ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಎಡ್ವಾನ್ಸ್ಡ್ 3 ಟೆಸ್ಲಾ ‘ಎಂಆರ್‌ಐ’ ಉದ್ಘಾಟನೆ

Spread the love

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಎಡ್ವಾನ್ಸ್ಡ್ 3 ಟೆಸ್ಲಾ ‘ಎಂಆರ್‌ಐ’ ಉದ್ಘಾಟನೆ

ಮಂಗಳೂರು, ಮಾ. 15: ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ಅಳವಡಿಸಲಾದ 3 ಟೆಸ್ಲಾ ಎಡ್ವಾನ್ಸ್ಡ್ ಎಂಆರ್‌ಐ ಅನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಶುಕ್ರವಾರ ಉದ್ಘಾಟಿಸಿದರು. ರೇಡಿಯೋ ಡಯಾಗ್ನೋಸಿಸ್ ಮತ್ತು ಇಮೇಜಿಂಗ್ ವಿಭಾಗವು ಈ ಸೌಲಭ್ಯವನ್ನು ಸ್ಥಾಪಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಹಿಲನ್, ಸಮಾಜದೊಂದಿಗೆ ಹಂಚಿಕೊಳ್ಳುವ ಪ್ರಜ್ಞೆಯನ್ನು ಹೊಂದಿರುವುದು ಕೆ.ಎಂ.ಸಿ.ಯ ಡಿಎನ್‌ಎಯಲ್ಲಿದೆ. ಮಂಗಳೂರನ್ನು ದೇಶದ ಆರೋಗ್ಯ ರಾಜಧಾನಿಯನ್ನಾಗಿ ಮಾಡಲು ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಮತ್ತು ಈ ದಿಸೆಯಲ್ಲಿ ವೈದ್ಯರು, ಸಂಶೋಧಕರು ಕೆಲಸ ಮಾಡಬೇಕೆಂದು ಕೇಳಿಕೊಂಡರು.

ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಕಡುಬಡವರು ಸಹ ಸುಧಾರಿತ ರೋಗನಿರ್ಣಯ ಸೌಲಭ್ಯಗಳನ್ನು ಪಡೆಯಬಹುದು ಎಂದು ಖಚಿತಪಡಿಸಿಕೊಳ್ಳಲು ನಾವು 3 ಟೆಸ್ಲಾ ಸುಧಾರಿತ ಎಂಆರ್‌ಐತAತ್ರಜ್ಞಾನವನ್ನು ಅತ್ತಾವರದಲ್ಲಿ ಸ್ಥಾಪಿಸಿದ್ದೇವೆ. ಹೊಸ ಸಂಶೋಧನೆಗಳ ನಿಜವಾದ ಮೌಲ್ಯವು ಅವುಗಳನ್ನು ಬಡವರಿಗೆ ಕೈಗೆಟುಕುವ ವೆಚ್ಚದಲ್ಲಿ ಲಭ್ಯವಾಗುವಂತೆ ಮಾಡುವುದರಲ್ಲಿದೆ. ಈ ಸೌಲಭ್ಯವು ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ನಾವು ರೇಡಿಯೋಡಯಾಗ್ನೋಸಿಸ್ ಮತ್ತು ಇಮೇಜಿಂಗ್ ವಿಭಾಗದಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿರುವುದರಿAದ ನಾವು ಅತ್ತಾವರವನ್ನು ಅನುಸ್ಥಾಪನೆಗೆ ಆಯ್ಕೆ ಮಾಡಿದ್ದೇವೆ, ಇದು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯಗಳಿಗೆ ತೆರೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ಅವರು ಇತ್ತೀಚಿನ, ಅತ್ಯಾಧುನಿಕ 3 ಟೆಸ್ಲಾ ಎಂಆರ್‌ಐಸ್ಥಾಪನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇದು ವಿವಿಧ ವಿಭಾಗಗಳಲ್ಲಿ ರೋಗನಿರ್ಣಯದ ನಿಖರತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ವಿದ್ಯಾರ್ಥಿಗಳು, ಬೋಧಕರು ಮತ್ತು ರೋಗಿಗಳಿಗೆ ಸಮಾನವಾಗಿ ಪ್ರಯೋಜನವನ್ನು ನೀಡುತ್ತದೆ. ಕಳೆದ ಎರಡು ವರ್ಷಗಳಲ್ಲಿ, ರೇಡಿಯೋ ರೋಗನಿರ್ಣಯ ವಿಭಾಗವು ಗಮನಾರ್ಹ ರೂಪಾಂತರಕ್ಕೆ ಒಳಗಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾಹೆ ಮಂಗಳೂರು ಕ್ಯಾಂಪಸ್‌ನ ಸಹಕುಲಪತಿ ಡಾ. ದಿಲೀಪ್ ನಾÊಕ್, ಮಾಹೆ ಬೋಧನಾ ಆಸ್ಪತ್ರೆಗಳ ಸಿಇಒ ಡಾ. ಆನಂದ್ ವೇಣುಗೋಪಾಲ್, ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ, ಉಪ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಮಡಿ ಕೆ.ಎಂ.ಸಿ. ಮಂಗಳೂರಿನ ಅಸೋಸಿಯೇಟ್ ಡೀನ್ಸ್ ಮತ್ತಿತರರು ಉಪಸ್ಥಿತರಿದ್ದರು.

ಕೆಎಂಸಿ ಮಂಗಳೂರು ಡೀನ್ ಡಾ. ಬಿ.ಉನ್ನಿಕೃಷ್ಣನ್ ಸ್ವಾಗತಿಸಿ, ರೇಡಿಯೋ ಡಯಾಗ್ನೋಸಿಸ್ ಮತ್ತು ಇಮೇಜಿಂಗ್ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ರೈ ವಂದಿಸಿದರು. ಡಾ. ಪರಮ್ ಕುಕ್ರೇಜಾ ಮತ್ತು ಡಾ. ವಿನಯ್ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.


Spread the love
Subscribe
Notify of

0 Comments
Inline Feedbacks
View all comments