ಕೊಂಕಣಿ ಕುಟಮ್ ಬಾಹ್ರೇಯ್ನ್  ಹದಿನಾಲ್ಕನೇ ಕೊಂಕಣಿ ಕುಟಮ್ ಪ್ರಶಸ್ತಿ- 2015 ರ ವಿಜೇತರು ಶ್ರೀ ಎಡ್ವಿನ್ ಜೆ.ಎಫ್. ಡಿಸೋಜಾ, ಮಂಗಳೂರು

Spread the love

ಮಂಗಳೂರು: ಕೊಂಕಣಿ ಭಾಷೆ, ಕಲೆ ಮತ್ತು ಸಂಸ್ಕøತಿಯ ಅಭಿವೃದ್ಧಿಗಾಗಿ, ಕೊಂಕಣಿ ಭಾಷಾ ಕಲಾಭಿಮಾನಿಗಳಿಂದ 2000 ಇಸವಿಯಲ್ಲಿ ಬಾಹ್ರೇಯ್ನ್‍ನಲ್ಲಿ ಅಸ್ಥಿತ್ವಕ್ಕೆ ಬಂದ ಮೊದಲ ಕೊಂಕಣಿ ಸಂಸ್ಥೆ ‘ಕೊಂಕಣಿ ಕುಟಮ್’. ಕಳೆದ 14 ವರ್ಷಗಳಿಂದ ಬಾಹ್ರೇಯ್ನ್‍ನಲ್ಲಿ, ಪ್ರತೀ ವರ್ಷ ಊರಿನಲ್ಲಿ ಆಚರಿಸುವಂತೆ ಕೊರಳ ಹಬ್ಬ (ಮೊಂತಿ ಫೆಸ್ತ್), 4 ರಿಂದ 18 ವರ್ಷದವರೆಗಿನ ಮಕ್ಕಳಿಗೆ ಕೊಂಕಣಿ ಗಾಯನ, ಭಾಷಣ ಹಾಗೂ ನೃತ್ಯ ಸ್ಪರ್ಧೆಗಳನ್ನೂ, ನಮ್ಮೂರಿನಿಂದ ಪ್ರತೀ ವರ್ಷ 4 ರಿಂದ 5 ಕಲಾವಿದರನ್ನು ಬಾಹ್ರೆಯ್ನ್‍ಗೆ ತರಿಸಿ ಅದ್ದೂರಿಯ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಜೊತೆಗೆ ಕೊಂಕಣಿ ಸಾಹಿತ್ಯ ಅಥವಾ ಸಾದರ ಕಲೆ ಮೂಲಕ ಕೊಂಕಣಿ ಭಾಷೆಯನ್ನು ಶ್ರೀಮಂತಗೊಳಿಸಿದ ಒಬ್ಬ ಕೊಂಕಣಿ ಸಾಹಿತಿ ಅಥವಾ ಕಲಾವಿದನನ್ನು ಆಯ್ಕೆ ಮಾಡಿ ಪ್ರತೀ ವರ್ಷ ತಾಯ್ನಾಡಿನಲ್ಲಿ ಅದ್ದೂರಿಯ ಸಾಂಭ್ರಮಿಕ ಕಾರ್ಯಕ್ರಮವನ್ನು ಆಯೋಜಿಸಿ, ರು. 50,000 ನಗದು, ಪ್ರಶಸ್ತಿ, ಸನ್ಮಾನಪತ್ರದೊಂದಿಗೆ ಸನ್ಮಾನಿಸುತ್ತಾ ಬಂದಿದೆ.

a

ಕಳೆದ 13 ವರ್ಷಗಳಲ್ಲಿ  ಶ್ರೀ ಮಾವ್ರಿಸ್ ಶಾಂತಿಪುರ, ಶ್ರೀ ಬೆನ್ನಾ ರುಜಾಯ್, ಶ್ರೀ ಮಿಕ್‍ಮ್ಯಾಕ್ಸ್, ಶ್ರೀ ಡೊಲ್ಫಿ ಕಾಸ್ಸಿಯಾ, ಶ್ರೀ ಮೆಲ್ವಿನ್ ರೊಡ್ರಿಗಸ್, ಶ್ರೀ ಎರಿಕ್ ಒಝೇರಿಯೊ, ಡಾ| ಎಡ್ವರ್ಡ್ ನಜ್ರೆತ್, ಶ್ರೀ ವಿಲ್ಫಿ ರೆಬಿಂಬಸ್, ಶ್ರೀ ಎಡಿ ನೆಟ್ಟೊ, ಶ್ರೀ ಸ್ಟೇನ್ ಅಗÉೀರಾ, ಶ್ರೀ ವಲ್ಲಿ ವಗ್ಗ, ಶ್ರೀ ಆವಿತಾಸ್ ಎಡೊಲ್ಫಸ್ ಕುಟಿನ್ಹಾ ಹಾಗೂ ಶ್ರೀ ಸಿರಿಲ್ ಜಿ. ಸಿಕ್ವೇರಾ ಇವರಿಗೆ ಈ ಪ್ರಶಸ್ತಿಯು ಲಭಿಸಿರುತ್ತದೆ.

ರಿಚರ್ಡ್ ಮೊರಾಸ್ ತಾಕೊಡೆ ಇವರು ಸಂಘಟನೆಯ ಸ್ಥಾಪಕರಾಗಿದ್ದು, 15ವರ್ಷ ಸಂಚಾಲಕರಾಗಿ ಸಂಘಟನೆಯನ್ನು ನಡೆಸಿ, ಇದೀಗ ಸ್ಥಳೀಯ ಸಂಚಾಲಕರಾಗಿ ಪ್ರಸ್ತುತ  ಹೆನ್ರಿ ಡಿ ಅಲ್ಮೇಡಾ ಅವರಿಗೆ ಸಂಚಾಲಕರಾಗಿ ಹುದ್ದೆಯನ್ನು ಹಸ್ತಾಂತರಿಸಲಾಗಿದ್ದು, ರೊನಾಲ್ಡ್ ಫೆರ್ನಾಂಡಿಸ್, ಸ್ಟ್ಯಾನಿ ಡಿಸೋಜಾ, ವಾಲ್ಟರ್ ನೊರೊನ್ಹಾ ಮತ್ತು ಸಂಜಯ್ ಸಿಕ್ವೇರಾ ಮುಂತಾದವರು ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ,  ರಾಹುಲ್ ಜಾಹೀರಾತು ಸಂಸ್ಥೆಯ ನಿರ್ದೇಶಕರಾದ ಶ್ರೀ ಟೈಟಸ್ ನೊರೊನ್ಹಾ ಇದರ ಸ್ಥಳೀಯ ಸಂಘಟಕರಾಗಿದ್ದಾರೆ.

ಕೊಂಕಣಿ ಭಾಷಾ ನಿಪುಣರ ಕಾರ್ಯಕಾರಿ ಸಮಿತಿಯು ನಿರ್ಣಯಿಸಿರುವಂತೆ ಈ ಪ್ರಶಸ್ತಿಯನ್ನು ಜೀವಮಾನ ಸಾಧನೆಗಾಗಿ ಶ್ರೀ ಎಡ್ವಿನ್ ಜೆ. ಎಫ್. ಡಿಸೋಜಾ, ಮಂಗಳೂರು ಇವರಿಗೆ ನೀಡಲು ನಿರ್ಧರಿಸಿದೆ. ಶ್ರೀಯುತರು, ಕೊಂಕಣಿ ಭಾಷೆಗೆ ನೀಡಿದ ಸÉೀವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಸೂಕ್ತ ವ್ಯಕ್ತಿಯೆಂದು ಸಮಿತಿಯು ತೀರ್ಮಾನಿಸಿದೆ.  ಕೊಂಕಣಿ ಭಾಷೆಗಾಗಿ ಅವರ ಸೇವೆ, ಹಾಗೂ ಕೊಂಕಣಿ ಭಾಷೆಯ ಉತ್ತಮ ಲೇಖಕರಾಗಿ ಅವರು ನೀಡಿದ ಜೀವಮಾನದ ವಿವಿಧ ಸೇವೆಗಳು ಈ ಪ್ರಶಸ್ತಿಗೆ ಅವರ ಅರ್ಹತೆಯನ್ನು ನಿರೂಪಿಸಿವೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು, ಅಕ್ಟೋಬರ್ 10, 2015ರ ಶನಿವಾರದಂದು, ಸಂಜೆ 6.30 ಗಂಟೆಗೆ, ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಹಾಲ್, ಬೆಂದುರ್, ಮಂಗಳೂರು ಇಲ್ಲಿ ಜರುಗಲಿರುವುದು. ಕಾರ್ಯಕ್ರಮಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಮುಖ್ಯ ಅತಿಥಿಯಾಗಿ, ‘ಉಜ್ವಾಡ್’ ಕೊಂಕಣಿ ಪಾಕ್ಷಿಕದ ಸಂಪಾದಕರಾದ ಫಾ. ಚೇತನ್ ಲೋಬೊ ಅವರು ಗೌರವ ಅತಿಥಿಯಾಗಿ ಭಾಗವಹಿಸಲಿರುವರು.

ತಾವು ದಯವಿಟ್ಟು ಈ ಕಾರ್ಯಕ್ರಮಕ್ಕೆ ಆಗಮಿಸಿ, ಕಾರ್ಯಕ್ರಮದ ಮುಂಚೆ ಹಾಗೂ ಆನಂತರ ಸಾರ್ವಜನಿಕರಿಗೆ ಸುದ್ದಿಯನ್ನು ತಲುಪಿಸಬೇಕಾಗಿ ವಿನಂತಿಸುತ್ತೇವೆ.

ಪತ್ರಿಕಾ ಗೋಷ್ಟಿಯಲ್ಲಿ ಹಾಜರಿದ್ದವರು: ರಿಚರ್ಡ್ ಮೊರಾಸ್ – ಸ್ಥಳೀಯ ಸಂಚಾಲಕರು, ಟೈಟಸ್ ನೊರೊನ್ಹಾ – ಸ್ಥಳೀಯ ಸಂಘಟಕರು ಮೆಲ್ವಿನ್ ರೊಡ್ರಿಗಸ್, ಸಿಜ್ಯೆಸ್ ತಾಕೊಡೆ, ವಿಲ್ಯಮ್ ಪಾಯ್ಸ್ – ಕಾರ್ಯಕಾರಿ ಸಮಿತಿ ಸದಸ್ಯರು: ವಿತೊರಿ ಕಾರ್ಕಳ್, ಜ್ಯೊ ಕುವೆಲ್ಲೊ, ಮನು ಬಾಹ್ರೇಯ್ನ್, ಲೆಸ್ಲಿ ರೇಗೊ, ದಯಾ ವಿಕ್ಟರ್ ಲೋಬೊ


Spread the love