ಕೆಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಂಪರ್ಕ್ ಫಾರ್ ಸಮರ್ಥನ್
ಮಂಗಳೂರು: ಕೇಂದ್ರ ಸರ್ಕಾರದ ಯೋಜನೆಗಳನ್ನು ಮಾಧ್ಯಮಗಳ ಮೂಲಕ ಜನಮನಕ್ಕೆ ತಲುಪಿಸಿ, ಅದರ ಸದುಪಯೋಗವನ್ನು ಪಡೆಯುವಂತೆ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ವಿನಂತಿಸಿದ್ದಾರೆ.
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ತಾಯಂದಿರಿಗೆ ನೆರವು
- ವಿಶ್ರಾಂತಿ ಪಡೆಯಲು ಮತ್ತು ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ನೆರವಾಗುವಂತೆ 19 ವರ್ಷ ಮೇಲ್ಪಟ್ಟ ವಿವಾಹಿತ ಬಾಣಂತಿ ಹಾಗೂ ಗರ್ಭಿಣಿ ತಾಯಂದಿರಿಗೆ 6,000 ರೂ. ವರೆಗೆ ಉತ್ತೇಜನ ಧನ ನೀಡಲಾಗುತ್ತದೆ. ಈ ಯೋಜನೆಯು 01-01-2017ರಿಂದ ಪ್ರಾರಂಭವಾಗಿದೆ. ಪೌಷ್ಠಿಕ ಆಹಾರ, ಲಸಿಕೆ ಮತ್ತು ಆಸ್ಪತ್ರೆಯ ಖರ್ಚು ವೆಚ್ಚ ಭರಿಸಲು ಈ ಯೋಜನೆಯು ಸಹಕಾರಿಯಾಗಿದೆ.
- ಯೋಜನೆಯ ಫಲಾನುಭವಿಯು ಭಾರತೀಯ ಪೌರತ್ವ ಪಡೆದವರಾಗಿರಬೇಕು.
- ಒಬ್ಬ ಸ್ತ್ರೀಯ ಜೀವಿತಾವಧಿಯ ಎರಡು ಯಶಸ್ವಿ ಹೆರಿಗೆಗೆ ಮಾತ್ರ ಈ ಯೋಜನೆಯ ಉಪಯೋಗ ಪಡೆಯಬಹುದು.
- ಗರ್ಭಿಣಿಯಾದ ಮೊದಲ ಮೂರು ತಿಂಗಳಿಗೆ 3,000 ರೂ. ಮತ್ತು ಹೆರಿಗೆ ಸಂದರ್ಭದಲ್ಲಿ 1,500 ರೂ. ಮತ್ತು ಹೆರಿಗೆಯಾದ 3 ತಿಂಗಳ ನಂತರ 1,500 ರೂ. ಗಳಂತೆ ದೊರಕುತ್ತದೆ.
- ಈ ಯೋಜನೆಯು ಸರ್ವಧರ್ಮದ ತಾಯಂದಿರಿಗೂ ಅನ್ವಯಿಸುತ್ತದೆ.
- 26-12-2017ರ ವರೆಗೆ 51,69,987 ಮಹಿಳೆಯರು ಯೋಜನೆಯ ಉಪಯೋಗ ಪಡೆದಿದ್ದಾರೆ. ಮತ್ತು 2,13,931 ಜನ ಮಹಿಳೆಯರು ನೋಂದಾಯಿತರಾಗಿದ್ದಾರೆ.
ಸಂಪರ್ಕ ಮಾಹಿತಿ: ಹತ್ತಿರದ ಅಂಗನವಾಡಿ ಕಾರ್ಯಕರ್ತೆಯನ್ನು ಸಂಪರ್ಕಿಸಿ, ಮಾಹಿತಿ ಪಡೆಯಬಹುದು.
ಇಂದ್ರಧನುಷ್ ಮಿಷನ್
ಎರಡು ವರ್ಷ ಕೆಳಗಿನ ಮಕ್ಕಳು ಮತ್ತು ಬಾಣಂತಿಯರಿಗೆ ತಡೆಗಟ್ಟಬಹುದಾದ ರೋಗಗಳಾದ ಡಿಫ್ತೀರಿಯಾ, ನಾಯಿಕೆಮ್ಮು, ಧನುರ್ವಾಯು, ಪೋಲಿಯೊ, ಕ್ಷಯ, ದಡಾರ, ಹೈಪಟೈಟಿಸ್-ಬಿ, ರುಬೆಲ್ಲಾ, ಜಪಾನ್ ಆನೆಕಾಲು ರೋಗ, ರೋಪಾ ವೈರಸ್, ನಿಮೋನಿಯಾ ಇವುಗಳಿಂದ ರಕ್ಷಣೆಯನ್ನು ಪಡೆಯುವ ಮುಂಜಾಗೃತ ಕ್ರಮವಾಗಿ ಲಸಿಕೆಯನ್ನು ನೀಡಿ ಆರೋಗ್ಯ ಕಾಪಾಡುವುದು.
- 3.15 ಕೋಟಿ ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
- 80.63 ಲಕ್ಷ ಗರ್ಭಿಣಿ ಸ್ತ್ರೀಯರಿಗೆ ರೋಗ ನಿರೋಧಕವನ್ನು ನೀಡಲಾಗಿದೆ.
ಸಂಪರ್ಕ ಮಾಹಿತಿ : ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ, ಮಾಹಿತಿ ಪಡೆಯಬಹುದು.
ಪ್ರಧಾನಮಂತ್ರಿ ಆವಾಜ್ ಯೋಜನೆ (ಅರ್ಬನ್ ಮತ್ತು ಗ್ರಾಮೀಣ)
2022ರ ಒಳಗಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಸ್ವಂತ ಮನೆ ಹೊಂದಿರಬೇಕೆಂಬ ಆಶಯದೊಂದಿಗೆ ಈ ಯೋಜನೆಯು ಅನುಷ್ಠಾನಗೊಂಡಿರುತ್ತದೆ. ಸ್ಲಂ ಪ್ರದೇಶಗಳನ್ನು ನಿರ್ಮೂಲನೆ ಮಾಡುವುದು ಪ್ರಥಮ ಆದ್ಯತೆ ಮತ್ತು ಸ್ವಂತ ಮನೆ ಹೊಂದಿರುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
- ಆರ್ಥಿಕವಾಗಿ ಹಿಂದುಳಿದ ವರ್ಗ : ಅಂದರೆ ವಾರ್ಷಿಕ ಆದಾಯ ಮೂರು ಲಕ್ಷಕ್ಕಿಂತ ಕಡಿಮೆ ಇರುವ ವ್ಯಕ್ತಿ. ಈ ವ್ಯಕ್ತಿಗೆ 70 ವರ್ಷ ಮೀರಿರಬಾರದು. ಶೇಕಡ 6% ಬಡ್ಡಿಯ ಮೇಲೆ ಸಹಾಯಧನ ನೀಡಲಾಗುತ್ತದೆ. ಒಟ್ಟು ಮನೆಯ ವಿಸ್ತೀರ್ಣ 322 sq ಜಿeeಣ ಮೀರಿರಬಾರದು. ಈ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 6 ಲಕ್ಷ ವರೆಗೆ ಸಾಲ ನೀಡಲಾಗುತ್ತದೆ.
- ಮಧ್ಯಮ ಆದಾಯವರ್ಗ : ಅಂದರೆ ವಾರ್ಷಿಕ ಆದಾಯ 12 ಲಕ್ಷ ಇರುವವರಿಗೆ 9 ಲಕ್ಷ ವರೆಗೆ ಸಾಲ ನೀಡಲಾಗುತ್ತದೆ. ಅದರಲ್ಲಿ ಶೇಕಡ 4% ಬಡ್ಡಿಯ ಮೇಲೆ ಸಹಾಯಧನ ನೀಡಲಾಗುತ್ತದೆ. ಸಾಲ ಅವಧಿ ಇಪ್ಪತ್ತು ವರ್ಷ ಮನೆಯ ಒಟ್ಟು ವಿಸ್ತೀರ್ಣ 1291 sq ಜಿeeಣ ಮೀರಿರಬಾರದು.
- ಮಧ್ಯಮ ವರ್ಗ 2 : ಅಂದರೆ 18 ಲಕ್ಷ ವಾರ್ಷಿಕ ಆದಾಯ ಇರುವವರು. ಇವರಿಗೆ 12 ಲಕ್ಷ ವರೆಗೆ ಸಾಲ ನೀಡಲಾಗುತ್ತದೆ. ಅದರಲ್ಲಿ ಶೇಕಡ 3% ಬಡ್ಡಿಯ ಮೇಲೆ ಸಹಾಯಧನ ನೀಡಲಾಗುತ್ತದೆ. ಮನೆಯ ಒಟ್ಟು ವಿಸ್ತೀರ್ಣ 1614 ಇರಬೇಕು. 2022ರ ಒಳಗಾಗಿ ಒಟ್ಟು ಎರಡು ಕೋಟಿ ಮನೆ ನಿರ್ಮಾಣದ ಗುರಿ ಹೊಂದಿದೆ.
- ಅರ್ಜಿ ಸಲ್ಲಿಸುವ ವಿಧಾನ : ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸುವುದು.
Online : www.pmis.gov.in ಮೂಲಕ ಅರ್ಜಿ ಸಲ್ಲಿಸಬಹುದು.
2019ರ ಮಾರ್ಚ್ 31ನೇ ತಾರೀಕು ಈ ಯೋಜನೆಯಲ್ಲಿ ಹೆಸರು ನೋಂದಾಯಿಸಲು ಕೊನೆಯ ದಿನ ಆಗಿರುತ್ತದೆ.
ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ
ದೇಶದ ಪ್ರತಿ ಹಳ್ಳಿಗಳಿಗೆ 24×7 ನಿರಂತರವಾಗಿ ವಿದ್ಯುತ್ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಎಪ್ರಿಲ್ 2015ರಲ್ಲಿ 19,679 ವಿದ್ಯುತ್ ಸಂಪರ್ಕವಿಲ್ಲದ ಗ್ರಾಮಗಳಿದ್ದು ಇದೀಗ ಅವುಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿ ಭಾರತದ ಪ್ರತಿ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಒದಗಿಸಿದ ಕೀರ್ತಿ ಮೋದಿ ಸರಕಾರಕ್ಕೆ ಸಲ್ಲುತ್ತದೆ.
ಸ್ವಚ್ಛ ಭಾರತ ಅಭಿಯಾನ
ಒಟ್ಟು 26,564 ಸ್ವಚ್ಛ ಭಾರತ ಅಭಿಯಾನಗಳು ನಡೆದಿದೆ. ಭಾರತದ ಪ್ರತಿಯೊಂದು ಗಲ್ಲಿ ರಸ್ತೆ, ಹಳ್ಳಿ, ನಗರ ಹಾಗೂ ಮೂಲಭೂತ ಸೌಕರ್ಯಗಳನ್ನು ಶುಚಿಯಾಗಿರಿಸುವುದೇ ಈ ಯೋಜನೆಯ ಮೂಲೋದ್ಧೇಶ.
ಈ ಯೋಜನೆಯಡಿ ಇದುವರೆಗೆ 7,95,60,245 ಶೌಚಾಲಯ ನಿರ್ಮಾಣವಾಗಿದೆ. 4,06,592 ಹಳ್ಳಿಗಳು, 419 ಜಿಲ್ಲೆಗಳು, 19 ರಾಜ್ಯಗಳು ಬಯಲು ಶೌಚಮುಕ್ತಗೊಂಡಿದೆ.