Spread the love
ಕೆಲಸಕ್ಕೆಂದು ಹೋದ ಮೂಡುಬೆಳ್ಳೆಯ ಯುವಕ ನಾಪತ್ತೆ
ಉಡುಪಿ: ನಗರದ ಶೋರೂಮ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಉಡುಪಿ ತಾಲೂಕು ಮೂಡುಬೆಳ್ಳೆಯ ಮಡಿಕೆಟ್ಟು ತಿರ್ಲಪಕ್ಕೆ ನಿವಾಸಿ ಜಯಪ್ರಕಾಶ್ (26) ಎಂಬ ಯುವಕ ಫೆ.27ರಂದು ಕೆಲಸಕ್ಕೆಂದು ಮನೆಯಿಂದ ಹೋದವರು ಮರಳಿ ಬಾರದೇ ನಾಪತ್ತೆಯಾಗಿದ್ದಾರೆ.
175 ಸೆ.ಮೀ. ಎತ್ತರ, ಸಾದಾರಣ ಮೈಕಟ್ಟು, ಎಣ್ಣೆ ಕಪ್ಪು, ದುಂಡು ಮುಖ ಹೊಂದಿದ್ದು ಹಿಂದಿ, ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.
Spread the love