ಕೆಸಿಎಫ್ ಅಲ್ ಹಸ್ಸ ಸೆಕ್ಟರ್(ದಮ್ಮಾಂ) ವತಿಯಿಂದ ಸ್ವಾತಂತ್ರೋತ್ಸವ
ಸೌದಿಅರೇಬಿಯಾ: ಕೆಸಿಎಫ್ ಅಲ್ ಹಸ್ಸ ಸೆಕ್ಟರ್(ದಮ್ಮಾಂ) ವತಿಯಿಂದ ಅತಿ ವಿಜೃಂಭಣೆಯಿಂದ ಸ್ವಾತಂತ್ರೋತ್ಸವ ದಿನಾಚರಣೆ ಹಫೂಫ್ ಫುಟ್ಬಾಲ್ ಸ್ಟೇಡಿಯಂ ನಲ್ಲಿ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮವನ್ನು ಉಸ್ತಾದ್ ನೌಶಾದ್ ಅಮಾನಿ ಅವರು ದುಃಅ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಧ್ವಜಾರೋಹಣ ಕಾರ್ಯಕ್ರಮವನ್ನು ಉದ್ಯಮಿ ಹಾಜಿ ಮುಹಮ್ಮದ್ ಶಾಫಿ ಕುದಿರ್ ನೆರವೇರಿಸಿ ಮಾತನಾಡಿ , ಸ್ವಾತಂತ್ರ ಹೋರಾಟದಲ್ಲಿ ಸರ್ವ ಧರ್ಮೀಯರ ಪಾಲು ಇದೆ. ಸಮಸ್ತ ಭಾರತೀಯರಿಗೆ ಸಮಪಾಲು ಸಮಬಾಳು ನಮ್ಮ ದೇಶದ ಧ್ಯೇಯವಾಗಿದೆ. ಭಾರತ ಜಗತ್ತಿನ ಅತಿದೊಡ್ಡ ಜಾತ್ಯಾತೀತ ರಾಷ್ವಾಗಿದ್ದು, ದೇಶದ ಏಳಿಗೆಗೆ ಮತಾಂಧತೆ ಮಾರಕವಾಗಿದೆ ಎಂದರು.
ಉದ್ಯಮಿ ಅಶ್ರಫ್ ಪ್ರವಾಸಿ ಮಾತನಾಡಿ ಮಹಾತ್ಮ ಗಾಂಧಿ ಕಂಡ ಕನಸಿನ ಭಾರತ ನಿರ್ಮಾಣವಾಗ ಬೇಕಾದರೆ ಯುವ ಶಕ್ತಿ ಒಂದಾಗ ಬೇಕು. ನಮ್ಮ ಭಾರತ ಯುವ ಶಕ್ತಿಯಿಂದ ತುಂಬಿದ ರಾಷ್ಟ್ರ.ಯುವಕರು ಬಂಡೆ ಕಲ್ಲು ಇದ್ದಂತೆ ಯುವಕರು ಒಂದಾದರೆ ಜಗತ್ತಿನಲ್ಲಿಯೇ ಪ್ರಥಮ ಸ್ಥಾನ ನಮ್ಮ ದೇಶದ ಪಾಲಿಗೆ ಎಂದು ಅಭಿಪ್ರಾಯ ಪಟ್ಟರು.
ಅಲ್ ಹಸ್ಸ ಸೆಕ್ಟರ್ ಪ್ರ.ಕಾರ್ಯದರ್ಶಿ ಇಸ್ಹಾಕ್ ಫಜೀರ್ ಅವರು, ಕೆಸಿಎಫ್ ನ ಸಮಾಜಮುಖಿ ಕಾರ್ಯವನ್ನು ವಿವರಿಸಿ ಅರೇಬಿಯನ್ ರಾಷ್ಟ್ರಗಳಂತೆ ಮದ್ಯರಾತ್ರಿ ಕನ್ಯೆಯೊಬ್ಬಳು ನಡೆದಾಡುವಂತ ಕಾಲ ಬಂದರೆ ಮಾತ್ರ ಭಾರತ ಸ್ವಾತಂತ್ರವಾಗಿದೆ ಅನ್ನ ಬಹುದು ಇಲ್ಲದಿದ್ದಲ್ಲಿ ಭಾರತಕ್ಕೆ ಸ್ವಾತಂತ್ರ ಸಿಕ್ಕಿರುವುದು ಒಂದು ಭ್ರಮೆ ಅಷ್ಟೇ ಎಂದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ನಾಯಕ ಅಶ್ರು ಬಜ್ಪೆ,ನೌಶಾದ್ ಅಮಾನಿ ಉಸ್ತಾದ್,ಅಶ್ರಫ್ ಪ್ರವಾಸಿ,ಹಬೀಬ್,ಜನಾಬ್ ಮುಹಮ್ಮದ್ ಶಾಫಿ ಕುದಿರ್, ಕೆಸಿಎಫ್ ಸೆಕ್ಟರ್ ಅದ್ಯಕ್ಷ ಹಾರೀಸ್ ಕಾಜೂರ,ಅಬೂಬಕ್ಕರ್ ಕಿಲ್ಲೂರು ಉಪಸ್ಥಿತಿಯಿದ್ದರು.
ಕಾರ್ಯಕ್ರಮದ ಯಶಸ್ವಿಗೆ ಪರಿಸರ ಪ್ರದೇಶದ ಕೆಸಿಎಫ್ ಕಾರ್ಯಕರ್ತರು,ಅನಿವಾಸಿ ಕನ್ನಡಿಗರು ಸಾಥ್ ಕೊಟ್ಟರು.
ಕೆಸಿಎಫ್ ಸೆಕ್ಟರ್ ಅದ್ಯಕ್ಷ ಹಾರೀಸ್ ಕಾಜೂರ್ ಧನ್ಯವಾದ ಅರ್ಪಿಸಿದರು.