ಕೆಥೊಲಿಕ್ ಸಭಾದಿಂಧ ಕೇಮಾರುಸ್ವಾಮೀಜಿಯೊಂದಿಗೆ ದೀಪಾವಳಿ ಶುಭಾಶಯ ವಿನಿಮಯ
ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಪದಾಧಿಕಾರಿಗಳು ಮಂಗಳವಾರ ಕೇಮಾರು ಸಾಂದಿಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿಯವರನ್ನು ಭೇಟಿ ಮಾಡಿ ದೀಪಾವಳಿಯ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಭೇಟಿಯ ವೇಳೆ ಸ್ವಾಮೀಜಿಯವರು ಕೆಥೊಲಿಕ್ ಸಭಾದ ಪದಾಧಿಕಾರಿಗಳಿಗೆ ತಮ್ಮ ಆಶ್ರಮದ ಕುರಿತು ಪರಿಚಯ ಮಾಡಿದರು ಅಲ್ಲದೆ ಧರ್ಮ ಸೌಹಾರ್ದತೆಯನ್ನು ಬೆಳೆಸುವಲ್ಲಿ ಪರಸ್ಪರ ಮಾತುಕತೆಗಳು ನಡೆಸುವುದರ ಮೂಲಕ ಸಮಾಜದಲ್ಲಿ ಸಾಮರಸ್ಯ ಮೂಡಿಸುವುದರ ಬಗ್ಗೆ ಕೂಡ ಚರ್ಚೆಯನ್ನು ನಡೆಸಲಾಯಿತು.
ಈ ವೇಳೆ ಕೆಥೊಲಿಕ್ ಸಭಾ ವತಿಯಿಂದ ಸ್ವಾಮೀಜಿಯವರನ್ನು ಗೌರವಿಸಲಾಯಿತು ಪ್ರತಿಯಾಗಿ ಸ್ವಾಮೀಜಿಯವರು ಸಹ ಕೆಥೊಲಿಕ್ ಸಭಾ ಪದಾಧಿಕಾರಿಗಳಿಗೆ ಶಾಲು ಹೊದಿಸಿ ಗೌರವಿಸಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ನಿಕಟಪೂರ್ವ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷೆ ಮೇರಿ ಡಿಸೋಜಾ, ಸಹ ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಲೆಕ್ಕಪರಿಶೋಧಕರಾದ ಪಿ.ಕೆ. ಡಿಸೋಜಾ, ಶಿರ್ವ ವಲಯಾಧ್ಯಕ್ಷೆ ಮರಿಯಾ ಜೆಸಿಂತಾ ಡಿಸೋಜಾ ಹಾಗೂ ಇತರ ಪದಾಧಿಕಾರಿಗಳಉಪಸ್ಥಿತರಿದ್ದರು.