು ಸಾವಿರ ಮನೆ ಬಾಡಿಗೆಯನ್ನು ಕೂಡ ನೀಡುವ ವ್ಯವಸ್ಥೆ ಮಾಡಿದ್ದಾರೆ. ಈ ಎಲ್ಲಾ ಕಾರಣಕ್ಕೆ ತಾವು ವಿಶೇಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಜಪ್ಪಿನಮೊಗರು ಪ್ರದೇಶದಲ್ಲಿ ನದಿತೀರದಲ್ಲಿದ್ದ 9 ಮನೆಗಳಿಗೆ ಸಂಪೂರ್ಣ ಹಾನಿ ಸಂಭವಿಸಿದೆ. ಅವರಿಗೆ ಜಪ್ಪಿನಮೊಗರು ವಾರ್ಡಿನಲ್ಲಿಯೇ ಇನ್ನೊಂದು ಕಡೆ ಜಾಗ ಗುರುತಿಸಿ ಮನೆ ನಿರ್ಮಿಸಲಾಗುವುದು ಎಂದು ತಿಳಿಸಿದ ಶಾಸಕ ಕಾಮತ್ ಅವರು ಸಂತ್ರಸ್ತರೊಂದಿಗೆ ತಾವು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರು ಇದ್ದೇ ಇರುತ್ತೇವೆ ಎಂದು ತಿಳಿಸಿದರು. ಪದವು, ಜಪ್ಪಿನಮೊಗರು, ಬಜಾಲ್, ಬೆಂಗ್ರೆ, ಬೋಳುರು ಸಹಿತ ಕೆಲವು ಪ್ರದೇಶಗಳ ಸಂತ್ರಸ್ತರಿಗೆ ಸೋಮವಾರ ಪರಿಹಾರದ ಚೆಕ್ ವಿತರಿಸಲಾಯಿತು. ಇದಕ್ಕಾಗಿ ಶ್ರಮ ವಹಿಸಿದ ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳನ್ನು ಮುಖ್ಯಮಂತ್ರಿಯವರ ಪರವಾಗಿ ಮತ್ತು ಶಾಸಕನ ನೆಲೆಯಲ್ಲಿ ಅಭಿನಂದಿಸುವುದಾಗಿ ಶಾಸಕ ಕಾಮತ್ ತಿಳಿಸಿದರು. ಒಟ್ಟು 190ಕ್ಕೂ ಕುಟುಂಬಗಳಿಗೆ ಹತ್ತು ಸಾವಿರದಂತೆ 21 ಲಕ್ಷದ 40 ಸಾವಿರ ಮತ್ತು 95 ಸಾವಿರದಂತೆ ಐದು ಮನೆಗಳಿಗೆ ಪರಿಹಾರದ ಚೆಕ್ ಅನ್ನು ಶಾಸಕ ಕಾಮತ್ ವಿತರಿಸಿದರು. ಇನ್ನು ತಮ್ಮ ವಾರ್ಡ್ ಗಳಲ್ಲಿ ಯಾರಾದರೂ ಸಂತ್ರಸ್ತರಿಗೆ ಪರಿಹಾರದ ಚೆಕ್ ಸಿಗದೇ ಇದ್ದಲ್ಲಿ ತಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ ಮಾಹಿತಿ ನೀಡಬೇಕು ಎಂದು ಶಾಸಕ ಕಾಮತ್ ಇದೇ ಸಂದರ್ಭದಲ್ಲಿ ತಿಳಿಸಿದರು. ಮಳೆಗಾಲದ ಮೊದಲೇ ರಾಜಕಾಲುವೆ ಹಾಗೂ ಬೃಹತ್ ಹಾಗೂ ಕಿರು ಚರಂಡಿಗಳ ಹೂಳೆತ್ತಿದ ಕಾರಣ ದೊಡ್ಡ ಮಟ್ಟದಲ್ಲಿ ತೊಂದರೆ ಆಗಲಿಲ್ಲ. ಅದಕ್ಕಾಗಿ ಶ್ರಮ ವಹಿಸಿದ ಅಧಿಕಾರಿಗಳಿಗೆ ಶಾಸಕ ಕಾಮತ್ ಧನ್ಯವಾದ ಹೇಳಿದರು.

ಪಾಲಿಕೆಯ ಮಾಜಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.


Spread the love