ಕೃಷ್ಣಮೃಗ ಬೇಟೆ ಪ್ರಕರಣ ಇಬ್ಬರ ಬಂಧನ

Spread the love

ಕೃಷ್ಣಮೃಗ ಬೇಟೆ ಪ್ರಕರಣ ಇಬ್ಬರ ಬಂಧನ

ಮಂಗಳೂರು: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಠಾಣೆ ಪೊಲೀಸರು ಮತ್ತು ರೌಡಿ ನಿಗ್ರಹ ದಳದ ಪೊಲೀಸರು ಜಂಟಿಯಾಗಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ವಿಜಯಪುರ ಜಿಲ್ಲೆ ಇಂಡಿ ತಾಲೂಕು ನಿವಾಸಿಗಳಾದ ರಮೇಶ್ ಮಲ್ಲಪ್ಪ ಯಾದವಾಡ್ (51) ಮತ್ತು ರಾಜು ಬಿರಾದಾರ್ (47) ಎಂದು ಗುರುತಿಸಲಾಗಿದೆ

ಜೂನ್ 14ರಂದು ಮಂಗಳೂರು ನಗರ ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀ ನಿವಾಸ್ ಆರ್. ಗೌಡ ಇವರ ನೇತ್ರತ್ವದ ರೌಡಿ ನಿಗ್ರಹ ದಳಕ್ಕೆ ದೊರೆತ ಖಚಿತ ಮಾಹಿತಿಯಂತೆ ಪಣಂಬೂರು ಪೊಲೀಸ್ ಠಾಣೆಯ ಠಾಣಾಧಿಕಾರಿಯಾದ ಶ್ರೀ ಸತ್ಯನಾರಾಯಣ, ರೌಡಿ ನಿಗ್ರಹ ದಳದ ಅಧಿಕಾರಿ ಸಿಬ್ಬಂಧಿಗಳು ಹಾಗೂ ಮಂಗಳೂರು ಅರಣ್ಯ ವಲಯ ಅಧಿಕಾರಿಗಳು ಪಣಂಬೂರು ತಣ್ಣೀರು ಬಾವಿಯ ಬಳಿಯಲ್ಲಿ ಕಸಬಾ ಬೆಂಗರೆ ಕಡೆಗೆ ಹೋಗುವ ಕುದುರೆ ಮುಖ ಜಂಕ್ಷನ್ ಬಳಿಯಲ್ಲಿ ಮೋರಿಯ ಬಳಿಯಲ್ಲಿ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಯಾವುದೋ ವಸ್ತುವನ್ನು ಹಿಡಿದುಕೊಂಡು ನಿಂತುಕೊಂಡಿದ್ದು ನಮ್ಮ ಪೊಲೀಸ್ ಇಲಾಖೆಯ ಜೀಪನ್ನು ಕಂಡು ಗೋಣಿ ಚೀಲವನ್ನು ಅಲ್ಲಿಯೇ ಬಿಟ್ಟು ರಸ್ತೆಯಯಲ್ಲಿ ಓಡಿ ಹೋಗಲು ಪ್ರಯತ್ನಿಸಿದ್ದು ಅನುಮಾನಗೊಂಡ ಅವರುಗಳನ್ನು ಓಡಿಹೋಗಿ ಸುತ್ತುವರೆದು ಹಿಡಿದು,ಗೋಣಿಚೀಲ ಇದ್ದ ಜಾಗಕ್ಕೆ ಕರೆದುಕೊಂಡು ಬಂದು ಗೋಣಿ ಚೀಲವನ್ನ ; ಪರಿಶೀಲಿಸಿದಲ್ಲಿ ಅಕ್ಕಿ ಚೀಲದ ಒಳಗಡೆ ಒಂದು ಜಿಂಕೆಯ ಚರ್ಮಸುತ್ತಿ ಇಟ್ಟಿರುವುದು ಕಂಡುಬಂದಿರುತ್ತದೆ. ಆರೋಪಿಗಳನ್ನ ಮತ್ತು ಸದ್ರಿ ಸೊತ್ತನ್ನ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿ ನ್ಯಾಯಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಪ್ರಕರಣದ ಕಾರ್ಯಾಚರಣೆಯು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐ.ಪಿ.ಎಸ್. ಮಂಗಳೂರು ನಗರ. ಹಾಗೂ ಪೊಲೀಸ್ ಉಪ ಆಯುಕ್ತರುಗಳಾದ ಹನುಮಂತರಾಯ ಐ.ಪಿ.ಎಸ್. ಮತ್ತು ಲಕ್ಷ್ಮೀ ಗಣೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಆರ್ ಗೌಡ. ಐ.ಪಿ.ಎಸ್. ಇವರ ಮಾರ್ಗದರ್ಶನದಂತೆ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸತ್ಯ ನಾರಾಯಣ, ಮಂಗಳೂರು ಅರಣ್ಯ ವಲಯ ಅಧಿಕಾರಿ ಮತ್ತು ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂಧಿಗಳಾದ ಎ.ಎಸ್. ಐ. ಮೊಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ. ವಿಜಯಕಾಂಚನ್, ಇಸಾಕ್ ಮತ್ತು ಶರಣ್ ಕಾಳಿ ಇವರುಗಳ ಪರಿಶ್ರಮದಿಂದ ನಡೆದಿರುತ್ತದೆ.


Spread the love